ವಿಜಯನಗರ.. ಹೊಸಪೇಟೆಯ ಅಂಬೇಡ್ಕರ್ ವೃತ್ತದ ಚಿತವಾಡಗಿ ರಸ್ತೆಯ ಬಲ ಭಾಗದಲ್ಲಿರುವ ವೃಕ್ಷ ರಕ್ಷಣೆಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಮುಂದಾಗಿದ್ದಾರೆ. ಮರದ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಈ ಮರ ಕಡಿಸುವ ಸಂಭಂದ ಹಲವು ಪ್ರಯತ್ನಗಳನ್ನ ಮಾಡುತಿದ್ದು ಸ್ಥಳೀಯರು ಮಾತ್ರ ಅದಕ್ಕೆ ಅವಕಾಶ ನೀಡಿದೆ ಮರ ಉಳಿವಿಗೆ ಹರ ಪ್ರಯತ್ನಗಳನ್ನ ಮಾಡುತಿದ್ದಾರೆ. ನಿನ್ನೆ ರಾತ್ರಿಯಿಂದ ಮರವನ್ನ ಸುತ್ತುವರೆದು ವೃಕ್ಷ ರಕ್ಷಣೆಗೆ ಮುಂದಾಗಿರುವ ಸ್ಥಳೀಯರು ಇಂದು ಬೆಳಗ್ಗೆ ಕೂಡ ತಮ್ಮ ಅಪ್ಪಿಕೋ ಚಳುವಳಿ ಮುಂದುವರೆಸಿದ್ದಾರೆ.
ಹಲವು ವರ್ಷಗಳಿಂದ ರಸ್ತೆಯ ಪಕ್ಕದಲ್ಲಿರುವ ಈ ಮರದಿಂದ ಯಾರೊಬ್ಬರಿಗೂ ತೊಂದರೆ ಇಲ್ಲ, ಈ ಮರ ಉಳಿವಿಗಾಗಿ ದೇವರನ್ನ ಮರದ ಕೆಳಗೆ ಸ್ಥಾಪನೆಮಾಡಿ ಪೂಜಿಸಲಾಗುತ್ತಿದೆ. ಹೀಗಿದ್ದರು ಕನಿಕರ ಇಲ್ಲದ ಜನಗಳು ಮರವನ್ನ ಕಡಿಯಲು ಮುಂದಾಗಿದ್ದಾರೆ,ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ಮರದ ಕೆಳಗಡೆ ಇರುವ ದೇವರನ್ನ ಪೂಜಿಸುವ ನಮಗೆ ದೇವರಿಗಿಂತ ಮರ ಮುಖ್ಯ, ಮರ ಉಳಿಸುವ ಸಂಭಂದ ನಮ್ಮ ಜೀವ ಬೇಕಾದರು ಕೊಡುತ್ತೇವೆ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ ಸ್ಥಳೀಯರು, ಸ್ಥಳೀಯರು ಪಟ್ಟು ಹಿಡಿದಿರುವುದನ್ನ ಕಂಡ ಮರ ಕಡಿಯಲು ಬಂದವರು, ತಂದಿದ್ದ ಜೆಸಿಬಿಯನ್ನ ಮರಳಿ ತಮ್ಮ ಗೆದುಕೊಂಡು ಹೋಗಿದ್ದಾರೆ, ಒಂದು ವೇಳೆ ಯಾವುದೇ ವಿರೋಧವಿಲ್ಲದೆ ಹೋಗಿದ್ದರೆ ಕ್ಷಣಾರ್ಧದಲ್ಲಿ ಈ ಮರ ಈಗಾಗಲೆ ಧರೆಗೆ ಉರುಳಿರುತಿತ್ತು.
ಬಡವರು ಒಂದು ಸಣ್ಣ ತಪ್ಪುಮಾಡಿದರೂ ಅವರಿಗೆ ಹಲವಾರು ನಿಯಮಗಳನ್ನ, ಕಾನೂನುಗಳನ್ನ ತೋರಿಸಿ ಹೆದರಿಸುತ್ತಾರೆ, ಆದರೆ ಇಲ್ಲಿನ ಹಣವಂತರ ಏನುಮಾಡಿದರೂ ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲ,ಕಣ್ಣಿದ್ದು ಕುರುಡರಂತೆ ನಟಿಸುತ್ತಾರೆ, ಇಲ್ಲಿನ ಸಂಭಂದ ಪಟ್ಟ ಇಲಾಖೆಗಳು ನಮ್ಮ ಹೋರಾಟವನ್ನ ಬೆಂಬಲಿಸಿ ಈ ಮರ ಉಳಿಸಿಕೊಡಬೇಕಾಗಿದೆ. ಅರಣ್ಯ ಇಲಾಖೆ ಈ ಮರ ರಕ್ಷಣೆಗೆ ಕೂಡಲೆ ಧಾವಿಸಿ ಮರ ಕಡಿಯಲು ಮುಂದಾಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ರಾಜು, ಓಬಯ್ಯ, ಧನರಾಜ್, ಶ್ರೀನಿವಾಸ್, ರಮೇಶ, ನವೀನ, ನಾಗವೇಣಿ, ಬಾಗಮ್ಮ, ಆಲಮ್ಮ, ಈರಮ್ಮ, ಸುಂಕಮ್ಮ, ತಿಮ್ಮಕ್ಕ ಸೇರಿದಂತೆ ಓಣಿಯ ಹಲವು ಜನ ಈ ಅಪ್ಪಿಕೋ ಚಳುವಳಿಯಲ್ಲಿ ಬಾಗಿಯಾಗಿ ವೃಕ್ಷ ರಕ್ಷಣೆಗೆ ಮುಂದಾಗಿದ್ದಾರೆ.
ವರದಿ..ಸುಬಾನಿ ಪಿಂಜಾರ ವಿಜಯನಗರ.