ವಿಜಯನಗರ.. ಕರ್ನಾಟಕದ ಬಡವರ ಹೊಟ್ಟೆ ಮೇಲೆ ಹೊಡೆಯಲು ಬಂದಿದ್ದ ಗುಜರಾತಿಗರನ್ನ ಬಂದಿಸಿ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳುವಲ್ಲಿ ನಮ್ಮ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ 50 ಕೆಜಿ ತೂಕದ 360 ಚೀಲ ಅಕ್ಕಿಯನ್ನ ಕಂಟೇನರ್ ನಲ್ಲಿ ಸಾಗಾಟಮಾಡುತಿದ್ದರು.
ಖಚಿತ ಮಾಹಿತಿ ತಿಳಿದ ಹೊಸಪೇಟೆ ಚಿತವಾಡಗಿ ಪೊಲೀಸರು ಆಹಾರ ನಿರೀಕ್ಷಕ ಅಜಿತ್ ಕುಮಾರ ನೇತೃತ್ವದಲ್ಲಿ 180ಕ್ವಿಂಟಲ್ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ನಗರದ ಮೂಲಕ ಲಾರಿ ಹಾದು ಹೋಗುವ ವಿಷಯ ತಿಳಿಯುತಿದ್ದಂತೆ ಹುಡಾ ಸರ್ಕಲ್ ಬಳಿ ಲಾರಿಯನ್ನ ತಡೆದ ಚಿತವಾಡಗಿ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ.
ಕಂಟೇನರ್ ತುಂಬ ನಮ್ಮ ಬಡವರ ಹೊಟ್ಟೆ ಸೇರುವ ಅಕ್ಕಿಯನ್ನ ಕಡಿಮೆ ಬೆಲೆಗೆ ಖರೀದಿಸಿ ಗುಜರಾತಿಗೆ ಸಾಗಾಟಮಾಡಲು ಮುಂದಾಗಿದ್ದಾರೆ ಕೆಲವು ಅಕ್ರಮ ದಂದೆ ಕೋರರು. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತದ್ದೊಂದು ಕಳ್ಳಸಾಗಾಟದ ದಂದೆ ಹಲವು ದಿನಗಳಿಂದ ನಡೆಯುತಿದ್ದು ಇತ್ತೀಚೆಗೆ ಹೆಚ್ಚಾಗಿತ್ತು. ಅಂತಾದ್ದೆ ಕಳ್ಳ ಸಾಗಾಟಮಾಡುವ ವಿಷಯ ತಿಳಿಯುತಿದ್ದಂತೆ ಏಕಾ ಏಕಿ ದಾಳಿ ನಡೆಸಿ ಕಳ್ಳಸಾಗಾಟಕ್ಕೆ ಬ್ರೇಕ್ ಹಾಕಿದ್ದಾರೆ.
ಇನ್ನು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಲಾರಿ ಚಾಲಕ
ರಾಯಸಾಬಗಿರಿ ತಂದೆ ರಾಜನಾರಾಯಣಗಿರಿ ಮತ್ತು ಲಾರಿ ಕ್ಲೀನರ್ ನೀರಜ್ ಕುಮಾರ ತಂದೆ ರಾಜೇಂದ್ರ ಪ್ರಸಾದ್ ಎಂಬ ಇಬ್ಬರನ್ನ ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂದಿತರಿಂದ 50ಕೇಜಿ ತೂಕದ 360 ಚೀಲದಲ್ಲಿ ತುಂಬಿದ್ದ 180ಕ್ವಿಂಟಲ್ ಅಕ್ಕಿ ಹಾಗೂ ಕಳ್ಳಸಾಗಾಣಿಕೆಗೆ ಬಳಸಿದ್ದ ಗುಜರಾತ್ ಪಾಸಿಂಗನ GJ-02 XX6155 ನಂಬರಿನ ಇಂದು ಕಂಟೇನರ್ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಜಯಪ್ರಕಾಶ್,ಪಿ.ಎಸ್.ಐ.ಸರೋಜ, ಮಹಿಳಾ ಪೊಲೀಸ್ ಪೇದೆ ಶಾರದಾಬಾಯಿ.ಹೆಚ್.ಸಿ.ರಾಜೇಶ, ತಿರುಮಲೇಶ್,ಪಿ.ಸಿ.ಚಂದ್ರಶೇಖರ್ ಬಾಗಿಯಾಗಿದ್ದರು. ತಮ್ಮ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಸ್ಲಾಗಿಸಿದ್ದಾರೆ ವಿಜಯನಗರ ಎಸ್ಪಿ. ಡಾಕ್ಟರ್ ಅರುಣ್ ಕೆ. ಅವರು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.