
ಬಳ್ಳಾರಿ :ಸರ್ಕಾರದಿಂದ ಸಬ್ಸಿಡಿ ದರದ ಮೇಲೆ ರೈತರಿಗೆ ವಿತರಿಸಲಾದ ಯೂರಿಯಾ ಗೊಬ್ಬರವನ್ನು ರೈತರಿಂದಲೇ ಕಡಿಮೆ ಬೆಲೆಗೆ ಖರೀದಿಸಿ, ಅದೇ ಗೊಬ್ಬರವನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲವೊಂದನ್ನ ಬಳ್ಳಾರಿಯ ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಈ ಸಂಭಂದ ಬಳ್ಳಾರಿ ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಒಟ್ಟು ಏಳು ಜನಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿತರ ಹೆಸರು ಈ ಕೆಳಗಿಂಣಂತಿವೆ.
1.ರತ್ನರಾಜ್ @ಎಡ್ರಿನ್ ತಂದೆ ಯಲ್ಲಪ್ಪ,
2.ಶಾಕೀರ್ ನಲಿ@ಹುಸೇನ್
3. ರಮೇಶ, ರಾಮೇಶ್ವರಿ ಟ್ರೇಡರ್ಸ್,
4. ಹನುಮಂತ, ಕಗ್ಗಲ್ಲಯ್ಯ ಟ್ರೇಡರ್ಸ್,
5. ರೆಹಮತ್ ಹುಸೇನ್
6. ವಿಪಿನ್ @ ಕಾರ್ತಿಕ್
7. ಗೋಡಾನ್ ಮಾಲೀಕರಾದ ಲಕ್ಷ್ಮಣ.



ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ಕೈಗಾರಿಕಾ ಪ್ರದೇಶದ, ಹಂತ 4, ಅಪ್ಯಾರಲ್ ಪಾರ್ಕ್, ಪ್ಲಾಟ್ ಸಂಖ್ಯೆ 81 ರಲ್ಲಿರುವ ಗೋಡೌನ್‌ನಲ್ಲಿ ಸಂಗ್ರಹಿಸಿದ್ದ ಅಂದಾಜು ಹತ್ತು ಲಕ್ಷ ಮೌಲ್ಯದ ಯೂರಿಯಾ ಗೊಬ್ಬರವನ್ನ ವಶಕ್ಕೆಪಡೆದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
