ವಿಜಯನಗರ ಜಿಲ್ಲೆ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಪ್ತ ಮಲ್ಲಿಕಾರ್ಜುನ ಗೌಡ ಯುವಕನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ ಆರೋಪ ಕೇಳಿ ಬಂದಿದೆ.ನಾಗರಾಜ್ ನಿರ್ಕಲಪ್ಪನವರ್ ಹಲ್ಲೆಗೆ ಒಳಗಾಗಿದ್ದ ಯುವಕನಾಗಿದ್ದು,
ಕೂಡ್ಲಿಗಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಯ ದೃಶ್ಯಗಳು CCTV ಯಲ್ಲಿ ಸೆರೆಯಾಗಿವೆ,
ಅಮೇಜಾನ್ ಗೋದಾಮಿನ ಸರಕು ಇಳಿಸಲು ವಾಹನವನ್ನ ರಸ್ತೆಯಲ್ಲಿ ನಿಲ್ಲಿಸಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ, ಕಾರ್ ಗೆ ಯುವಕ ದಾರಿ ಬಿಡದ ಕಾರಣ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಅಂತ ಹೇಳಲಾಗಿದೆ, ಕಾರ್ ಗೆ ದಾರು ಬಿಡುವಂತೆ ನಡೆದ ವಾಗ್ವಾದ, ಮಾತಿಗೆ ಮಾತು ಬೆಳೆದು ತಾರಕಕ್ಕೆ ಏರಿದದೆ,
ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಏಳು ಜನರನ್ನ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.