ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸರು ಭರ್ಜರಿ ಕಾರ್ಯಚಾರಣೆ ಮಾಡುವ ಮೂಲಕ ಕೋಟಾನೋಟು ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ.
ಬಂಧಿತ ಆರೋಪಿಗಳು.
1)ನರೇಂದ್ರ ಪ್ರಸಾದ್ ಎನ್.ಪಿ ತಂದೆ ಎನ್ ಪರಸಪ್ಪ
2)ಟಿ. ಕುಮಾರ ಸ್ವಾಮಿ ತಂದೆ ಲೇಟ್ ಅಂಜಿನಪ್ಪ
3)ಮಹಮ್ಮದ್ ರಿಯಾನ್ ತಂದೆ ಮಹಮ್ಮದ್ ಷರೀಫ್
4)ಬಿ. ಬಾಬು ತಂದೆ ಶೇಖ್ ಸಾಬ್
5)ಮಹಮ್ಮದ್ ಅಖಿಲ್ ತಂದೆ ಅಬ್ದುಲ್ ಹಸೇನ್.


ಈ ಐದು ಜನ ಬಂಧಿತ ಆರೋಪಿಗಳಿಂದ 500 ರೂ ಮುಖಬೆಲೆಯ 80 ಖೋಟಾ ನೋಟ್‌ಗಳು, ಪ್ರಕರಣದಲ್ಲಿ ಭಾಗಿಯಾದ ಒಂದು ಗೂಡ್ಸ್ ವಾಹನ, ಎರಡು ಮೋಟಾರ್ ಸೈಕಲ್‌ಗಳು, 5 ಮೊಬೈಲ್ ಪೋನ್‌ಗಳು ಅಂದಾಜು 4,50,000/-ರೂ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ……
ಜಿಲ್ಲೆಯ ಹರಪನಹಲ್ಲಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರಾ ಸಮಯದಲ್ಲಿ ಹಾಕಿದ ಶ್ರೀಮಾತ ಅಮ್ಯೂಸ್‌ಮೆಂಟ್ ಪಾರ್ಕ್‌ನ ಮಾಲೀಕರಾದ ಶ್ರೀ ವೀರಭದ್ರಪ್ಪ ಹೆಚ್.ಕೆ ರವರು ಆಟಿಕೆಗಳನ್ನು ನಡೆಸುವ ಜಾಗದಲ್ಲಿ ಯಾರೋ ಇಬ್ಬರು ವ್ಯಕ್ತಿಗಳು 500/- ರೂ ಮುಖ ಬೆಲೆಯ ಎರಡು ಖೋಟಾ ನೋಟ್‌ಗಳನ್ನು ಚಲಾವಣೆ ಮಾಡಿದ್ದರು.


ಈ ಬಗ್ಗೆ ದೂರು ನೀಡಿದ್ದು, ದೂರಿನ ಮೇರೆಗೆ ಅರಸೀಕೆರೆ ಪೊಲೀಸ್ ಠಾಣೆಯ ಗುನ್ನೆ ಸಂ 180/2025 ರಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿತರ ಪತ್ತೆಗಾಗಿ ವಿಜಯನಗರ ಜಿಲ್ಲೆಯ ಎಸ್.ಪಿ. ಹಾಗೂ ಹೆಚ್ಚುವರಿ ಎಸ್. ಪಿ. ಯವರು ಶ್ರೀ ಸಂತೋಷ ಚೌವ್ಹಾಣ್ ಡಿ.ಎಸ್.ಪಿ ಹರಪನಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಚಾರಣೆ ಪ್ರಾರಂಭಿಸಿದ್ದರು.


ಸಿ.ಪಿ.ಐ,ಗಳಾದ ಮಹಾಂತೇಶ ಸಜ್ಜನ್, ಹಾಗೂ ವಿಕಾಸ್ ಲಮಾಣಿ, ಮತ್ತು ಪಿ.ಎಸ್.ಐ. ವಿಜಯಕೃಷ್ಣ, ಮತ್ತು ಕಿರಣ್ ಕುಮಾರ ಹಾಗೂ ಸಿಬ್ಬಂದಿಗಳಾದ ಆನಂದ. ರವಿದಾದಪುರ, ಮಾಲತೇಶ, ಸಿದ್ದಿ ಮುಬಾರಕ್, ಯರಿಸ್ವಾಮಿ, ವಸಂತಕುಮಾರ, ಯು ದಾದಪೀರ, ಹಸನ್‌ಸಾಬ್, ಕೆ ಗುರುರಾಜ, ಹರೀಶ್ ದೇವರಟ್ಟಿ, ಮತ್ತಿಹಳ್ಳಿ ಕೊಟ್ರೇಶ. ಗುರಾನಾಯ್ಕ, ರವಿನಾಯ್ಕ, ಅಜ್ಜಪ್ಪ ಹೆಚ್, ಹಾಗೂ ಕರಿಬಸಪ್ಪ ಇ, ಸಿ.ಡಿ.ಆರ್ ವಿಭಾಗ ಸಿಬ್ಬಂದಿ ಕುಮಾರನಾಯ್ಕ ಹಾಗೂ ಜೀಪ್ ಚಾಲಕರಾದ ನಾಗರಾಜನಾಯ್ಕ ರವರುಗಳನ್ನು ಒಳಗೊಂಡ ತಂಡವು ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ 5 ಜನ ಆರೋಪಿತರನ್ನು ಬಂಧಿಸಿ, ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕನನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.
ಸದರಿ ತಂಡದ ಕಾರ್ಯಚರಣೆಯನ್ನು ಶ್ರೀಮತಿ ಜಾಹ್ನವಿ, ಎಸ್. ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶ್ರೀ ಮಂಜುನಾಥ ಜಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕರು ರವರು ಪ್ರಶಂಸಿಸಿದ್ದಾರೆ.
ವರದಿ : ಸುಬಾನಿ ಪಿಂಜಾರ. ಹಂಪಿ ಮಿರರ್ ವಿಜಯನಗರ.
