Share
Whatsapp
Messenger
Pinterest
Email
Share
tumblr
Print
….
ವಿಜಯನಗರ..ಲಂಚ ಪ್ರಕರಣದಿಂದ ಬೇಲ್ ಪಡೆದು ನ್ಯಾಯಾಂಗ ಬಂದನದಿಂದ ಹೊರ ಬಂದ ಕೊಟ್ಟೂರಿನ ಅಮಾನತ್ತಾದ ಪಿ.ಎಸ್.ಐ. ನಾಗಪ್ಪ ಮತ್ತು ಅವರ 12ಜನ ಬೆಂಬಲಿಗರ ವಿರುದ್ದ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ದೂರು ದಾಖಲಾಗಿದೆ.
ಇತ್ತೀಚೆಗೆ ಕೂಡ್ಲಿಗಿ ತಾಲೂಕು ಪಂಚಾಯ್ತಿ ಆಧ್ಯಕ್ಷ ವೆಂಕಟೇಶ್ ನಾಯ್ಕ್ ನೀಡಿದ್ದ ದೂರಿನ ಆದಾರದ ಮೇಲೆ, ಏಕಾಎಕಿ ದಾಳಿ ನಡೆಸಿದ್ದ ಎ.ಸಿ.ಬಿ ಅಧಿಕಾರಿಗಳು ಹಣದ ಸಮೇತ ಕೊಟ್ಟೂರು ಪಿ.ಎಸ್.ಐ.ನಾಗಪ್ಪ ಸೇರಿದಂತೆ ಐವರು ಪೊಲೀಸರನ್ನ ಬಂದಿಸಿದ್ದರು.
ಪ್ರಕರಣಕ್ಕೆ ಎಂಭಂದಿಸಿದಂತೆ ಇದೇ ತಿಂಗಳು ಹನ್ನೆರಡನೆ ತಾರೀಕಿನಂದು ನಾಗಪ್ಪ ಅವರಿಗೆ ಜಾಮೀನು ಮಂಜೂರಾಗಿದೆ. ನ್ಯಾಯಾಂಗ ಬಂದನದಿಂದ ನಾಗಪ್ಪ ಹೊರಬರುತಿದ್ದಂತೆ. ಅವರು ಬೆಂಬಲಿಗರು ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಅದ್ದೂರಿ ಸ್ವಾಗತಮಾಡಿದ್ದಾರೆ.
ಕೊಟ್ಟೂರೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಸೇರಿದ ನಾಗಪ್ಪ ಬೆಂಬಲಿಗರು ಗುಂಪು ಪಟಾಕಿ ಸಿಡಿಸುವ ಮೂಲಕ ಮೆರವಣಿಗೆ ಮಾಡಿದ್ದಾರೆ. 12ನೇ ತಾರೀಕಿನ ರಾತ್ರಿ 10:30 ರಿಂದ 11:45ರ ಅವದಿಯಲ್ಲಿ ಮೆರವಣಿಗೆ ನಡೆದಿದೆ.ಪೊಲೀಸ್ ಇಲಾಖೆಯ ಅಧಿಕಾರಿಯೇ ಈ ರೀತಿಯಾಗಿ ಕೊವಿಡ್ ನಿಯಮ ಉಲ್ಲಂಘನೆಮಾಡಿದರೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಕೊಟ್ಟೂರಿನ ಹೆಚ್ಚುವರಿ ಪ್ರಭಾರಿ ಸಿ.ಪಿ.ಐ. ಅಮಾನತ್ತಾದ ಪಿ.ಎಸ್.ಐ.ಮತ್ತು ಅವರ 12ಜನ ಬೆಂಬಲಿಗರ ವಿರುದ್ದ ದೂರು ದಾಖಲುಮಾಡಿದ್ದಾರೆ. ಈ ಮೂಲಕ ತಪ್ಪು ಯಾರು ಮಾಡಿದರೂ ತಪ್ಪೆ ಎನ್ನುವ ಸಂದೇಶವನ್ನ ಪೊಲೀಸ್ ಇಲಾಖೆ ಸಮಾಜಕ್ಕೆ ಸಂದೇಶ ರವಾನಿಸಿದೆ.
ವರದಿ..ಸುಬಾನಿ ಪಿಂಜಾರ.ವಿಜಯನಗರ.