ವಿಜಯನಗರ.. ಹೌದು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯನ್ನ ಸಿ.ಎಂ.ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡುವ ಮೂಲಕ ಮುಂದಿನ ವಿದಾನಸಭ ಚುನಾವಣೆಗೆ ಬಿಜೆಪಿ ಈಗಿನಿಂದಲೇ ರಣತಂತ್ರ ಎಣಿಯಲು ಹವಣಿಸುತ್ತಿದೆ. ಈ ಸಂಭಂದ ಹೊಸಪೇಟೆ ನಗರದ ಭಟ್ಟರ ಹಳ್ಳಿ ಆಂಜನೇಯ ದೇವಸ್ಥಾನದ ಬಳಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಕರ್ಚುಮಾಡಿ ಹವಾ ನಿಯಂತ್ರಿತ ಬೃಹತ್ ವೇದಿಕೆ ನಿರ್ಮಾಣಮಾಡಲಾಗಿದ್ದು ರಾಜ್ಯದ ಬಿಜೆಪಿ ಶಾಸಕ ಸಚಿವ ಸೇರಿದಂತೆ ರಾಷ್ಟ್ರೀಯ ನಾಯಕರು ಕೂಡ ಸಭೆಯಲ್ಲಿ ಬಾಗಿಯಾಗಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಮತ್ತು ಬಿಜೆಪಿಯ ಶಾಸಕ ಸಚಿವರಿಗೆ ಮಾತ್ರ ಈ ಹವಾ ನಿಯಂತ್ರಿತ ವೇದಿಕೆಯಲ್ಲಿ ಆಸನಗಳು ವ್ಯವಸ್ಥೆ ಮಾಡಲಾಗಿತ್ತು, ಆದರೆ ಸಾಮಾನ್ಯ ಕಾರ್ಯಕರ್ತನಿಗೆ ಮಾತ್ರ ಈ ಸಭೆಯಲ್ಲಿ ಪ್ರವೇಶ ಇರಲಿಲ್ಲ. ಆದರೆ ಕೋಟಿಗಟ್ಟಲೆ ಹಣ ಕರ್ಚುಮಾಡಿದ್ದ ಈ ಹವಾ ನಿಯಂತ್ರಿಣದ ವೇದಿಕೆಯ ಮುಂಬಾಗದ ಆಸನಗಳು ಕಾಲಿ ಕಾಲಿಯಾಗಿದ್ದು ಕಂಡು ಬಂತು.
ಸುಮಾರು ಆರು ನೂರಕ್ಕೂ ಹೆಚ್ಚು ಕುರ್ಚಿಗಳ ವ್ಯವಸ್ಥೆಮಾಡಲಾಗಿತ್ತು, ಆದರೆ ಸರಿ ಸುಮಾರು ಎರಡು ನೂರಕ್ಕೂ ಹೆಚ್ಚು ಕುರ್ಚಿಗಳು ಕಾಲಿ ಕಾಲಿ ಇರುವುದು ಕಂಡು ಬಂತು. ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದ ಸಿ.ಎಂ.ಬಸವರಾಜ ಬೊಮ್ಮಾಯಿಯವರು ಮಾತನಾಡುವ ಸಂದರ್ಭದಲ್ಲಿ ವೇದಿಕೆಯ ಮುಂಬದಿಯ ಕುರ್ಚಿಗಳಲ್ಲಿ ರಾಜ್ಯ ಸರ್ಕಾರದ ಸಚಿವರು ಮತ್ತು ಶಾಸಕರು ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖ ಕಾರ್ಯಕರ್ತರು ಕುಳಿತುಕೊಂಡಿದ್ದರು, ಆದರೆ ಹಿಂಬದಿಯಲ್ಲಿದ್ದ ಸುಮಾರು ನೂರಕ್ಕು ಹೆಚ್ಚು ಟೇಬಲ್ ಗಳು ಕಾಲಿ ಕಾಲಿಯಾಗಿದ್ದವು.
ಪ್ರತಿಯೊಂದು ಟೆಬಲಗೆ ಎರಡು ಕುರ್ಚಿಗಳನ್ನ ಅಳವಡಿಸುವ ಮೂಲಕ ಸುಸಜ್ಜಿತ ವ್ಯವಸ್ಥೆಮಾಡಲಾಗಿದ್ದರು ಕೂಡ ಬಿಜೆಪಿ ಕಾರ್ಯಕರ್ತರ ಕೊರತೆ ಕಾರ್ಯಕಾರಣಿ ಸಭೆಯಲ್ಲಿ ಎದ್ದು ಕಂಡಿದ್ದು ಸತ್ತ್ಯ.ಎರಡು ದಿನಗಳ ಕಾಲ ನಡೆಯುವ ಈ ಬಿಜೆಪಿ ರಾಜ್ಯ ಕಾರ್ಯಕಾರಣಿ ಮೊದಲ ದಿನದ ಸಭೆ ಯಶಸ್ವಿಯಾಗಲಿಲ್ಲ ಎನ್ನುವುದನ್ನ ಈ ದೃಷ್ಯಗಳನ್ನ ಸಾಭೀತುಪಡಿಸಿದರೆ, ನಾಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಾಗವಹಿಸುವುದರಿಂದ ರಾಜ್ಯದ ನಿಗದಿತ ಎಲ್ಲಾ ಕಾರ್ಯಕರ್ತರು ಬಾಗಿಯಾಗುವ ಮೂಲಕ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯನ್ನ ಯಶಸ್ವಿಗೊಳಿಸುತ್ತಾರ ಎಂದು ಕಾದು ನೋಡಬೇಕಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.