ಬಳ್ಳಾರಿ. ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ಯುವಕ ಯುವತಿಯರಿಗೆ ಯುವರಂಗ ತರಬೇತಿಯ ಶಿಬಿರವನ್ನು ಆಯೋಜಿಸಲು ಕಲಬುರಗಿ ರಂಗಾಯಣ ನಿರ್ಧರಿಸಿದೆ. ಈ ಯುವರಂಗ ತರಬೇತಿ ಶಿಬಿರದಲ್ಲಿ ಸಿದ್ಧವಾದ ನಾಟಕಗಳು ಅಯಾ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಕಾಲೇಜು ರಂಗೋತ್ಸವ
ಏರ್ಪಪಡಿಸಿ ಪ್ರದರ್ಶಿಸಲಾಗುವುದು ಎಂದು ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮತ್ತು ಆಡಳಿತಾಧಿಕಾರಿಗಳಾದ ಜಗದೀಶ್ವರಿ ಶಿವಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ 20 ದಿನಗಳ ಕಾಲ ವಿಶೇಷ ನುರಿತ ರಂಗ ತಜ್ಞರಿಂದ ಯುವರಂಗ ತರಬೇತಿ ಶಿಬಿರವನ್ನು ಪೆ.9 ರಿಂದ ಪೆ.28ರವರೆಗೆ ಏರ್ಪಡಿಸಲಾಗುವುದು. ತರಬೇತಿಯ ನತಂರ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನವನ್ನು ಮಾರ್ಚ್ ಮೋದಲ ವಾರದಲ್ಲಿ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಶೈಕ್ಷಣಿಕ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಲು ಈ ರಂಗ ತರಬೇತಿ ಸಹಕಾರಿಯಾಗಲಿದೆ. ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಯಸುವ ಕಾಲೇಜುಗಳ ಮುಖ್ಯಸ್ಥರು ನಿಗದಿತ ಅರ್ಜಿ ನಮೂನೆಯಲ್ಲಿ ಪೆ.5ರೊಳಗೆ ಎಲ್ಲಾ ಅಗತ್ಯ ಮಾಹಿತಿಗಳೊಂದಿಗೆ ರಂಗಾಯಣಕ್ಕೆ ಅರ್ಜಿ ಸಲ್ಲಿಸಬಹುದು ನಿಬಂಧನೆಯುಳ್ಳ ಅರ್ಜಿ ನಮೂನೆಯನ್ನು ಕಲಬುರಗಿ ರಂಗಾಯಣ ಕಚೇರಿಗೆ ಖುದ್ದಾಗಿ ಅಥವಾ ವೆಬ್‍ಸೈಟ್
ಮೂಲಕ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು ರಂಗಾಯಣ ಕಲಬುರಗಿ ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ ಕಲಬುರಗಿ-585105 ದೂ. 08472-227735 ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಹಾಗೂ ಇ-ಮೇಲ್ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ/ವಿಜಯನಗರ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ಅಣ್ಣಾಜಿ ಕೃಷ್ಣಾರೆಡ್ಡಿ ಅವರ ಮೊ:9986752680 ಸಂಪರ್ಕಿಸಬಹುದು.
––-*-