ವಿಜಯನಗರ ( ಹೊಸಪೇಟೆ) ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ
ಗಾಯಕ ಪದ್ಮಶ್ರೀ ಪುರಸ್ಕೃತ ಕೈಲಾಸ್ ಕೇರ್ ಮೇಲೆ ಬಾಟಲಿ ಎಸೆದ ಅಸಭ್ಯ ವರ್ತನೆ ತೋರಿದ್ದಾರೆ ಕೆಲವು ಕಿಡಿಗೇಡಿಗಳು, ಉತ್ಸವದ ಸಮಾರೋಪ ಸಮಾರಂಭದಲ್ಲಿ ಬಾಟಲಿ ಎಸೆದ ಕಿಡಿಗೇಡಿಗಳನ್ನ ಬೆನ್ನು ಹತ್ತಿದ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.
ಹಂಪಿ ಉತ್ಸವ ಸಮಾರೋಪ ಸಮಾರಂಭದ ಗಾಯತ್ರಿ ಪೀಠದ ವೇದಿಕೆಯಲ್ಲಿ ಈ ಘಟನೆ ನಡೆದಿದ್ದು, ಕನ್ನಡದ ಹಾಡುಗಳನ್ನು ಹಾಡಲಿಲ್ಲವೆಂದು ಪೇಕ್ಷಕರ ಗ್ಯಾಲರಿಯಿಂದ ನೀರು ಸಮೀತ ಬಾಟಲಿ ಎಸೆದಿದ್ದಾರೆ,
ಆದರೆ ಗಾಯಕ ಕೈಲಾಶ್ ಕೇರ್ ಮಾತ್ರ ಬಾಟಲಿ ಎಸೆದ ಮೇಲೂ ಗಾಯನ ಮುಂದುವರಿಸಿ ತಮ್ಮ ಪ್ರೌಡಿಮೆಯನ್ನ ಮೆರೆದಿದ್ದಾರೆ. ಆದರೆ ವಾಟರ್ ಬಾಟಲ್ ಎಸೆದ ಕಿಡಿಗೇಡಿಗಳ ಹೆಸರನ್ನ ಮಾತ್ರ ಪೊಲೀಸರು ಬಹಿರಂಗ ಪಡಿಸಿಲ್ಲ. ಇತ್ತೀಚಿಗೆ ಸೆಲೆಬ್ರಿಟಿಗಳ ಮೇಲೆ ಈ ರೀತಿಯಾಗಿ ವಸ್ತುಗಳನ್ನ ಎಸೆಯುವುದು ಅವಮಾನ ಮಾಡುವುದು ಹೆಚ್ಚಾಗಿದೆ.
ಇತ್ತೀಚಿಗೆ ನಟ ದರ್ಶನ್ ಮೇಲೆ ಕೂಡ ಕೆಲವು ಕಿಡಿಗೇಡಿಗಳು ಶೂ ಎಸೆದು ಅವಮಾನ ಎಸೆಗಿದ್ರು, ಇದೀಗ ಕೈಲಾಶ್ ಕೇರ್ ಮೇಲೆ ನೀರಿನ ಬಾಟಲಿ ಎಸೆದು ಅವಮಾನ ಮಾಡಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಈ ಭಾಗಕ್ಕೆ ಕಲಾವಿದರು ಬರುವುದಕ್ಕೆ ಹಿಂಜರಿಯುತ್ತಾರೆ. ಇಂಥ ಕಿಡಿಗೇಡಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಾಗಿದೆ.