ವಿಜಯನಗರ.. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಕಲಾವಿದರು ನಮ್ಮ ಜಿಲ್ಲೆಗೆ ಬಂದು ಕಲಾ ಪ್ರದರ್ಶನ ನೀಡಲು ಅವಕಾಶ ಇದೆ, ಆದರೆ ನಮಗೆ ಅವಕಾಶ ಇಲ್ಲ. ಕಲಾವಿದರಲ್ಲದವರಿಗೆ ಅವಕಾಶ ನೀಡಿ ಕಲಾವಿದರನ್ನ ಕಡೆಗಣಿಸಿಲಾಗಿದೆ ಎಂದು ಇಬ್ಬರು ಕಲಾವಿದರು ಪತ್ರಿಕಾಘೊಷ್ಠಿಯಲ್ಲೇ ತಮ್ಮ ಆಕ್ರೋಶವನ್ನ ಹೊರ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಪತ್ರಿಕಾ ಭವನದಲ್ಲಿ ಇಂದು ನಡೆದಿದೆ.
ಇದೇ ತಿಂಗಳು 9 ಮತ್ತು 10 ನೇ ತಾರೀಕಿನಂದು ನಡೆಯುವ ಕಲಾವಿದರ ಪ್ರಶಸ್ತಿ ಪ್ರದಾನ ಮಹೊಸು ಬಹುಮನ ವಿತರಣಾ ಸಮಾರಂಭ ಹೊಸಪೇಟೆ ನಗರದಲ್ಲಿ ನಡೆಯಲಿದೆ. ಈ ಸಂಭಂದ ಇಂದು ಜಾನಪದ ಆಕಾಡೆಮಿ ಅಧ್ಯೆಕ್ಷೆ ಮಂಜಮ್ಮ ಜೋಗತಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ, ಸಿದ್ದಲಿಂಗೇಶ ರಂಗಣ್ಣನವರ, ಮತ್ತು ಜಾನಪದ ಆಕಾಡೆಮಿ ಸದಸ್ಯ ಚಂದ್ರಶೇಖರ್. ಒಳಗೊಂಡ ಜಂಟಿ ಪತ್ರಿಕಾಘೊಷ್ಠಿಯನ್ನ ಆಯೋಜಿಸಿ ಕಾರ್ಯಕ್ರಮದ ರೂಪರೇಷಗಳನ್ನ ಪತ್ರಿಕೆ ಮಾದ್ಯಮಗಳಿಗೆ ತಿಳಿಸಿಲು ಮುಂದಾಗಿದ್ದರು.
ಪತ್ರಿಕಾಘೊಷ್ಠಿ ಮುಗಿಯುವ ಮುಂಚೆ ವೇದಿಕೆಯ ಮೆಂದೆ ಕುಳಿತಿದ್ದ ಹೊಸಪೇಟೆ ಸಂಗೀತ ಕಲಾವಿದ ಮಾರುತಿ ರಾವ್ ಮತ್ತು ಗಾಯಕಿ ಅನುರಾಧ ಎಂಬ ಇಬ್ಬರು ಕಲಾವಿದರು ಪತ್ರಿಕಾಘೊಷ್ಠಿಯಲ್ಲಿ ಎದ್ದು ನಿಂತು ತಮ್ಮ ಅಸಮಾದಾನ ಹೊರಹಾಕುತ್ತ ವೇದಿಕೆಯ ಮೇಲಿದ್ದ ಅಧಿಕಾರಿಗಳು ಮತ್ತು ಆಕಾಡಮಿಯ ಸದಸ್ಯ, ಅಧ್ಯಕ್ಷರನ್ನ ತರಾಟೆಗೆ ತೆಗೆದುಕೊಂಡು ಅವರ ವಿರುದ್ದ ಆಕ್ರೋಶ ಹೊರ ಹಾಕಿದರು.
ಹೊಸ ವಿಜಯನಗರ ಜಿಲ್ಲೆ ಉದಯವಾದ ನಂತರ ನಡೆಯುವ ಮೊದಲ ವೇದಿಕೆ ಕಾರ್ಯಕ್ರಮ ಇದಾಗಿದೆ.ಬೇರೆ ಬೇರೆ ಜಿಲ್ಲೆಯಿಂದ ಕಲಾವಿದರನ್ನ ಕರೆಯಿಸಿ ಕಾರ್ಯಕ್ರಮ ನೀಡಲಾಗುತ್ತಿದೆ, ಆದರೆ ನಮ್ಮ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಾಗವಹಿಸುವ ಅದೃಷ್ಠ ನಮಗೆ ಇಲ್ಲ. ಇಲ್ಲಿನ ಅಧಿಕಾರಿಗಳು ಮತ್ತು ಆಕಾಡೆಮಿ ಅಧ್ಯಕ್ಷರು ತಮಗೆ ಬೇಕಾದ ಕಲಾವಿದರಲ್ಲದವರನ್ನ ಆಯ್ಕೆಮಾಡಿ ನಮ್ಮಂತ ಕಲಾವಿದರನ್ನ ಮೂಲೆಗುಂಪು ಮಾಡಲಾಗುತ್ತಿದೆ, ಈ ವಿಷಯವಾಗಿ ಸ್ಪಷ್ಟನೆ ಕೇಳಲು ಮುಂದಾದರೆ ಅಧಿಕಾರಿಗಳ ಮೇಲೆ ಅಧ್ಯಕ್ಷರು ಹೇಳುತ್ತಾರೆ, ಅಧ್ಯಕ್ಷರ ಮೇಲೆ ಅಧಿಕಾರಿಗಳು ಹೇಳುತ್ತಾರೆ. ಇಂದು ಇಬ್ಬರು ಒಂದೇ ವೇದಿಕೆಯಲ್ಲಿ ಇದ್ದಾರೆ ಹಾಗಾಗಿ ಇಂದು ಒಟ್ಟಿಗೆ ಎಲ್ಲರನ್ನ ಪ್ರಶ್ನೆಸಿದ್ದೇವೆ, ನಾವು ಕಲಾವಿದರಲ್ಲವಾ. ನಮಗೆ ಆ ಅರ್ಹತೆ ಇಲ್ಲವಾ ಎಂದು ಪ್ರಶ್ನೆಮಾಡ ತೊಡಗಿದರು.
ವೇದಿಕೆಯಲ್ಲಿ ಕಲಾವಿದರ ಗಲಾಟೆ ಹೆಚ್ಚಾಗುತಿದ್ದಂತೆ ವೇದಿಕೆಯ ಮೇಲೆ ಕುಳಿತಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್. ಏನನ್ನೂ ಪ್ರತಿಕೃಯಿಸದೆ ವೇದಿಕೆಯಿಂದ ಇಳಿದು ಹೊರಟು ಹೋದರು. ಆದರೆ ಕಲಾವಿದರ ಆಯ್ಕೆ ವಿಚಾರವಾಗಿ ಒಬ್ಬರ ಮೇಲೆ ಒಬ್ಬರು ದೂರಿದ್ದ
ಅಧಿಕಾರಿ ಸಿದ್ದಲಿಂಗೇಶ ರಂಗಣ್ಣನವರ್, ಮತ್ತು ಅಧ್ಯಕ್ಷೆ ಮಂಜಮ್ಮ ಜೋಗತಿ ತಡವರಿಸುತ್ತ ಇಬ್ಬರು ಕಲಾವಿದರನ್ನ ಸಮಾಧಾನ ಗೊಳಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ.
ಇತ್ತ ಪತ್ರಿಕಾಘೊಷ್ಠಿಯಲ್ಲಿ ಇದ್ದ ಪತ್ರಕರ್ತರು ಪರ ವಿರೋಧದ ಅಭಿಪ್ರಾಯಗಳನ್ನ ಸಂಗ್ರಹಿಸಿ ಪತ್ರಿಕಾಘೊಷ್ಠಿ ಮುಕ್ತಾಯಗೊಳಿಸಿ ತೆರಳಿದರು.
ವೀಡಿಯೊ ನೋಡಲು ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.