ವಿಜಯನಗರ.. ವಿಜಯನಗರ ಜಿಲ್ಲೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಎಂ.ಐ.ಎಸ್. ಸಂಯೋಜಕರು, ತಾಲೂಕು ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು(ಸಿವಿಲ್), ತಾಂತ್ರಿಕ ಸಹಾಯಕರು(ಕೃಷಿ/ಅರಣ್ಯ/ ರೇಷ್ಮೆ/ತೋಟಗಾರಿಕೆ) ಹಾಗೂ ಆಡಳಿತಾತ್ಮಕ ಸಹಾಯಕರ(ತಾಲೂಕು ಪಂಚಾಯಿತಿ) ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಹೊರಗುತ್ತಿಗೆ ಸಂಸ್ಥೆಯ ಮೂಲಕ ಸೇವೆಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಎಂ.ಐ.ಎಸ್. ಸಂಯೋಜಕರು 01 ಹುದ್ದೆ ಇದ್ದು, ವಿದ್ಯಾರ್ಹತೆ ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್ನಲ್ಲಿ ಎಮ್.ಸಿ.ಎ. ಅಥವಾ ಬಿ.ಇ, ಬಿ.ಟೇಕ್ ಅಥವಾ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಅಥವಾ ಯಾವುದೇ ಇತರ ಸಮಾನ ವಿದ್ಯಾರ್ಹತೆ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2-3ವರ್ಷ ಅನುಭವದೊಂದಿಗೆ 45 ವರ್ಷ ವಯೋಮಿತಿಯೊಳಗಿರಬೇಕು. ಇವರ ಮಾಸಿಕ ಸಂಭಾವನೆ ರೂ.24ಸಾವಿರ ಸೇರಿದಂತೆ ರೂ.2ಸಾವಿರಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.
ತಾಲೂಕು ಐ.ಇ.ಸಿ. ಸಂಯೋಜಕರು 02 ಹುದ್ದೆ ಇದ್ದು, ವಿದ್ಯಾರ್ಹತೆ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಮೂಹ ಸಂವಹನದಲ್ಲಿ ಡಿಪ್ಲೋಮಾದೊಂದಿಗೆ ಯಾವುದೇ ಸ್ನಾತಕೋತ್ತರ ಪದವಿ ಅಥವಾ ಸಂಬಂಧಿತ ವಿಷಯ ಮತ್ತು ಕಂಪ್ಯೂಟರ್ ಜ್ಞಾನ ಮೇಲಿನ ಯಾವುದೇ ಅನುಪಸ್ಥಿತಿಯಲ್ಲಿ ಕಂಪ್ಯೂಟರ್ ಜ್ಞಾನ ಅಥವಾ ಯಾವುದೇ ಸ್ನಾತಕೋತ್ತರ ಪದವಿ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2-3ವರ್ಷ ಅನುಭವದೊಂದಿಗೆ 45ವರ್ಷಗಳ ವಯೋಮಿತಿಯೋಳಗಿರಬೇಕು.
ಇವರ ಮಾಸಿಕ ಸಂಭಾವನೆ ರೂ.24ಸಾವಿರ ಸೇರಿದಂತೆ ರೂ.2ಸಾವಿರಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.ತಾಂತ್ರಿಕ ಸಹಾಯಕರು(ಸಿವಿಲ್) 06 ಹುದ್ದೆಗಳು ಇದ್ದು, ವಿದ್ಯಾರ್ಹತೆ ಬಿ.ಇ/ಬಿ.ಟೆಕ್(ಸಿವಿಲ್)/ಡಿಪ್ಲೊಮಾ ಇನ್ ಸಿವಿಲ್ ಅಥವಾ ಯಾವುದೇ ಇತರ ಸಮಾನ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2-3ವರ್ಷಗಳ ಅನುಭವದೊಂದಿಗೆ 45ವರ್ಷಗಳ ವಯೋಮಿತಿಯೋಳಗಿರಬೇಕು. ಇವರ ಮಾಸಿಕ ಸಂಭಾವನೆ ಸಿವಿಲ್ ಅಭ್ಯರ್ಥಿಗೆ ರೂ.24ಸಾವಿರ ಹಾಗೂ ಡಿಪ್ಲೋಮೊ ಅಭ್ಯರ್ಥಿಗೆ ರೂ.19ಸಾವಿರ ಸೇರಿದಂತೆ ರೂ.2ಸಾವಿರಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.
ತಾಂತ್ರಿಕ ಸಹಾಯಕರು (ಕೃಷಿ/ಅರಣ್ಯ/ರೇಷ್ಮೆ/ತೋಟಗಾರಿಕೆ) 09 ಹುದ್ದೆಗಳಿದ್ದು, ವಿದ್ಯಾರ್ಹತೆ ಅಗ್ರಿಕಲ್ಚರ್ ಅಥವಾ ಫಾರೆಸ್ಟ್ರಿ ಅಥವಾ ಆರ್ಟಿಕಲ್ಚರ್ ಅಥವಾ ರೇಷ್ಮೆಗಾರಿಕೆಯಲ್ಲಿ ಪದವಿ ಅಥವಾ ಕಂಪ್ಯೂಟರ್ ಜ್ಞಾನದೊಂದಿಗೆ ಇತರ ಸಮಾನ ವಿದ್ಯಾರ್ಹತೆ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2-3ವರ್ಷಗಳ ಅನುಭವದೊಂದಿಗೆ 45ವರ್ಷಗಳ ವಯೋಮಿತಿಯೋಳಗಿರಬೇಕು. ಇವರ ಮಾಸಿಕ ಸಂಭಾವನೆ ರೂ.24ಸಾವಿರ ಸೇರಿದಂತೆ ರೂ.2ಸಾವಿರಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.
ಆಡಳಿತಾತ್ಮಕ ಸಹಾಯಕರು(ತಾಲೂಕು ಪಂಚಾಯಿತಿ) 06 ಹುದ್ದೆಗಳಿದ್ದು, ವಿದ್ಯಾರ್ಹತೆ ಬಿ.ಕಾಮ್ ಪದವಿ/ಇದಕ್ಕೆ ತತ್ಸಮಾನ ಪದವಿ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು ಮತ್ತು ಎಮ್.ಎಸ್.ವಡ್ರ್ಸ್, ಎಕ್ಸೆಲ್, ಪವರ್ ಪಾಯಿಂಟ್, ಪ್ರಸೆಂಟೇಷನ್ಸ್, ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಟ 2-3ವರ್ಷಗಳ ಅನುಭವದೊಂದಿಗೆ 35ವರ್ಷಗಳ ವಯೋಮಿತಿಯೋಳಗಿರಬೇಕು. ಇವರ ಮಾಸಿಕ ಸಂಭಾವನೆ ರೂ.15ಸಾವಿರಗಳು, ಅಥವಾ ಕಾರ್ಮಿಕ ಇಲಾಖೆಯು ಆಇಔ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ಮಾಸಿಕ ಸಂಭಾವನೆಯನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ಆನ್-ಲೈನ್ ಎನ್.ಐ.ಸಿ. ಜಿಲ್ಲಾ ವೆಬ್ ಸೈಟ್ ಮೂಲಕ ಏ.28 ರಿಂದ ಮೇ.16ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೇ 25ಕ್ಕೆ ಮೂಲ ದಾಖಲೆಗಳ ಪರಿಶೀಲನೆಗಾಗಿ ಜಿ.ಪಂ. ಕಾರ್ಯಾಲಯಕ್ಕೆ ಹಾಜರಾಗಬೇಕು. ನಂತರ ಅಭ್ಯರ್ಥಿಗಳ ತಾತ್ಕಾಲಿಕ ಮೇರಿಟ್ ಪಟ್ಟಿಯನ್ನು ಮೇ 30ರಂದು ಪ್ರಕಟಿಸಲಿದ್ದು, ತಾತ್ಕಾಲಿಕ ಮೇರಿಟ್ ಪಟ್ಟಿಗಳಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳು ಇದ್ದಲ್ಲಿ ಮೇ 31 ರಿಂದ ಜೂ.07ರೊಳಗಾಗಿ ಸಲ್ಲಿಸಬೇಕು.
ತದನಂತರದ ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಂತಿಮ ಆಯ್ಕೆಪಟ್ಟಿಯನ್ನು ಜೂ.16ರಂದು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಆಯ್ಕೆ ಪ್ರಕ್ರಿಯೆಯು ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದ್ದು, ಕನಿಷ್ಟ ವಿದ್ಯಾರ್ಹತೆಗೆ 100ಅಂಕಗಳು, ಸ್ನಾತಕೋತ್ತರ ಪದವಿಗೆ 10ಅಂಕಗಳು, ನಿಗದಿಪಡಿಸಿದ ಅನುಭವಕ್ಕೆ ಗರಿಷ್ಠ 10ಅಂಕಗಳನ್ನು ನಿಗದಿಪಡಿಸಲಾಗಿದ್ದು, (ನಿಗದಿಪಡಿಸಿದ 36 ತಿಂಗಳು ಅಥವಾ ಹೆಚ್ಚಿನ ಅವಧಿಯ ಅನುಭವಕ್ಕೆ ಗರಿಷ್ಟ 10 ಅಂಕಗಳು ಅಂದರೆ ಪ್ರತಿ ತಿಂಗಳ ಅನುಭವಕ್ಕೆ 0.28 ಅಂಕಗಳಂತೆ ಸಂಕಲನ ಮಾಡುವುದು), ಒಟ್ಟು 120 ಅಂಕಗಳನ್ನು ನಿಗಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರ್ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗುವುದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ನಮೂದಿಸಿರುವ ದಾಖಲೆಗಳ ಮೂಲ ಪ್ರತಿಗಳನ್ನು ದಾಖಲೆ ಪರಿಶೀಲನೆ ಸಮಯದಲ್ಲಿ ಕಡ್ಡಾಯವಾಗಿ ಹಾಜರು ಪಡಿಸುವುದು, ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಸದರಿ ಪಟ್ಟಿಯಲ್ಲಿ ಗರಿಷ್ಟ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ಹುದ್ದೆಯ ಆಯ್ಕೆಗೆ ಪರಿಗಣಿಸಲಾಗುವುದು, ಸಂದರ್ಶನವಿರುವುದಿಲ್ಲ, ಖಾಲಿ ಹುದ್ದೆಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರವು ನೇಮಕಾತಿ ಪ್ರಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ. ವಿಜಯನಗರ ಅವರು ಹೊಂದಿರುತ್ತಾರೆ.
ವಿಶೇಷ ಸೂಚನೆ: ಆಡಳಿತಾತ್ಮಕ ಸಹಾಯಕರು(ತಾ.ಪಂ) ಹುದ್ದೆಗೆ ಆಯ್ಕೆ ಮಾಡಲು ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವುದನ್ನು 1:3 ರ ಅನುಪಾತದಲ್ಲಿ ಪ್ರಾಯೋಗಿಕ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಂಡು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ