You are currently viewing ಬೈಕ್ ಕಳೆದುಕೊಂಡವರೆ ಇತ್ತ ನೋಡಿ, ನಿಮ್ಮ ಬೈಕ್ ಕದ್ದ ಕಳ್ಳ ಇಲ್ಲಿ ಸಿಕ್ಕಿಬಿದ್ದಿದ್ದಾನೆ.

ಬೈಕ್ ಕಳೆದುಕೊಂಡವರೆ ಇತ್ತ ನೋಡಿ, ನಿಮ್ಮ ಬೈಕ್ ಕದ್ದ ಕಳ್ಳ ಇಲ್ಲಿ ಸಿಕ್ಕಿಬಿದ್ದಿದ್ದಾನೆ.

ವಿಜಯನಗರ ಹೊಸಪೇಟೆ : ಅಂತರ್ ಜಿಲ್ಲಾ ಮೊಟಾರ್ ಸೈಕಲ್ ಕಳ್ಳನ ಬಂಧನ.

ರೂ.12 ಲಕ್ಷ 81 ಸಾವಿರ ಬೆಲೆಬಾಳುವ ವಿವಿದ ಕಂಪನಿಗಳ 14 ಮೋಟಾರ್ ಸೈಕಲ್‌ಗಳ ವಶ.

ದಿನಾಂಕ 21/02/2026 ರಂದು ಸಂಜೆ 05-00 ಗಂಟೆಗೆ ಫಿರ್ಯಾದಿದಾರರಾದ ವೆಂಕಟೇಶ್ ಎಲ್ ರವರು ಠಾಣೆಗೆ ಹಾಜರಾಗಿ, ದಿನಾಂಕ 15/02/2026 ರಂದು ಬೆಳಿಗ್ಗೆ 11-40 ಗಂಟೆ ಸುಮಾರಿಗೆ ನನ್ನ ಹಿರೋ ಸ್ಪೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆಎ-35 ಇಬಿ-4166 ಇದರ ಹೊಸಪೇಟೆ ಪಟ್ಟಣದ ಶ್ಯಾನ್‌ ಭಾಗ್ ಟಿಫಿನ್ ರೂಂ ಮುಂಭಾಗದ ಬಸ್ ಸ್ಟ್ಯಾಂಡ್ ಕಡೆಗೆ ಹೋಗುವ ರಸ್ತೆ ಪಕ್ಕದ ನಿಲ್ಲಿಸಿದ್ದ ಮೊಟಾರ್ ಸೈಕಲ್‌ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರು ನೀಡಿದ್ದರು,

ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ( ಗುನ್ನೆ ನಂ. 22/2026 ಕಲಂ. 303(2) ಬಿ.ಎನ್.ಎಸ್. ಕಾಯ್ದೆ ಪ್ರಕಾರ ). ತನಿಖೆ ಕೈಗೊಂಡು ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಸ್.ಜಾಹ್ನವಿ ಐ.ಪಿ.ಎಸ್. ಪೊಲೀಸ್ ಅಧಿಕ್ಷಕರು, ವಿಜಯನಗರ ಜಿಲ್ಲೆ ರವರು ವಿಶೇಷ ತಂಡವನ್ನು ರಚಿಸಿ, ಮಂಜುನಾಥ ಅಡಿಷನಲ್ ಎಸ್.ಪಿ. ಹಾಗೂ ಡಾ: ಮಂಜುನಾಥ ತಳವಾರ, ಡಿ.ಎಸ್.ಪಿ. ಹೊಸಪೇಟೆ ರವರ ಮಾರ್ಗದರ್ಶನದಲ್ಲಿ ಫೈಜುಲ್ಲಾ ಪಿ.ಐ. ಪಟ್ಟಣ ಠಾಣೆ ನೇತೃತ್ವದಲ್ಲಿ ಶ್ರೀ. ರಾಜಶೇಖರ್ (ಕಾ.ಸು) ಶ್ರೀ ಪರಮೇಶ್ವರಪ್ಪ (ತನಿಖೆ) ಹಾಗು ಅಪರಾಧ ಸಿಬ್ಬಂದಿಗಳು ಒಳಗೊಂಡ ತಂಡಕ್ಕೆ ಜವಾಬ್ದಾರಿ ವಹಿಸಿದ್ದರು.

ದಿನಾಂಕ 30/03/2026 ರಂದು ಬೆಳಗಿನ ಜಾವ ಗಸ್ತಿನಲ್ಲಿ ಅಪರಾಧ ಪ್ರಕರಣಗಳ ಪತ್ತೆಕಾರ್ಯದಲ್ಲಿ ತೊಡಗಿದ್ದಾಗ ಅಪರಾಧ ವಿಭಾಗದ ಪಿ.ಎಸ್.ಐ. ಶ್ರೀ ಪರಮೇಶ್ವರಪ್ಪ ಹಾಗು ಸಿಬ್ಬಂದಿಯವರು ಠಾಣಾ ಸರಹದ್ದಿನ ಕನಕದಾಸ ಸರ್ಕಲ್‌ನಲ್ಲಿ ಗಸ್ತಿನಲ್ಲಿ ಇರುವಾಗ ಒಂದು ಮೋಟಾರ್ ಸೈಕಲ್‌ನಲ್ಲಿ ಬರುತ್ತಿದ್ದ ಒಬ್ಬ ವ್ಯಕ್ತಿ ಮೇಲೆ ಅನುಮಾನ ಬಂದು ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ, ತಾನು ತಂದಿರುವ ಮೊಟಾರ್ ಸೈಕಲ್‌ನ್ನು ಕಳ್ಳತನ ಮಾಡಿರುವುದಾಗಿ ಬೆಳಕಿಗೆ ಬಂದಿದೆ.

ನಂತರ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆತನು ತನ್ನ ತಪ್ಪನ್ನು ಒಪ್ಪಿಕೊಂಡು ಹಲವು ದಿನಗಳಿಂದ ಮಾಡಿದ ಬೈಕ್ಕ ಳ್ಳತನ ಬೆಳಕಿಗೆ ಬಂದಿದೆ.

ಇದೇ ಸ್ಥಳಗಳಿಂದ ಬೈಕ್ ಕದ್ದಿರುವುದು..

ಹೊಸಪೇಟೆ-3, ಮುನಿರಾಬಾದ್-1, ಬಳ್ಳಾರಿ-2, ಗದಗ-1, ಸಂಡೂರು-1, ಗಂಗಾವತಿ-1, ಕಂಪ್ಲಿ-1 ಮಂಡ್ಯ-2 ಹಾಗೂ ಇತರೆ ಎರಡು ಕಡೆಗಳಲ್ಲಿ(ವಿಳಾಸ ಪತ್ತೆಯಾಗಿರುವುದಿಲ್ಲ) ನಿಲ್ಲಿಸಿದ್ದ ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುತ್ತೇನೆಂದು ತಿಳಿದು ಬಂದಿದೆ. ನಂತರ ಆತನಿಂದ ಒಟ್ಟು ರೂ. 12,81,000 ರೂ ಬೆಳೆಯ ವಿವಿಧ ಕಂಪನಿಗಳ 14 ಮೊಟಾರ್ ಸೈಕಲ್‌ಗಳನ್ನ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಹೆಸರು:

1) ಮೆಹಬೂಬ್ ತಂದೆ ಸೈಯದ್ ಇಕ್ಟಾಲ್, ಮ: 37 ವರ್ಷ, ಕೂಲಿ ಕೆಲಸ, ವಾಸ: ಪಿಳ್ಳೆ ಹೋಟೆಲ್ ಹತ್ತಿರ ಕೆನಾಲ್ ಪಕ್ಕದಲ್ಲಿ, ಮುನಿರಾಬಾದ್, ಕೊಪ್ಪಳ ತಾ.

ಈತನ ವಿರುದ್ಧ ಈಗಾಗಲೇ ಕೊಪ್ಪಳ ಜಿಲ್ಲೆ ಗಂಗಾವತಿ ಠಾಣೆ ಗುನ್ನೆ ನಂ: 42/2008 ರಲ್ಲಿ ಮೋಟಾರ್ ಸೈಕಲ್ ಕಳ್ಳತನದ ಒಂದು ಪ್ರಕರಣ ಮತ್ತು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಗುನ್ನೆ ನಂ:99/2022 ರಲ್ಲಿ ಮೋಟಾರ್ ಸೈಕಲ್ ಕಳ್ಳತನದ ಒಂದು ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಮಂಜುನಾಥ, ಅಡಿಷನಲ್ ಎಸ್.ಪಿ. ಡಾ: ಮಂಜುನಾಥ ತಳವಾರ, ಡಿ.ಎಸ್.ಪಿ. ಹೊಸಪೇಟೆ ಮಾರ್ಗದರ್ಶನದಲ್ಲಿ ಫೈಜುಲ್ಲಾ ಪಿ.ಐ. ಪಟ್ಟಣ ಠಾಣೆ ನೇತೃತ್ವದಲ್ಲಿ ಪಿ.ಎಸ್.ಐ ಪರಮೇಶ್ವರಪ್ಪ (ತನಿಖೆ). ರಾಜಶೇಖರ್ (ಕಾ.ಸು), ಹಾಗು ಹೆಡ್ ಕಾನ್ಸ್‌ ಟೇಬಲ್ ಗಳಾದ ಬಿ. ರಾಘವೇಂದ್ರ, ಲಿಂಗರಾಜ್, ಚಂದ್ರಶೇಖರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ ಗಳಾದ ಜೆ.ಕೊಟ್ರೇಶ್, ಜೆ.ಪಕ್ಕೀರಪ್ಪ, ದೇವೇಂದ್ರ, ಶಿವಪ್ಪ,ಜಿ ಪಾಲ್ಗೊಂಡಿರುತ್ತಾರೆ. ಇವರ ಕಾರ್ಯವನ್ನು ಎಸ್.ಜಾಹ್ನವಿ ಐ.ಪಿ.ಎಸ್. ಪೊಲೀಸ್ ಅಧಿಕ್ಷಕರು, ವಿಜಯನಗರ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.