ವಿಜಯನಗರ..( ಹೊಸಪೇಟೆ ) ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು ಜನಕ್ಕೂ ಈಜು ಬರದೇ ಇರೋದೇ ಘಟನೆಗೆ ಕಾರಣವಾಗಿದೆ.
ಆರು ಜನ ಕಾಲುವಿಗೆ ಇಳೆಯುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾರೆ, ಸ್ಥಳದಲ್ಲಿದ್ದ ಓರ್ವ ಟ್ರಾಕ್ಟರ್ ಚಾಲಕ ಯಾರಿಸ್ವಾಮಿ ಹಾಗೂ ಟ್ಯಾಕ್ಸಿ ಚಾಲಕ ಸೋಮಶೇಖರ್ ಮೂರು ಜನರನ್ನ ರಕ್ಷಣೆ ಮಾಡಿದ್ದಾರೆ. ಅಷ್ಟೊತ್ತಿಗೆ ಇನ್ನು ಉಳಿದ ಮೂರು ಜನ. ನೀರಿನ ಸೆಳೆತಕ್ಕೆ ಸಿಕ್ಕು ಅಲ್ಲಿಂದ ಕಣ್ಮರೆಯಾಗಿದ್ದಾರೆ, ವಿಷಯ ತಿಳಿದ ನಂತರ ಹೊಸಪೇಟೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ. ಕಣ್ಮರೆಯಾಗಿರುವ ವಿದ್ಯಾರ್ಥಿಗಳ ಹುಡುಕಾಟ ನಡೆಸಿದ್ದಾರೆ.
ಹೊಸಪೇಟೆಯ ಎಂ. ಜೆ. ನಗರದ. ಅಂಜಿನಿ 20 ವರ್ಷ.(B. com)
ಹೊಸಪೇಟೆ ತಾಲೂಕಿನ ಗುಂಡಾ ಗ್ರಾಮದ. ಗುರುರಾಜ್.17 ವರ್ಷ.(PUC)
ಕೊಪ್ಪಳದ ಯಶವಂತ್.17 ವರ್ಷ(PUC)
ಕಣ್ಮರೆಯಾಗಿರುವ ವಿದ್ಯಾರ್ಥಿಗಳಾಗಿದ್ದಾರೆ,
ಇತ್ತ ಕಣ್ಮರೆಯಾಗಿರುವ ವಿದ್ಯಾರ್ಥಿಗಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.ಈ ಎಲ್ಲಾ ವಿದ್ಯಾರ್ಥಿಗಳು ಹೊಸಪೇಟೆ ನಗರದ ವಿ.ಎನ್.ಸಿ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ. ಎ. ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ರಕ್ಷಣೆಯಾಗಿರುವ
ಹೊಸಪೇಟೆ ನಗರದ ಶ್ರೀ ವಲ್ಲಭ. ಮತ್ತು ಚಿಲಕನ ಹಟ್ಟಿ ನವೀನ್. ಹಾಗು ಕೊಪ್ಪಳದ ಗೋಪಿನಾಥ್
ಈ ಮೂರು ಜನ ವಿದ್ಯಾರ್ಥಿಗಳು ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇದ್ದು, ಘಟನೆಯ ಕುರಿತು ವಿದ್ಯಾರ್ಥಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.