ವಿಜಯನಗರ… ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಕದಕಲ್ಲು ಅರಣ್ಯ ಪ್ರದೇಶದ ಬಳಿಯಲ್ಲಿ ಇಬ್ಬರ ಮೇಲೆ ಚಿರತೆ ದಾಳಿಮಾಡಿದ ವರದಿಯಾಗಿದೆ. ಬಸ್ಸಮ್ಮ ಮತ್ತು ದುರ್ಗೇಶ ಎನ್ನುವ ಇಬ್ಬರ ಮೇಲೆ ದಾಳಿ ಮಾಡಿರುವ ಚಿರತೆ, ತಲೆ ಮತ್ತು ಮುಖಕ್ಕೆ ಗಾಯಗೊಳಿಸಿದೆ.
ಉಜ್ಜೈನಿ ಗ್ರಾಮದ ಬಸ್ಸಮ್ಮ ತಾಳೆ ಗರಿ ಸಂಗ್ರಹಿಸಿ ಪರಿಕೆಮಾಡಿ ಮಾರಾಟಮಾಡುವುದು ಉದ್ಯೋಗವಾಗಿದ್ದು ಈ ಸಂಭಂದ ಸುಂಕದಕಲ್ಲು ಅರಣ್ಯದಲ್ಲಿ ಕುಟುಂಭ ಸಮೇತರಾಗಿ ನಿನ್ನೆ ರಾತ್ರಿ ತಂಗಿದ್ದರು. ಅರಣ್ಯದಲ್ಲಿ ಮಲಗಿದ್ದ ಸಂದರ್ಭದಲ್ಲಿ ವೃದ್ದೆಯ ಮೇಲೆ ಚಿರತೆ ದಾಳಿ ನಡೆಸಿದೆ. ಅದಾದ ಬಳಿಕ ಕೆಲವೇ ನಿಮಿಷಗಳ ನಂತರ ಕೂಗಳತೆ ದೂರದಲ್ಲಿದ್ದ ಸುಂಕದಕಲ್ಲು ಗ್ರಾಮದ ಕುರಿಗಾಯಿ ದುರ್ಗೇಶ ಮೇಲೆ ಕೂಡ ಚಿರತೆ ದಾಳಿಮಾಡಿ ಮುಖ ಪರಚಿದೆ, ಗಾಯಾಳುಗಳನ್ನ ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಇನ್ನು ಘಟನೆಯಿಂದ ಸುಂಕದಕಲ್ಲು ಅರಣ್ಯದಂಚಿನ ಗ್ರಾಮಗಳ ಜನಗಳು ಬೆಚ್ಚಿಬಿದ್ದಿದ್ದು, ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆಗಳನ್ನ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಇನ್ನು ಈ ಸಂಭಂದ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಕಳೆದ ಎರಡು ವರ್ಷಗಳಿಂದ ಚಿರತೆ ಹಾವಳಿ ತಗ್ಗಿತ್ತು, ಆದರೆ ಇದೀಗ ಮತ್ತೆ ಚಿರತೆ ದಾಳಿ ಪ್ರಕರಣ ಬೆಳಕಿಗೆ ಬಂದಿದ್ದು ಕಾಡಂಚಿನ ಜನ ಸಾಮಾನ್ಯರು ಎಚ್ಚರಿಕೆಯಿಂದ ಇರಬೇಕಾಗಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಸಂಡೂರು ತಾಲೂಕಿನ ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಚಿರತೆ ಎರಡು ಜೀವಗಳನ್ನ ಬಲಿ ಪಡೆದದ್ದ ನೆನಪ ಇನ್ನೂ ಮಾಸಿಲ್ಲ, ಅದಾದ ಬಳಿಕ ನರಭಕ್ಷಕ ಚಿರತೆಯನ್ನ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಿತ್ತು ಅರಣ್ಯ ಇಲಾಖೆ, ಇದೀಗ ಮತ್ತೆ ಮನುಷ್ಯರ ಮೇಲೆ ಚಿರತೆಯ ಕಣ್ಣು ಬಿದ್ದಿದೆ, ಮತ್ತೊಂದು ಬಡ ಜೀವ ಬಲಿಯಾಗುವ ಮುನ್ನವೇ ಚಿರತೆಯನ್ನ ಸೆರೆ ಹಿಡಿದು ಬೇರೆ ಕಾಡಿಗೆ ಬಿಡಬೇಕಾಗಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.