ವಿಜಯನಗರ..ದೂರದ ಊರಿಗೆ ಹೋದಾಗ ನಿಮ್ಮ ವಾಹನ ಯಾವುದಾದರು ಸ್ಥಳದಲ್ಲಿ ಬ್ರೇಕ್ ಡೌನ್ ಆಯ್ತು, ಅಥವಾ ಅಪಘಾತಕ್ಕೀಡಾಯಿತು ಎಂದ್ರೆ, ಇವರಿಗೆ ಒಂದೇ ಒಂದು ಪೊನ್ ಕಾಲ್ ಮಾಡಿ ಅಥವಾ ವಾಟ್ಸಪ್ ವಾಯ್ಸ್ ಮೆಸೇಜ್ ಹಾಕಿ ಸಾಕು, ಕ್ಷಣಾರ್ಧದಲ್ಲಿ ನಿಮ್ಮ ಬಳಿಗೆ ನೆರವಿನ ಸಹಾಯಸ್ತ ಹರಿದು ಬರುತ್ತೆ. ಅಂದಹಾಗೆ ಇಂತದ್ದೊಂದು ಸಹಕಾರ ಸಹಾಯಸ್ತ ಚಾಚುವ ವ್ಯೆವಸ್ಥೆ ಇರುವುದು ಕರ್ನಾಟಕ ಚಾಲಕರ ಒಕ್ಕೂಟದಲ್ಲಿ.
ಹೌದು ಕಳೆದ ಇಪ್ಪತ್ತು ವರ್ಷಗಳ ಹಿಂದೆ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ಒಕ್ಕೂಟದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ ತಾಲೂಕುಗಳಲ್ಲಿ ಸದಸ್ಯರನ್ನ ಹೊಂದಿದೆ, ಆದರೆ ಇತ್ತೀಚೆಗೆ ಅಂದರೆ ಎರಡರಿಂದ ಮೂರು ವರ್ಷಗಳಿಂದ ದೇಶಾಧ್ಯಂತ ಚಾಲಕರ ಹೆಲ್ಪಲೈನ್ ಪ್ರಾರಂಭಮಾಡಲಾಗಿದೆ. ಈ ಸಂಘಟನೆಯ ಪ್ರಮುಖ ಉದ್ದೇಶವೇ ಸಂಕಷ್ಟದಲ್ಲಿರುವ ಚಾಲಕರಿಗೆ ಸಹಾಯಸ್ತ ಚಾಚುವುದು.
ಬೇರೆ ಬೇರೆ ಜಿಲ್ಲೆ ಅಥವಾ ತಾಲೂಕಿನಿಂದ ವಾಹನ ಚಲಾಯಿಸಿಕೊಂಡು ಬಂದ ಚಾಲಕರ ವಾಹನ ಯಾವುದಾದರೂ ಒಂದು ತಾಂತ್ರಿಕ ಕಾರಣದಿಂದ ತೊಂದರೆಗೆ ಒಳಗಾಯಿತು ಅಥವಾ ಅಪಘಾತಕ್ಕೆ ಈಡಾಯಿತು ಎಂದ್ರೆ, ಆ ಸ್ಥಳದಲ್ಲೇ ಸಹಾಯಸ್ತ ಸಿಗುತ್ತೆ ಈ ಸಂಘದ ಸದಸ್ಯರಾಗಿರುವ ಚಾಲಕರಿಗೆ.
ಆದರೆ ತಮಗೆ ಆಗಿರುವ ತೊಂದರೆಯ ಕುರಿತು ಆ ವಾಹನ ಮಾಲೀಕ ಅಥವಾ ಚಾಲಕ, ಈ ಸಂಘಟನೆಯ ವಾಟ್ಸಪ್ ಗ್ರೂಪಲ್ಲಿ ವಾಯ್ಸ್ ಮೆಸೆಜ್ ಹಾಕಬೇಕು. ಇಲ್ಲವೇ ಆಯಾ ತಾಲೂಕು ಅಥವಾ ಜಿಲ್ಲಾ ಅಧ್ಯಕ್ಷರಿಗೆ ಪೊನ್ ಕರೆಮಾಡಿ ಸಹಾಯ ಕೇಳಬೇಕು, ಇದಕ್ಕೆ ಯಾವುದೇ ಸಮಯ ಸಂದರ್ಭಗಳಿಲ್ಲಿ, ದಿನದ 24 ಗಂಟೆಯೂ ಆಯಾ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರಿಗೆ ಮಾಹಿತಿ ತಿಳಿಸಿ ಸಹಾಯ ಕೇಳಬಹುದು.
ಆ ಕೂಡಲೆ ಯಾವುದೇ ಪಲಾಪೇಕ್ಷೆ ಇಲ್ಲದೆ ಆ ಚಾಲಕನ ಬಳಿಗೆ ಸಹಾಯಸ್ತ ಚಾಚುತ್ತಾರೆ ಸದಸ್ಯರು.ಇತ್ತೀಚೆಗೆ ಹೊಸಪೇಟೆ ಬಳಿಯ ರಾಷ್ಷ್ರೀಯ ಹೆದ್ದಾರಿ 50ರಲ್ಲಿ ಗುಜರಾತ್ ರಾಜ್ಯದ ಲಾರಿಯೊಂದು ಅಪಘಾತಕ್ಕೆ ಈಡಾಗಿತ್ತು, ಲಾರಿಯಲ್ಲಿ ಸೇಬು ಹಣ್ಣುಗಳಿದ್ದು ತಡಮಾಡಿದರೆ ಹಣ್ಣುಗಳು ಕೊಳೆತು ಹಾಳಾಗುವ ಆತಂಕದಲ್ಲಿದ್ದ ಲಾರಿ ಚಾಲಕ, ಹಾಗಾಗಿ ಚಾಲಕ ಕೂಡಲೇ ಕೆ.ಸಿ.ಒ. ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ನಾಗವಾರ ಪ್ರಸಾದ್ ಅವರಿಗೆ ಮನವಿಮಾಡಿಕೊಳ್ಳುತಿದ್ದಂತೆ ಘಟನಾ ಸ್ಥಳಕ್ಕೆ ಮೆಕಾನಿಕ್ ಜೊತೆಗೆ ಬೇಟಿ ನೀಡಿದ ಪ್ರಸಾದ್ ಚಾಲಕನಿಗೆ ಎದುರಾಗಿರುವ ತೊಂದರೆ ಸರಿಪಡಿಸಿ ನಿಂತಿದ್ದ ಲಾರಿ ಅಲ್ಲಿಂದ ಹೊರಡಲು ಸಹಾಯಮಾಡುತ್ತಾರೆ.
ಇಂತಾ ಯಾವುದೇ ಸಮಸ್ಯ ಎದುರಾಗುವ ಚಾಲಕ ಕೆ.ಸಿ.ಒ.ಹೆಲ್ಪಲೈನ್ ಗ್ರೂಪಲ್ಲಿ ಸಹಾಯ ಕೇಳುತಿದ್ದಂತೆ ಅಕ್ಕಪಕ್ಕದ ಸದಸ್ಯ ಆ ಘಟನಾ ಸ್ಥಳಕ್ಕೆ ಬೇಟಿ ನೀಡಿ ಸಹಾಯಸ್ತ ಚಾಚುತ್ತಾರೆ,
ಈ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಚಾಲಕರು ಈ ಸಂಘಟನೆಯ ಸದಸ್ಯರಾಗಲು ಮುಂದೆಬರುತಿದ್ದಾರೆ, ಅದರ ಜೊತೆಗೆ ಅನಾವಶ್ಯಕವಾಗಿ ಆರ್.ಟಿ.ಒ. ಅಧಿಕಾರಿಯಿಂದ ತೊಂದರೆ, ಪೊಲೀಸರಿಂದ ತೊಂದರೆ ಆದರೆ ಕೂಡ ಸ್ಥಳಕ್ಕೆ ಬೇಟಿ ನೀಡಿ ಅನ್ಯಾಯಕ್ಕೆ ಒಳಗಾದ ಚಾಲಕನ ಬೆಂಬಲಕ್ಕೆ ಸದಸ್ಯರು ನಿಲ್ಲುತ್ತಾರೆ.
ಅದಲ್ಲದೆ ಹೆಲ್ತ್ ಇನ್ಸರೆನ್, ಹಾಗೂ ಅಪಘಾತ ವಿಮೆ ಸೇರಿದಂತೆ ಇನ್ನು ಕೆಲವು ಯೋಜನೆಗಳು ಈ ಸಂಘಟನೆಯ ಸದಸ್ಯರಿಗೆ ಸಿಗುತ್ತಿವೆ. ಹಾಗೆಂದ ಕೂಡಲೆ ಪ್ರತಿ ವರ್ಷ ಈ ಸಂಘದ ಸದಸ್ಯರು ಹಣ ಪಾವತಿ ಮಾಡಬೇಕಿಲ್ಲ ಇದೆಲ್ಲ ಉಚಿತವಾಗಿಯೇ ಸಿಗುತ್ತದೆ. ಒಟ್ಟಿನಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಎಷ್ಟೆಲ್ಲ ಸಂಘಟನೆಗಳು ತಲೆ ಎತ್ತಿರುವುದನ್ನ ನಾವು ನೀವೆಲ್ಲ ನೋಡಿದ್ದೇವೆ ಕೇಳಿದ್ದೇವೆ. ಆದರೆ ಪ್ರತಿದಿನ ಪ್ರತಿ ಕ್ಷಣ ಒಂದಲ್ಲ ಒಂದು ನೆರವು ಪಡೆಯುವ ಮತ್ತು ನೀಡುವ ಸಂಘಟನೆ ಎಂದರೆ ಅದು ಕೆ.ಸಿ.ಒ. ಸಂಘಟನೆ ಎಂದು ಚಾಲಕರ ಮನದಲ್ಲಿ ಗಟ್ಟಿ ನೆಲೆಯೂರಿದೆ.
ಹಾಗಾಗಿ ಜಿಲ್ಲೆ ತಾಲೂಕು ಘಟಕಗಳಲ್ಲಿ ಕೆ.ಸಿ.ಒ.ಸಂಘಟನೆ ಪ್ರಾರಂಭವಾಗುತಿದೆ. ಇಂದು ಕೂಡ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಘಟಕ ಪ್ರಾರಂಭವಾಗಿದ್ದು, ಜಿಲ್ಲಾಧ್ಯಕ್ಷ ನಾಗವಾರ ಪ್ರಸಾದ್ ನೂತನ ಪದಾಧಿಕಾರಿಗಳಿಗೆ ಶುಭಕೋರಿ ಸಂಘಟನೆಯ ನಿಯಮ ಮತ್ತು ಸಹಾಸ್ತಚಾಚುವುದನ್ನ ಚಾಚೂ ತಪ್ಪದೆ ಪಾಲಿಸಬೇಕೆಂದು ಮನವರಿಕೆಮಾಡಿದರು.
ಇನ್ನು ಇದೇ ರೀತಿಯಾಗಿ ಕೆ.ಟಿ.ಡಿ.ಒ. ನಮ್ಮ ಚಾಲಕರ ಟ್ರೇಡ್ ಯೂನಿಯನ್. ಸೇರಿದಂತೆ ಹಲವು ಸಂಘಟನೆಗಳು ಚಾಲಕರ ಒಳಿತಿಗಾಗಿ ಕಾರ್ಯ ಮಾಡುತ್ತಿವೆ ಎನ್ನುವುದನ್ನ ಸಹ ಮರೆಯುವ ಹಾಗಿಲ್ಲ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.