ವಿಜಯನಗರ.. ತರಗತಿಯಲ್ಲಿ ತುಂಟತನ ಮಾಡಿದ ಎನ್ನುವ ಒಂದೇ ಕಾರಣಕ್ಕೆ ಹತ್ತು ವರ್ಷದ ವಿಧ್ಯಾರ್ಥಿಯನ್ನ ಸುಡು ಬಿಸಿಲಿನಲ್ಲಿ ಬಾರಿ ಗಾಲಿನಲ್ಲಿ ನಿಲ್ಲಿಸಿ ಶಿಕ್ಷೆ ವಿಧಿಸಿರುವ ಪ್ರಕರಣವೊಂದು ಹೊಸಪೇಟೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಪೇಟೆಯ ಅರವಿಂದ ನಗರದ ಹೀರಾ ಇಂಟರ್ ನ್ಯಾಷನಲ್ ಖಾಸಗಿ ಶಾಲೆಯಲ್ಲಿ ಇಂತದ್ದೊಂದು ಪ್ರಕರಣ ನಡೆದಿದ್ದು, ಕಳೆದ ಎರಡು ದಿನಗಳ ಹಿಂದೆ ಶಾಲೆಯಲ್ಲಿ ಮೂರನೆ ತರಗತಿ ಓದುವ ಗುಲಾಮೆ ಗೌಸಿಯಾ ಆಜಮ್ ಎನ್ನುವ ವಿಧ್ಯಾರ್ಥಿಯನ್ನ ಸುಡು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಬರಿ ಗಾಲಿನಲ್ಲಿ ಬಾಲಕನನ್ನ ಬಿಸಿಲಿನಲ್ಲಿ ನಿಲ್ಲಿಸಿದ ಪರಿಣಾಮ ಎರಡು ಕಾಲುಗಳಲ್ಲಿ ಸುಟ್ಟು ಬೊಬ್ಬೆ ಯಾಗಿವೆ.
ಈ ಕೂಡಲೆ ಪೊಷಕರಿಗೆ ಮಾಹಿತಿ ನೀಡಿದ ಶಾಲೆಯ ಶಿಕ್ಷಕರು ನಿಮ್ಮ ಮಗನಿಗೆ ಜ್ವರ ಬಂದಿವೆ ಅವನನ್ನ ಮನೆಗೆ ಕರೆದುಕೊಂಡು ಚಿಕಿತ್ಸೆಕೊಡಿಸಿ ಎಂದು ಎಳ್ಳು ಹೇಳಿದ್ದಾರೆ, ಆ ನಂತರ ಶಾಲಾ ವಾಹನದಲ್ಲಿ ಬಾಲಕನನ್ನ ಮನೆಗೆ ಕಳುಹಿಸಿರುವ ಶಾಲಾ ಆಡಳಿತ ಮಂಡಳಿ ಪ್ರಕರಣದಿಂದ ಜಾರಿಕೊಳ್ಳಲು ನೋಡಿದೆ. ನಂತರ ವಿಧ್ಯಾರ್ಥಿಯಿಂದ ಸತ್ಯಾಂಶ ತಿಳಿದು ಶಾಲೆಗೆ ಬೇಟಿ ನೀಡಿದ ಪೊಷಕರು, ತಮ್ಮ ಮಗನಿಗೆ ಶಿಕ್ಷೆ ನೀಡಿ ಕೃರತೆ ಮೆರೆದ ಶಿಕ್ಷಕಿ ದೀಪಾ ಅವರನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ಬಾಲಕನನ್ನ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದ್ದಾರೆ, ಅದಲ್ಲದೆ ರಾಕ್ಷಸಿತನ ಪ್ರದರ್ಶಿಸಿದ ಶಿಕ್ಷಕಿ ದೀಪ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಕೂಡ.
ಪ್ರಕರಣಕ್ಕೆ ಸಂಭಂದಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಅವರ ನೇತೃತ್ವದಲ್ಲಿ ಹೊಸಪೇಟೆ ಬಿ.ಇ.ಒ. ಕಛೇರಿಯ ಮುಂದೆ ಇಂದು ಪ್ರತಿಭಟನೆ ನಡೆಸಿ ಶಾಲೆಯ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.ಕೊರೊನ ಸಂಕಷ್ಟದಿಂದ ಜನ ಸಾಮಾನ್ಯರು ಕಷ್ಟ ಅನುಭವಿಸುತಿದ್ದರೆ, ಶಿಕ್ಷಣ ಸಂಸ್ಥೆಗಳು ಶಾಲೆಯ ಫಿ ಕಟ್ಟಿಲ್ಲ ಎಂದು ಮಕ್ಕಳಿಗೆ ಈರೀತಿಯಾಗಿ ಶಿಕ್ಷೆ ವಿಧಿಸುತಿದ್ದಾರೆ. ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹಾಕಿದರೂ ಅದು ಅಪರಾದ ಎಂದು ಕಾನೂನು ಹೇಳುತ್ತದೆ, ಆದರೆ ಶಿಕ್ಷಣ ಸಂಸ್ಥೆಗಳು ಮಕ್ಕಳ ವಿಚಾರದಲ್ಲಿ ಈರೀತಿಯಾಗಿ ಕೃರವಾಗಿ ನಡೆದುಕೊಂಡು ಅವರ ಭವಿಷ್ಯ ಹಾಳುಮಾಡುತಿದ್ದಾರೆ ಎಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅದಲ್ಲದೆ ಶಿಕ್ಷಣ ಇಲಾಖೆ ಈ ಪ್ರಕರಣವನ್ನ ಗಂಬೀರವಾಗಿ ಪರಿಗಣಿಸಿ ಶಿಕ್ಷಣ ಸಂಸ್ಥೆಯ ಮತ್ತೆ ಶಿಕ್ಷಕಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ವರದಿ……ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.