ವಿಜಯನಗರ (ಹೊಸಪೇಟೆ ). ಹೊಸಪೇಟೆ ನಗರದ ಪ್ರಮುಖ ರಸ್ತೆಗಳಲ್ಲಿ ನೀವೇನಾದರೂ ಸಂಚಾರ ನಡೆಸುತಿದ್ದರೆ ಕೊಂಚ ಎಚ್ಚರ ವಹಿಸಿ ಸಂಚರಿಸಿ. ಯಾಕೆಂದರೆ ನಗರದ ರಸ್ತೆಗಳಲ್ಲಿನ ಡಿವೈಡರ್ ಗಳಲ್ಲಿ ಬೆಳಕಿನ ಸಂಬಂಧ ಹಾಕಿರುವ ವಿದ್ಯುತ್ ವೈರ್ ಗಳು ನಿಮಗೆ ಅಪಾಯ ತಂದರು ತರಬಹುದು,
ಹೌದು ಹೊಸಪೇಟೆ ನಗರದ ಬಸ್ ನಿಲ್ದಾಣದಿಂದ ರೈಲ್ವೇ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಮತ್ತು ಎಂ. ಪಿ. ಪ್ರಕಾಶ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ಡಿವೈಡರ್ ಗೆ ಸಾಲಾಗಿ ದೀಪದ ಕಂಬಗಳನ್ನ ಹಾಕಲಾಗಿದೆ. ಇಲ್ಲಿನ ಪ್ರತಿ ಕಂಬಕ್ಕೆ ಎರಡು ದೀಪಗಳನ್ನ ಅಳವಡಿಸಲಾಗಿದೆ, ಹೀಗೆ ಅಳವಡಿಸಿರುವ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ವೈರ್ ಗಳನ್ನ ಹಾಕಲಾಗಿದೆ. ಆದರೆ ಹೀಗೆ ಹಾಕಲಾಗಿರುವ ವೈರಗಳ್ಳನ್ನ ಸರಿಯಾದ ರೀತಿಯಲ್ಲಿ ಮುಚ್ಚದೆ ಹಾಗೆ ಬಿಡಲಾಗಿದೆ.
ಇದರ ಪರಿಣಾಮ ದಾರಿಯಲ್ಲಿ ಹಾದು ಹೋಗುವ ಜನ ಜಾನುವಾರುಗಳನ್ನು ಬಲಿಗಾಗಿ ಕಾದು ಕುಳಿತಂತಿವೆ ಈ ತುಂಡಾದ ವೈರಗಳು. ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಆದಷ್ಟು ಬೇಗ ಎಚ್ಚೆತ್ತು ದಾರಿಯಲ್ಲಿ ಸಂಚಾರಿಸುವ ಜನಸಾಮಾನ್ಯರಿಗೆ ತಾಗುವಂತೆ ಇಳಿ ಬಿದ್ದಿರುವ ವೈರ್ ಗಳ್ಳನ್ನ ಸರಿಯಾಗಿ ಅಳವಡಿಸಬೇಕು, ಇಲ್ಲವಾದರೆ ಬೆಳಕಿನ ಸಂಬಂಧ ಅಳವಡಿಸಿರುವ ಈ ವೈರಗಳು ಯಾರ ಬದುಕಲ್ಲಾದರೂ ಕತ್ತಲು ತರಬಹುದು.
ವರದಿ.. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.