ವಿಜಯನಗರ..ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಂದೂವರೇ ಕೋಟಿ ಮೌಲ್ಯದ ಒಂದುವರೆ ಕೆಜಿ ತಿಮಿಂಗಲ ವಾಂತಿ ವಶಕ್ಕೆ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು, ಪ್ರಕರಣಕ್ಕೆ ಸಂಭಂದಿಸಿದಂತೆ ಸ್ಮಗಲ್ ಮಾಡುತಿದ್ದ ಆರು ಜನರ ಬಂಧನ ಮಾಡಿದ್ದ ಹೊಸಪೇಟೆ ಪಟ್ಟಣ ಪೊಲೀಸರು ವಿಚಾರಣೆಯನ್ನ ಮುಂದುವರೆಸಿದ್ದರು, ಇದೀಗ ಮುಂದುವರೆದ ಭಾಗವಾಗಿ ಮತ್ತೆ ಒಂಭತ್ತು ಕೆಜಿಯಷ್ಟು ತಿಮಿಂಗಲು ವಾಂತಿಯನ್ನ ಪತ್ತೆಹಚ್ಚಿದ್ದಾರೆ. ಅಂದರೆ ಇಲ್ಲಿಗೆ ಒಟ್ಟು ಹತ್ತು ಕೆಜಿಗೂ ಹೆಚ್ಚು ತೂಕದ ಅಂದ್ರೆ ಸುಮಾರು ಹತ್ತುಕೋಟಿಗು ಹೆಚ್ಚು ಮೌಲ್ಯದ ವಾಂತಿಯನ್ನ ಪೊಲೀಸರು ಶವಕ್ಕೆ ಪಡೆದಿದ್ದಾರೆ. ಈ ಮೊದಲು
ಕೊಪ್ಪಳದ ವೆಂಕಟೇಶ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಮತ್ತು ವಿಜಯಪುರದ ಶ್ರೀಧರ್ ಬಂಧಿತ ಆರೋಪಿಗಳನ್ನ ಬಂದಿಸಿದ್ದ ಹೊಸಪೇಟೆ ಪಟ್ಟಣ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದರು, ತನಿಖೆಯ ಜಾಡು ಹಿಡಿದು ಹೊರಟ ಪೋಲೀಸರು ಮುರುಡೇಶ್ವರದಲ್ಲಿರುವ ಗಣಪತಿಯವರ ಮನೆಗೆ ಹೋಗಿ ಶೋಧ ಕಾರ್ಯ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಬರೋಬ್ಬರಿ ಮತ್ತೆ ಒಂಭತ್ತು ಕೆಜಿಯಷ್ಟು ತಿಮಿಂಗಲು ವಾಂತಿ ಪತ್ತೆಯಾಗಿದೆ.
ಇದೀಗ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಬಂದಿದ್ದು ಮುಂದೇನಾಗುತ್ತೆ ಕಾದುನೋಡಬೇಕಿದೆ. ಸಹಜವಾಗಿ ಇಂತಾ ಪ್ರಕರಣಗಳು ಹೆಚ್ಚಾಗಿ ಕಡಲ ಅಂಚಿನ ನಗರಪಟ್ಟಣ ಪ್ರದೇಶಗಳಲ್ಲಿ ಅಂದ್ರೆ ಮುಂಬೈ ಚನ್ನೈ, ಗೋವಾ ದಂತ ಪ್ರದೇಶಗಲ್ಲಿ ಪತ್ತೆಯಾಗುತಿದ್ದು ಇದೀಗ ಹೊಸಪೇಟೆ ನಗರದಲ್ಲಿ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ. ಪ್ರಕರಣವನ್ನ ಗಂಬೀರವಾಗಿ ಪರಿಗಣಿಸಿರುವ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ವಶಕ್ಕೆ ಪಡೆದಿರುವ ಈ ತಿಮಿಂಗಲು ವಾಂತಿ ಯಾವುದಕ್ಕೆ ಬಳಲೆಯಾಗುತ್ತದೆ ಅದು ಹೊಸಪೇಟೆ ನಗರದ ವರೆಗೆ ಬರಲು ಕಾರಣ ಏನೆಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಇನ್ನು ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ತಿಮಿಂಗಲು ಮೀನಿನ ಈ ವಾಂತಿ ಸುಗಂದ ದ್ರವ್ಯ ತಯಾರಿಕೆಗಳಲ್ಲಿ ಬಳಕೆಯಾಗುತ್ತೆ ಎಂದು ಹೇಳಲಾಗುತ್ತದೆ. ಅಂದ್ರೆ ನಾವು ಪ್ರತಿ ನಿತ್ಯ ಬಳಕೆ ಮಾಡುವ ಸೆಂಟ್ ಮತ್ತು ಇನ್ನಿತರ ಘಮ ಗಮಿಸುವ ಸುಗಂದ್ರ ದ್ರವ್ಯಗಳಲ್ಲಿ ಇದರ ಬಳಕೆ ಅನಿವಾರ್ಯ ಎನ್ನಲಾಗುತ್ತಿದೆ. ಆದರೆ ಕಾನೂನಿನ ದ್ರಷ್ಠಿಯಲ್ಲಿ ಈ ತಿಮಿಂಗಲು ವಾಂತಿ ಬಳಕೆ ನಿಷದ್ದವಿದೆ. ಆಳ ಸಮುದ್ರದಲ್ಲಿ ತೇಲಾಡುವ ಈ ವಾಂತಿ ಅಲ್ಲಿನ ಸ್ಥಳೀಯ ಮೀನುಗಾರರ ಕೈಗೆ ಸಿಕ್ಕು ಅದು ಇಂತಾ ಸ್ಮಗಲರ್ ಗಳ ಕೈಗೆ ತಲುಪುತ್ತದೆ. ಮೀನುಗಾರರಿಗೆ ಹೆಚ್ಚು ಹಣ ಕೊಟ್ಟು ಖರೀದಿಸುವ ಸ್ಮಗಲರ್ ಗಳು, ದೇಶ ಸೇರಿದಂತೆ ವಿದೇಶಗಳಿಗೆ ಸ್ಮಗಲ್ ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿಕೊಳ್ಳುತ್ತಾರಂತೆ. ಆಳ ಸಮುದ್ರದಲ್ಲಿ ವಾಸಿಸುವ ತಿಮಿಂಗಲು ಮೀನು ತಾನು ಹುಟ್ಟಿದಾಗಿನಿಂದ ಒಂದೆರಡು ಬಾರಿ ವಾಂತಿ ಮಾಡಿಕೊಳ್ಳುತ್ತೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ,ಆದರೆ ಒಂದು ಬಾರಿ ಒಂದು ತಿಮಿಂಗಲು ಮೀನು ವಾಂತಿ ಮಾಡಿದರೆ ಅದರ ಹೊಟ್ಟೆಯಿಂದ ಸರಿ ಸುಮಾರು ಎಂಭತ್ತು ಕೆಜಿಯಿಂದ ಒಂದು ಕ್ವಿಂಟಲ್ ನಷ್ಟು ವಾಂತಿ ಹೊರ ಬರುತ್ತದೆ ಎನ್ನಲಾಗಿದೆ. ಹೀಗೆ ಬಂದ ವಾಂತಿಯನ್ನ ಸಣ್ಣಪುಟ್ಟ ಮೀನುಗಳು ತಿಂದು ಅಳಿದುಳಿದ ವಾಂತಿ ಅಲ್ಲಿನ ಮೀನುಗಾರರ ಕೈಗೆ ಸಿಗುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ವಾಂತಿ ಎಂಬ ಹೆಸರು ಕೇಳಿದರೆ ಮಾರುದ್ದ ಸರಿಯುವ ಜನ ಸಾಮಾನ್ಯರು ಈ ತಿಮಿಂಗಲು ವಾಂತಿಯ ಮಹತ್ವ ತಿಳಿಯುತಿದ್ದಂತೆ ಕಣ್ಣರಳಿಸಿ ನೋಡುವಂತಿದೆ.
ವರದಿ..ಸುಬಾನಿ ಪಿಂಜಾರ ಹೊಸಪೇಟೆ.ವಿಜಯನಗರ.