ವಿಜಯನಗರ…ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಮತ್ತು ಮೊದಲ ಕರಡಿಧಾಮ ಎಂಬ ಹೆಗ್ಗಳಿಕೆ ಪಡೆದಿರುವ ದರೋಜಿ ಕರಡಿ ಧಾಮ ಇದೀಗ ಪ್ರವಾಸಿಗರನ್ನ ತನ್ನತ್ತ ಸೆಳೆಯಲು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಇದುವರೆಗೆ ಖಾಸಗಿ ವಾಹನಗಳನ್ನೇ ನೇರವಾಗಿ ಕರಡಿಧಾಮದ ಒಳಗೆ ಬಿಡುತಿದ್ದ ಅರಣ್ಯ ಇಲಾಖೆ ಇನ್ಮುಂದೆ ತನ್ನದೇ ವಾಹನಗಳ ಮೂಲಕ ಪ್ರವೇಶ ಕಲ್ಪಿಸಿ ಸಫಾರಿ ಆರಂಬಿಸಿದೆ,
ಹೌದು ಹೀಗೆ ಚಿಕ್ಕ ಚಿಕ್ಕ ಮರಿ ಮತ್ತು ತಾಯಿ ಕರಡಿಗಳು ನಿಮಗೆ ಕಾಣ ಸಿಗುವುದು ಏಷ್ಯಾದ ಅತಿದೊಡ್ಡ ಕರಡಿ ಧಾಮದಲ್ಲಿ, ಹೌದು ಇದು ವಿಶ್ವ ವಿಖ್ಯಾತ ಹಂಪಿ ಬಳಿ ಇರುವ ಏಷ್ಯಾದ ಪ್ರಪಥಮ ಕರಡಿ ಧಾಮದಲ್ಲಿ ಕಂಡುಬರುವ ಅಪರೂಪದ ದೃಶ್ಯಗಳು. ಎಸ್ ಇಲ್ಲೀಗ ಕರಡಿ ಸಫಾರಿ ಆರಂಭವಾಗಿದೆ. ಈ ಹಿಂದೆ ಈ ಸ್ಥಳದಿಂದ ಕೂಗಳತೆ ದೂರದಲ್ಲಿರುವ ವಾಜ್ಪೇಯಿ ಜಿಯೊಲಾಜಿಕಲ್ ಪಾರ್ಕಲ್ಲಿ ಸಿಂಹ ಸಫಾರಿ, ಹುಲಿ ಸಫಾರಿ, ಜಿಂಕೆ ಸಫಾರಿ ಪ್ರಾರಂಭವಾಗಿರುವ ಬಗ್ಗೆ ಕೇಳಿದ್ದೀರಿ ನೋಡಿದ್ದೀರಿ, ಇದೀಗ ವಿಜಯನಗರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಎನ್ನುವಂತೆ ಇಲ್ಲೀಗ ಕರಡಿ ಸಫಾರಿ ಕೂಡ ಆರಂಭ ಆಗ್ತಿದೆ.
ಹೌದು ಸುಮಾರು 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಧರೋಜಿ ಕರಡಿ ಧಾಮ ಇದೆ. ಇನ್ನು ಸುಮಾರು 120 ಕ್ಕೂ ಹೆಚ್ಚು ಕರಡಿಗಳು ಈ ಕುರುಚಲು ಕಾಡಿನಲ್ಲಿ ಅಡಕವಾಗಿವೆ. ಮೊದಲೆಲ್ಲಾ ಖಾಸಗಿಯಾಗಿ ಪ್ರವಾಸಿಗರಿಗೆ ಇಲ್ಲಿ ಒಳ ಹೋಗಲು ಅವಕಾಶ ಇತ್ತು. ಆದರೆ ಇನ್ಮುಂದೆ ಇಲ್ಲಿ ನಿಗದಿತ ಹಣ ನೀಡಿ ಕರಡಿ ಸಫಾರಿ ಮಾಡಬಹುದು. ಇನ್ನು ಇಲ್ಲಿ ಕೇವಲ ಕರಡಿಗಳು ಮಾತ್ರವಲ್ಲ, ವಿಶೇಷವಾದ ಹಕ್ಕಿಗಳನ್ನೂ ಸಹ ಕಾಣಬಹುದು.ಬಣ್ಣ ಬಣ್ಣದ ಕಲ್ಲುಕೋಳಿ, ಕೌಜುಗ, ಗೀಜಗ, ಬುರ್ಲಿ ನವಿಲು, ಸೇರಿದಂತೆ ಬಯಲು ಸೀಮೆಯಲ್ಲಿ ಕಾಣ ಸಿಗುವ ಅಪರೂಪದ ಹಕ್ಕಿಗಳು, ಮತ್ತು ವಿವಿಧ ಬಗೆಯ ಹದ್ದುಗಳು, ಅಪರೂಪದ ಹಕ್ಕಿಯಾದ ಹಳದಿ ಗಂಟಲಿನ ಪಿಕಳಾರ ಸೇರಿದಂತೆ ಬಗೆ ಬಗೆಯ ಹಕ್ಕಿಗಳನ್ನೂ ಕಾಣಬಹುದು. ಇಂತಹ ಪ್ರದೇಶದಲ್ಲಿ ಕರಡಿ ಸಫಾರಿ ಆರಂಭಿಸಿರುವುದು ಶ್ಲಾಘನೀಯ ಎನ್ನುತ್ತಾರೆ ಪ್ರಾಣಿಪ್ರಿಯರು.
ಒಟ್ಟಾರೆ ಸಿಂಹ ಹುಲಿಗಳ ಸಫಾರಿಯಂತೆ ಇನ್ಮುಂದೆ ಕರಡಿ ಸಫಾರಿಯನ್ನೂ ಸಹ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಇನ್ನು ಹತ್ತಿರದಲ್ಲಿಯೇ ವಿಶ್ವಪ್ರಸಿದ್ದ ಹಂಪಿ ಹಾಗೂ ವಾಜಪೇಯಿ ಜೂವಾಲಾಜಿಕಲ್ ಪಾರ್ಕ್ ಸಹ ಇದ್ದು, ಹಂಪಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ವನ್ಯ ಜೀವಿಗಳ ವೀಕ್ಷಣೆಗೆ ಇದು ಸುವರ್ಣ ಅವಕಾಶವೇ ಸರಿ.
ವೀಡಿಯೊ ವೀಕ್ಷಣೆಮಾಡಲು ಈ ಕೆಳಗಿನ ಲಿ.ಮಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.