ವಿಜಯನಗರ..ವಾಹನಗಳ ನಂಬರ್ ಪ್ಲೇಟ್ ಮೇಲೆ ಅನಗತ್ಯ ಬರಹಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆ ಇಂದು ಬೆಳಗ್ಗೆ ಹೊಸಪೇಟೆ ನಗರದಲ್ಲಿ ಆರ್.ಟಿ.ಒ ಅಧಿಕಾರಿಗಳು, ನಗರದ ಪ್ರಮುಖ ರಸ್ತೆಯಲ್ಲಿ ನಿಂತಿದ್ದ ವಾಹನಗಳ ನಂಬರ್ ಪ್ಲೇಟ್ ಮೇಲೆ ಅನಗತ್ಯವಾಗಿ ಬರೆಯಿಸಿರುವ ಬರಹಗಳನ್ನ ಹೊಂದಿದ್ದ ನಂಬರ್ ಪ್ಲೇಟ್ ಗಳನ್ನ ತೆರವುಗೊಳಿಸುವ ಕಾರ್ಯ ಮಾಡಿದರು.
ನಗರದ ಶ್ರೀ ರಾಮುಲು ಪಾರ್ಕ್ ಮುಂಬಾಗದಲ್ಲಿ ನಿಂತಿದ್ದ ಖಾಸಗಿ ಬ್ಯಾಂಕ್ ವಾಹನದ ನಂಬರ್ ಪ್ಲೇಟ್ ಮೇಲೆ ಬರೆಯಿಸಿದ್ದ ಬರಹಗಳನ್ನ ತೆರವುಗೊಳಿಸಿದ ಅಧಿಕಾರಿಗಳು, ನಂತರ ರಸ್ತೆಯಲ್ಲಿ ಸಂಚರಿಸುತಿದ್ದ ವಾಹನವನ್ನ ತಡೆದು ಕೂಡ ಅನಗತ್ಯ ಬೋರ್ಡ್ ಗಳನ್ನ ತೆರವುಗೊಳಿಸಿದರು, ಅದಲ್ಲದೆ ವಾಹನ ಮಾಲೀಕರಿಗೆ ಸರ್ಕಾರ ಜಾರಿಗೊಳಿಸಿರುವ ಆದೇಶದ ಮಾಹಿತಿ ನೀಡಿದರು. ಸರ್ಕಾರಿ ವಾಹನವನ್ನ ಹೊರತುಪಡಿಸಿ ಇನ್ನುಳಿದ ಯಾವುದೇ ವಾಹನಗಳಿಗೂ ನಂಬರ್ ಪ್ಲೇಟ್ ಮೇಲೆ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು,ಪತ್ರಕರ್ತರು, ವೈಧ್ಯರು,ವಕೀಲರ,ಪೊಲೀಸರು,ಸಂಘಟನೆಯ ಹೆಸರಲ್ಲಿ ಬರೆಯಿಸಿರುವ ಬೋರ್ಡ್ ಗಳನ್ನ ಯಾವುದೇ ಕಾರಣಕ್ಕೆ ಅಳವಡಿಕೆಮಾಡದಂತೆ ಸೂಚಿಸಿದರು.
ಮೊದಲನೆ ಹಂತದಲ್ಲಿ ನಂಬರ್ ಪ್ಲೇಟನ್ನ ತೆರವುಗೊಳಿಸುವ ಅಧಿಕಾರಿಗಳು ಆ ಸಂದರ್ಭದಲ್ಲಿ ಒಂದು ಎಚ್ಚರಿಕೆಯ ಪತ್ರವನ್ನ ಕೈಗಿಡುತ್ತಾರೆ, ಒಂದುವೇಳೆ ಎರಡನೆ ಬಾರಿಯೂ ಅದೇ ತಪ್ಪನ್ನ ಮಾಡಿದರೆ ವಾಹನವನ್ನ ಬ್ಲಾಕ್ ಲೀಸ್ಟ್ ಗೆ ಸೇರ್ಪಡೆಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ, ಅದಲ್ಲದೆ ತಮ್ಮ ವಾಹನಗಳು ಸುಂದರವಾಗಿ ಕಾಣಲು ಕೆಲವು ಮಾಲೀಕರು ಬಂಪರ್ ಸೇರಿದಂತೆ ಅಲ್ಟ್ರೇಷನ್ ಮಾಡಿಸುವುದು ಕೂಡ ತಪ್ಪು,ಇಂತಾ ವಾಹನಗಳ ಮಾಲೀಕರಿಗೆ ಕೂಡ ಎಚ್ಚರಿಕೆ ನೀಡಿದ್ದಾರೆ ಇಂದು, ಒಟ್ಟಿನಲ್ಲಿ ಕೆಂದ್ರ ಸರ್ಕಾರ ಹಲವು ವರ್ಷಗಳ ಹಿಂದೆಯೇ ಇಂತದ್ದೊಂದು ಕಾಯ್ದೆ ಜಾರಿಗೆ ತಂದಿದ್ದರು ಅದು ಅನುಷ್ಟಾನಕ್ಕೆ ಬಂದಿರಲಿಲ್ಲ, ಆದರೆ ಇದೀಗ ಅಧಿಕಾರಿಗಳು ನಗರ ಪ್ರದೇಶಗಳನ್ನ ಸಂಚರಿಸಿ ಇಂತಾ ವಾಹನಗಳಿಗೆ ಖಡಿವಾಣ ಹಾಕಲು ಮುಂದಾಗಿರುವುದು ಒಳ್ಳೆಯ ವಿಚಾರವೆ ಸರಿ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.