ವಿಜಯನಗರ…ಹೌದು ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಹೂವಿನ ಹಡಗಲಿ ತಾಲ್ಲೂಕಿನ ಹಿರೇಹಡಗಲಿ ಗ್ರಾಮದಲ್ಲಿನ ಇಪ್ಪತ್ತಕ್ಕೂ ಹೆಚ್ಚು ಮನೆಗಳ ಮೆಲ್ಚಾವಣಿ ಬಿರುಗಾಳಿಗೆ ಹಾರಿಹೋಗಿವೆ, ಅದಲ್ಲದೆ ಬೀಸಿದ ಬಾರಿ ಬಿರುಗಾಳಿಗೆ ಮರ ಉರಿಳಿದ ಪರಿಣಾಮ ಕೆಲವು ಮನೆಗಳಿಗೆ ಹಾನಿಯುಂಟಾಗಿತ್ತು, ವಿಷಯ ತಿಳಿದ ಶಾಸಕ ಪಿಟಿ ಪರಮೇಶ್ವರ ನಾಯ್ಕ್ ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸೀಲನೆ ನಡೆಸಿದರು.
ನಂತರ ಹಿರೇ ಬನ್ನಿಮಟ್ಟಿ ಗ್ರಾಮದಲ್ಲಿ ರೈತರ ಜಮೀನು ಮತ್ತು ಬೀರಬ್ಬಿ ಗ್ರಾಮದ ರೈತರ ಜಮೀನಿಗೆ ಕೂಡ ಪಿ.ಟಿ.ಪಿ.ಬೇಟಿ ನೀಡಿ, ಆಗಿರುವ ಬೆಳೆ ಹಾನಿಯನ್ನ ವೀಕ್ಷಣೆಮಾಡಿದರು. ಹಿರೇಬನ್ನಿಮಟ್ಟಿ ಗ್ರಾಮದ ರೈತರು ಬೆಳೆದ ಬತ್ತದ ಬೆಳೆ ಇನ್ನೇನು ಕಟಾವುಮಾಡಬೇಕೆನ್ನುವಷ್ಟರಲ್ಲಿ ನಿನ್ನೆ ಸಂಜೆ ರಣಮಳೆ ಸುರಿದು ಬತ್ತದ ಬೆಳೆ ನೆಲಕಚ್ಚಿದೆ ಅದೇ ರೀತಿಯ ಬೀರಬ್ಬಿ ಗ್ರಾಮದಲ್ಲಿ ಕೂಡ ಬಾಳೆ ಬೆಳೆ ಗಾಳಿಗೆ ಹಾನಿಗೀಡಾಗಿದ್ದು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಹಾಗಾಗಿ ಈ ಎಲ್ಲಾ ಬೆಳೆ ಹಾನಿ ವೀಕ್ಷಣೆಮಾಡಿದ ಪಿ.ಟಿ. ಪರಮೇಶ್ವರನಾಯ್ಕ್ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇನ್ನು ಇದೇ ವಿಚಾರವಾಗಿ ಹೊಸಪೇಟೆಯ ಸಹಾಯಕ ಆಯುಕ್ತರ ಜೊತೆ ಪೊನ್ ಸಂಭಾಷಣೆ ನೆಡೆಸಿ ಮಳೆ ಹಾನಿಯಿಂದ ನಷ್ಟ ಅನುಭವಿಸಿರುವ ಜನರಿಗೆ ಕೂಡಲೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಹೂವಿನಹಡಗಲಿ ತಾಲೂಕು ಒಂದರಲ್ಲೇ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸರಿ ಸುಮಾರು ಎರಡು ನೂರಕ್ಕು ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದ್ದು ಹಲವು ಮರ ಗಿಡಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಾಗಾಗಿ ನಿನ್ನೆಯ ಅತೀವೃಷ್ಠಿಗೆ ಸರ್ಕಾರ ಕೂಡಲೆ ಸೂಕ್ತ ಪರಿಹಾರ ಕೊಡುವಂತೆ ಮಾಜಿ ಸಚಿವ ಮತ್ತು ಹಾಲಿ ಕೈ ಶಾಸಕ ಪಿಟಿಪಿ ಒತ್ತಾಯಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.