ಬಳ್ಳಾರಿ….ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯದ ವಿಧ್ಯಾರ್ಥಿಗಳು ನಿನ್ನೆ ರಾತ್ರಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ರಾತ್ರಿ ರಸ್ತೆಗೆ ಇಳಿದ ವಿಧ್ಯಾರ್ಥಿಗಳು ಹಾಸ್ಟೆಲ್‌ನಿಂದ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿಯ ಕಛೇರಿಯ ಮುಂದೆ ಕೆಲವೊತ್ತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳಕ್ಕೆ ಬಂದರು ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.
ಅಂದಹಾಗೆ ಬಳ್ಳಾರಿಯ ಮಯೂರ ಹೊಟೆಲ್ ಬಳಿ ಇರುವ ಎಸ್ಸಿ ಎಷ್ಟಿ ಹಾಸ್ಟೆಲ್ ವಾರ್ಡನ್ ರುದ್ರಾಚಾರ್ಯ್ಯ ವರ್ತನೆಗೆ ಬೇಸತ್ತಿರುವ ಈ ವಿಧ್ಯಾರ್ಥಿಗಳು ಕಳೆದ ಹಲವು ಬಾರಿ ಸಂಭಂದ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಕುಡಿಯುವ, ನೀರು ಸ್ವಚ್ಚತೆ, ಕಳಪೆ ಗುಣಮಟ್ಟದ ಆಹಾರ ಬಗ್ಗೆ ಬೇಸತ್ತಿರುವ ವಿಧ್ಯಾರ್ಥಿಗಳು ಸಾಕಾಷ್ಟುಬಾರಿ ಹೋರಾಟ ನಡೆಸಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳು ವಿಧ್ಯಾರ್ಥಿಗಳ ಹೋರಾಟಕ್ಕೆ ನ್ಯಾಯ ದೊರಕಿಸಿ ಕೊಟ್ಟಿಲ್ಲ. ಅದರ ಪರಿಣಾಮ ವಿಧ್ಯಾರ್ಥಿಗಳು ನಿನ್ನೆ ರಾತ್ರಿಯಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಇತ್ತೀಚೆಗೆ ಸಚಿವ ಶ್ರೀ ರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿಯ ಕನಸು ನನಸಾಗಿದೆ ಎಂದು ಎಲ್ಲಿಲ್ಲದ ಸಂತೋಷವನ್ನ ವ್ಯಕ್ತಪಡಿಸಿದ್ದರು. ಶ್ರೀರಾಮುಲು ಅವರಿಗೆ ನಮ್ಮದೊಂದು ಪ್ರಶ್ನೆ, ತವರು ಜಿಲ್ಲೆಯ ಉಸ್ತುವಾರಿಯನ್ನ ಪಡೆದರೆ ಸಾಲದು, ತವರು ಜಿಲ್ಲೆಯ ಜನ ಸಾಮಾನ್ಯರ ಕಷ್ಟಗಳನ್ನ ಯಾವಾಗ ದೂರ ಮಾಡುತ್ತೀರಿ ಶ್ರೀರಾಮುಲು ಅವರೇ. ನಿಮ್ಮ ಕೂಗಳತೆ ದೂರದಲ್ಲಿ ವಿಧ್ಯಾರ್ಥಿಗಳು ಈರೀತಿಯಾಗಿ ರಾತ್ರಿಯಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರೆ ಅದಕ್ಕೆ ಏನು ಅರ್ಥ ಹೇಳಿ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.