ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು ಇಲ್ಲಿನ ಗ್ರಾಮಸ್ಥರು ಗೆರಾವ್ ಹಾಕಿ ಹೊಸಪೇಟೆ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಹಳ್ಳಿಗಳ ಜನಸಾಮಾನ್ಯರಿಗೆ ನಾವು ಗುಪ್ತಚರ ಇಲಾಖೆಯಿಂದ ಬಂದಿದ್ದೇವೆ ಎಂದು ಸುಳ್ಳು ಮಾಹಿತಿ ನೀಡುವ ಮೂಲಕ, ವಿಧಾನಸಭಾ ಚುನಾವಣೆ ಹಿನ್ನೆಲೆ ನಿಮ್ಮ ಕ್ಷೇತ್ರದಲ್ಲಿ ನಾವು ಮತದಾರರ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಹೇಳುವ ಮೂಲಕ ನಿಮ್ಮ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಯಾರು ಸೋಲಬಹುದು ಎಂದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಇನ್ನು ಸರ್ವೇ ಸಾಮಾನ್ಯವಾಗಿ ಈ ರೀತಿ ಮತದಾರರ ಸಮೀಕ್ಷೆ ಮಾಡಲು ಇಲ್ಲಿನ ಜಿಲ್ಲಾಡಳಿತದ ಪರವಾನಿಗಿ ಪಡೆಯಬೇಕಾಗಿದ್ದು ನಿಯಮ.
ಆದರೆ ಸಮೀಕ್ಷೆ ನಡೆಸುತ್ತಿದ್ದ ಇವರು ಇಲ್ಲಿನ ಜಿಲ್ಲಾಡಳಿತದ ಗಮನಕ್ಕೆ ಇಲ್ಲದೆ ವಿಜಯನಗರ ಕ್ಷೇತ್ರದಲ್ಲಿ ಸರ್ವ ಕಾರ್ಯ ಮಾಡುತ್ತಿದ್ದದ್ದು ಜನ ಸಾಮಾನ್ಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.