ವಿಶ್ವ ವಿಖ್ಯಾತ ಹಂಪಿ ಕೇವಲ ಪ್ರವಾಸಿತಾಣ ಮಾತ್ರವಲ್ಲ ಧಾರ್ಮಿಕ ಕ್ಷೇತ್ರವೂ ಹೌದು, ಹಾಗಾಗಿ ವಿಜಯನಗರ ಸಾಮ್ರಾಜ್ಯ ಉದಯವಾಗುವುದಕ್ಕಿಂತ ಮುಂಚಿತವಾಗಿಯೇ ಇಲ್ಲಿ ಹಲವು ದೇವಸ್ಥಾನಗಳು, ಮಠಗಳು, ಸ್ಮಾರಕಗಳು ತಲೆ ಎತ್ತಿರುವ ಉದಾಹರಣೆಗಳು ಸಾಕಷ್ಠಿವೆ, ಅಂತವುಗಳಲ್ಲಿ ಹಂಪಿಯ ಮಾತಂಗ ಪರ್ವತ ಕೂಡ ಒಂದು, ಇಂತಾ ಪುರಾತನ ಇತಿಹಾಸ ಹೊಂದಿರುವ ಈ ಪವಿತ್ರ ಸ್ಥಳ ಇಂದು ಹಾಳು ಬಿದ್ದು ಕೇಳುವವರಿಲ್ಲದಂತಾಗಿದೆ.
ವಿಶ್ವ ವಿಖ್ಯಾತ ಹಂಪಿಯಲ್ಲಿ ಎರಡು ಸಾವಿರದ ನಾಲ್ಕು ನೂರಕ್ಕೂ ಹೆಚ್ಚು ಸ್ಮಾರಕಗಳಿವೆ, ಒಂದು ಸ್ಮಾರಕ ಮತ್ತೊಂದು ಸ್ಮಾರಕದಂತಿಲ್ಲ, ಒಂದೊಂದು ಸ್ಮಾರಕವೂ ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟತೆಯನ್ನ ಹೊಂದಿವೆ, ಅಂತವುಗಳಲ್ಲಿ ಮಾತಂಗ ಪರ್ವತದ ಮೇಲಿರುವ ಮಾತಂಗ ಋಷಿಗಳ ಮಠ ಕೂಡ ಒಂದು, ಸಾವಿರಾರು ವರ್ಷಗಳ ಹಿಂದೆ ಮಾತಂಗ ಋಷಿಗಳು ಇಲ್ಲಿ ಕುಳಿತು ತಪ್ಪಸ್ಸುನ್ನ ಆಚರಿಸುತ್ತಿದ್ರು ಎಂದು ಪುರಾಣಗಳು ಹೇಳುತ್ತವೆ. ಆದ್ರೆ ಇಂತ ಪ್ರಾಮುಖ್ಯತೆಯನ್ನ ಹೊಂದಿರುವ ಈ ಸ್ಥಳ ಇಂದು ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ, ಇದಕ್ಕೆ ಕಾರಣ ಇಲ್ಲಿನ ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ಮತ್ತು ಹಂಪಿ ಅಭಿವೃದ್ದಿ ಪ್ರಾದಿಕಾರದ ನಿರ್ಲಕ್ಷ.
ಹಂಪಿಯ ಅತೀ ಎತ್ತರದ ಪ್ರದೇಶಗಳಲ್ಲಿ ಈ ಮಾತಂಗ ಪರ್ವತ ಕೂಡ ಒಂದು, ಹಾಗಾಗಿ ಹಂಪಿಗೆ ಬರುವಂತ ದೇಶಿ ಮತ್ತು ವಿದೇಶಿಸಿ ಪ್ರವಾಸಿಗರು ಈ ಪರ್ವತವನ್ನ ಮೇಲೆರಿ ಸೂರ್ಯ್ಯಸ್ತ ಮತ್ತು ಸೂರ್ಯ ಉದಯವಾಗುವ ದೃಷ್ಯವನ್ನ ಕಣ್ಣು ತುಂಬಿಕೊಳ್ಳುತ್ತಾರೆ. ಅಷ್ಟೆ ಅಲ್ಲ ಈ ಪರ್ವತದ ಮೇಲೆ ನಿಂತು ನೊಡಿದ್ರೆ ಹಂಪಿಯ ಪ್ರತಿಯೂಂದು ಸ್ಮಾರಕಗಳನ್ನ ಪಕ್ಷಿ ನೋಟದಲ್ಲಿ ನೋಡಬಹುದು. ಹಾಗಾಗಿ ಪ್ರವಾಸಿಗರು ಈ ಪರ್ವತವನ್ನ ಹರ ಸಾಹಸ ಪಟ್ಟು ಮೇಲೇರುತ್ತಾರೆ, ಹೀಗೆ ಬಂದಂತ ಪ್ರವಾಸಿಗರಿಗೆ ಭಯದ ಜೊತೆಗೆ ನಿರ್ವಹಣೆ ಇಲ್ಲದ ಹಾಳು ಮಂಟಪವನ್ನ ಕಂಡು ಬೇಸರವಾಗುವುದಂತೂ ನಿಜ.
ಇನ್ನು ಭದ್ರತೆಯ ದೃಷ್ಠಿಯಿಂದ ಈ ಹಿಂದೆ ಇಲ್ಲಿ ಸಿ.ಸಿ.ಕ್ಯಾಮರಗಳನ್ನ ಸಹ ಹಾಕಲಾಗಿದೆ, ಆದರೆ ಇಲ್ಲಿರುವ ಸಿ.ಸಿ.ಕ್ಯಾಮರಗಳು ಕಣ್ಣಿದ್ದು ಕುರುಡರಂತೆ, ಯಾಕೆಂದ್ರೆ ಅವುಗಳ ನಿರ್ವಹಣೆ ಸಹ ಮಾಡಲಾಗುತ್ತಿಲ್ಲ ಇಲ್ಲಿನ ಪುರಾತತ್ವ ಇಲಾಖೆ, ಹಾಗಾಗಿ ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು ಹೀಗಲಾದ್ರು ಎಚ್ಚತ್ತು ಮಾತಂಗ ಋಷಿಗಳ ಈ ಮಠವನ್ನ ಅಭಿವೃದ್ದಿಪಡಿಸಬೇಕು, ಅದರ ಜೊತೆಗೆ ಇಲ್ಲಿ ಸ್ವಚ್ಚತೆ ಮತ್ತು ಕಾವಲುಗಾರರನ್ನ ನೇಮಿಸಬೇಕೆಂಬುದು ಪ್ರವಾಸಿಗರ ಆಗ್ರಹವಾಗಿದೆ.
ವರದಿ…ಸುಬಾನಿ ಪಿಂಜಾರ ವಿಜಯನಗರ.