ಕಳೆದ ಎರಡು ವಾರಗಳಿಂದ ಹಿಜಾಬ್ ಮತ್ತು ಕೇಸರಿ ಶಾಲಿನದ್ದೇ ವಿವಾದ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಇತರೆ ಬೇರೆ ದೇಶಗಳಲ್ಲಿ ಕೂಡ ಚರ್ಚೆಯಾಗುತ್ತಿದೆ, ಅದಕ್ಕೆ ಕಾರಣ ಮುಸ್ಲೀಂ ಯುವತಿಯರು ಶಾಲೆಗೆ ಹಿಜಾಬ್ ಧರಿಸಿ ಹೋಗುತ್ತಿರುವುದು, ಇದನ್ನ ವಿರೋಧಿಸಿರುವ ಕೆಲವು ಹಿಂದೂ ಧರ್ಮದ ವಿಧ್ಯಾರ್ಥಿಗಳು, ಶಾಲೆಯಲ್ಲಿ ಏಕ ರೀತಿ ವಸ್ತ್ರ ಪದ್ದತಿ ಇರಬೇಕು, ಮುಸ್ಲೀಂ ವಿಧ್ಯಾರ್ಥಿನೀಯರು. ಹಿಜಾಬ್ ಧರಿಸಿ ಶಾಲೆಗೆ ಬರುವುದನ್ನ ನಾವು ಒಪ್ಪುವುದಿಲ್ಲ, ಒಂದು ವೇಳೆ ಅವರು ಹಿಜಾಬ್ ತೆಗೆಯದಿದ್ದರೆ,ನಾವು ಕೂಡ ಕೇಸರಿ ಶಾಲು ಪೇಟವನ್ನ ಧರಿಸಿ ತರಗತಿ ಪ್ರವೇಶಮಾಡುತ್ತೇವೆ ಎಂದು ಪ್ರತಿಭಟನೆಯ ಪರ ವಿರೋಧದ ಚರ್ಚೆಗಳು ಪ್ರಾರಂಭವಾದವು. ಇದೆಲ್ಲ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದದ ಹಿನ್ನೆಲೆ ಆಯ್ತು.
ಆದರೆ ಇಂದು ನಡೆಯುತ್ತಿರುವ ಈ ಹಗ್ಗ ಜಗ್ಗಾಟ ಕೆಲವರಿಗೆ ಅಪ್ರಸ್ತುತ ಎನಿಸಿದರೆ, ಇನ್ನೂ ಕೆಲವರಿಗೆ ಪ್ರಸ್ತುತ ಎನಿಸುತ್ತಿದೆ, ಆದರೆ ಇದೇ ಶಾಲೆಯ ಮಕ್ಕಳ ಉಡುಗೆ ತೊಡುಗೆ ಹೇಗಿರಬೇಕು, ಶಾಲಾ ವಿಧ್ಯಾರ್ಥಿನಿಯರು ತೊಡುವ ತುಂಡುಡುಗೆಯಿಂದ ಏನೆಲ್ಲ ತೊಂದರೆಗಳು ಆಗುತ್ತವೆ ಎಂದು ಮನಗಂಡ ಮುಸ್ಲೀಂ ಧರ್ಮದ ಒಬ್ಬ ವ್ಯಕ್ತಿ ಶಾಲಾ ಸಮವಸ್ತ್ರದ ಸುಧಾರಣ ಹೋರಾಟದ ಕಥೆಯನ್ನ ಯಾರಾದ್ರು ನೆನಪು ಮಾಡಿಕೊಳ್ಳುತ್ತಾರ, ಯಾರು ಇಲ್ಲ, ಹೌದು ಇವರು ನಡೆಸಿದ ಹೋರಾಟದ ವೈಖರಿ ಹೇಗಿತ್ತು ಎಂದ್ರೆ, ಇಡೀ ರಾಜ್ಯದ ಜನವೇ ಭೇಷ್ ಎಂದಿತ್ತು, ಇವರ ಎಲ್ಲಾ ವಿಚಾರಗಳನ್ನ ಆಲೋಚನೆಗಳನ್ನ ಪರಿಗಣನೆಗೆ ತೆಗೆದುಕೊಂಡ ಅಂದಿನ ನಮ್ಮ ರಾಜ್ಯ ಸರ್ಕಾರ, ಶಾಲಾ ಸಮವಸ್ತ್ರದ ನೀತಿಯನ್ನೇ ಸುಧಾರಣೆಮಾಡಿ ಇವರ ಹೋರಾಟಕ್ಕೆ ಮಣಿದಿತ್ತು, ಅವರು ಬೇರೆಯಾರು ಅಲ್ಲ ನಮ್ಮ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಅಬ್ದುಲ್ ಲತೀಪ್ ಅವರು,
ಹೌದು ಇಂದಿನ ದಿನಗಳಲ್ಲಿ ನಮ್ಮ ಶಾಲೆಗಳಿಗೆ ಅದೆಷ್ಟೋ ವಿಧ್ಯಾರ್ಥಿನೀಯರು ಮುಜುಗರ ಪಡದೆ ಹೋಗುತ್ತಾರೆ ಎಂದ್ರೆ ಅದಕ್ಕೆ ಕಾರಣನೇ ಈ ಅಬ್ದುಲ್ ಅವರು, 2014ಕಿಂತ ಪೂರ್ವದಲ್ಲಿ ಶಾಲಾ ಸಮಸ್ತ್ರಗಳು ಹೀಗೆ ಇರಬೇಕೆಂದು ನಿಯಮ ಇದ್ದಿರಲಿಲ್ಲ, ಸಮವಸ್ತ್ರದ ಹೆಸರಲ್ಲಿ ಕೆಲವು ಖಾಸಗಿ ಶಾಲೆಗಳು ಹೆಣ್ಣು ಮಕ್ಕಳಿಗೆ ತುಂಡುಡೆಗೆಗಳನ್ನ ತೊಡಿಸುತಿದ್ದವು, (ಮಿನಿಸರ್ಕಟ್) ಇದರಿಂದ ಎಷ್ಟೋ ವಿಧ್ಯಾರ್ಥಿನೀಯರು, ತುಂಡುಡೆಗೆಯನ್ನ ತೊಡಲಾಗದೆ ಮುಜುಗರಕ್ಕೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗಿದ್ದರು ಕೂಡ. ಅದಲ್ಲದೆ ಶಾಲ ಮಕ್ಕಳ ಮೇಲೆ ನಡೆಯುವ ಅತ್ತ್ಯಾಚಾರಗಳು ಕೂಡ ಹೆಚ್ಚಾಗಿದ್ದವು. ಈ ಎಲ್ಲಾ ಕಾರಣದಿಂದ ಹೋರಾಟ ಹಮ್ಮಿಕೊಂಡ ಈ ಅಬ್ದುಲ್ ಲತೀಪ್ ಅವರು, ತಮ್ಮ ಗ್ರಾಮ ಕಮಲಾಪುರದಲ್ಲಿ ಶಾಲಾ ಸಮವಸ್ತ್ರ ಸುಧಾರಣ ಹೋರಾಟ ಸಮಿತಿಯಂದು ರಚನೆಮಾಡಿಕೊಂಡು, ಕಮಲಾಪುರದಲ್ಲೇ ಇಪ್ಪತ್ತರಿಂದ ಮುವತ್ತು ಜನಗಳನ್ನ ಸದಸ್ಯರನ್ನಾಗಿ ಮಾಡಿಕೊಂಡು, ಅಬ್ದುಲ್ ಲತೀಪ್ ಅವರೇ ಆ ಸಮಿತಿಯ ಅಧ್ಯಕ್ಷರಾಗಿ ಕಮಲಾಪುರದಿಂದ ಹೋರಾಟ ಪ್ರಾರಂಭಿಸಿದರು. ತಮ್ಮ ಗ್ರಾಮದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೋಗಿ ಅಲ್ಲಿನ ವಿಧ್ಯಾರ್ಥಿನೀಯರ ಮನದಾಳದ ನೋವನ್ನ ಅಧ್ಯಾಯನ ಮಾಡಿದರು. ಅಲ್ಲಿಂದ ನ್ಯಾಯ ಸಿಗುವವರೆಗೆ ತಮ್ಮ ಹೋರಾಟ ನಿಲ್ಲಿಸಲಿಲ್ಲ, ವಿಜಯನಗರ ಜಿಲ್ಲೆಯ ಪುಟ್ಟ ಗ್ರಾಮದಿಂದ ಪ್ರಾರಂಭವಾದ ಈ ಶಾಲಾ ಸಮವಸ್ತ್ರ ಸುಧಾರಣ ಹೋರಾಟವನ್ನ ಕೊನೆಗೆ ಇಡೀ ರಾಜ್ಯದ ಜನ ಒಪ್ಪಿತು. ಸರ್ಕಾರ ಕೂಡ ಒಪ್ಪಿ ಇಡೀ ರಾಜ್ಯದಲ್ಲಿ ಶಾಲೆಗಳ ಸಮವಸ್ತ್ರದ ಸುಧಾರಣೆಗೆ ಕರ್ನಾಟಕ ರಾಜ್ಯ ಸರ್ಕಾರ ಮುಂದಾಯಿತು.
ಒಂದರಿಂದ ಐದನೆ ತರಗತಿ ವರೆಗೆ ಚೂಡಿದಾರ ಹಾಕಬೇಕು, ಆರು ಮತ್ತು ಏಳನೆ ತರಗತಿ ಸೇರಿದಂತೆ ಎಸ್.ಎಸ್.ಎಲ್.ಸಿ. ವರೆಗೆ ಚೂಡಿದಾರ ಹಾಕುವುದರ ಜೊತೆಗೆ ವೇಲ್ ಧರಿಸುವ ಬದಲಾವಣೆಯನ್ನ ರಾಜ್ಯ ಸರ್ಕಾರ ಜಾರಿಗೆ ತಂತು. ಅಂದಿನಿಂದ ಇಂದಿನ ವರೆಗೆ ನಮ್ಮ ರಾಜ್ಯದಲ್ಲಿ ಅದೆಷ್ಟೊ ವಿಧ್ಯಾರ್ಥಿನೀಯರು ಮೈತುಂಬ ಬಟ್ಟೆ ತೊಟ್ಟು ಮುಜುಗರ ಇಲ್ಲದೆ ಶಿಕ್ಷಣ ಕಲಿಯಲು ಶಾಲೆಗಳಿಗೆ ಬರುತಿದ್ದಾರೆ. ಆದರೆ ಈ ಸಮವಸ್ತ್ರದ ಸುಧಾರಣೆಗೆ ಹೋರಾಟ ನಡೆಸಿದ ಈ ಅಬ್ದುಲ್ ಅವರು ನಮ್ಮೊಂದಿಗೆ ಇಲ್ಲ, ಕಳೆದ ವರ್ಷದಲ್ಲಿ ಎದುರಾದ ಕೊರೋನ ಮಹಾಮಾರಿ ಅಬ್ದುಲ್ ಅವರನ್ನ ಬಲಿ ಪಡೆಯಿತು. ಆದರೆ ಅಬ್ದುಲ್ ಅವರ ನಡೆಸಿದ ಹೋರಾಟದ ಫಲ ಮಾತ್ರ ನಮ್ಮೊಂದಿಗಿದೆ. ಯಾವುದೇ ಹೋರಾಟ ನಡೆಸಿದ್ರು ಅಬ್ದುಲ್ ಅವರ ಮಾಧರಿಯಲ್ಲಿ ಹೋರಾಟ ನಡೆಸಿದರೆ ಜಯ ಸಿಕ್ಕೆ ಸಿಗುತ್ತೆ ಎನ್ನುವುದು ನಮ್ಮ ಅಭಿಪ್ರಾಯ.
ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.