![](https://hampimirror.com/media/2022/01/IMG-20220122-WA0022-1024x576.jpg)
ಈ ಸಂಭಂದ ಇಂದು ಬಳ್ಳಾರಿಯ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಜಿಂದಾಲ್ ಕಂಪನಿಗೆ ಬೇಟಿ ನೀಡಿ ಕೊವಿಡ್ ಕೇರ್ ಸೆಂಟರ್ ಪರಿಸೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಪಿ.ಕೆ.ಮುರುಗನ್, ಹಾಗೂ ವಿಜಯಸಿಂಹ, ಸಂಜಯ್ ಹಂಡೂರು, ಮತ್ತು ಪವನ್ ರೆಡ್ಡಿ, ಸಂಡೂರು ತಹಸಿಲ್ದಾರ್ ಜೊತೆಗಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಕೊವಿಡ್ ಮೂರನೆ ಅಲೆ ಎದುರಿಸಲು ನಮ್ಮಬಳ್ಳಾರಿ ಜಿಲ್ಲಾಡಳಿತ ಸಿದ್ದವಾಗಿದೆ.
![](https://hampimirror.com/media/2022/01/IMG_20220122_180937-1024x596.jpg)
ಈ ಬಾಗದ ಜನ ಸಾಮಾನ್ಯರಿಗೆ ಇನ್ನು ಮುಂದೆ ತೊಂದರೆ ಎದುರಾಗುವುದಿಲ್ಲ.300 ಹಾಸಿಗೆ ಕೊವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭಮಾಡಿದೆ. ಅದಕ್ಕೆ ಬೇಕಾದ ಸಿಬ್ಬಂದಿಗಳು ಹಾಗೂ ಅಗತ್ಯಕ್ಕೆ ತಕ್ಕಂತೆ ಉಪಕರಣಗಳನ್ನ ವ್ಯವಸ್ಥೆಮಾಡಲಾಗಿದೆ. 300ಹಾಸಿಗೆ ಇದ್ದರು ಸಾವಿರ ರೋಗಿಗಳಿಗೆ ಬೇಕಾಗುವ ಔಷದಿ ದಾಸ್ಥಾನುಮಾಡಲಾಗಿದೆ ಎಂದು ಮಾತನಾಡಿದರು, ನಮ್ಮ ನಿರೀಕ್ಷೆಯಂತೆ ರೋಗಿಗಳು ಇಲ್ಲಿ ದಾಖಲಾಗದೆ ಇದ್ದರೆ ಇನ್ನೂ ಖುಷಿ ಎಂದು ತಮ್ಮಅಭಿಪ್ರಾಯ ವ್ಯಕ್ತಪಡಿಸಿದರು.
![](https://hampimirror.com/media/2022/01/IMG_20220122_180900-1024x565.jpg)
ವರದಿ..ಸುಬಾನಿ ಪಿಂಜಾರ ವಿಜಯನಗರ.