You are currently viewing ರಸ್ತೆ ಅಪಘಾತ ಚಿರತೆ ಸಾವು.

ರಸ್ತೆ ಅಪಘಾತ ಚಿರತೆ ಸಾವು.

ವಿಜಯನಗರ (ಹೊಸಪೇಟೆ ) ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಬಳಿ ಇಂದು ಸಂಜೆ ಚಿರತೆಯೊಂದು ಸಾವನಪ್ಪಿದೆ, ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವನಪ್ಪಿದ್ದು, ಚಿಲಕನಹಟ್ಟಿ ಅರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಅನಿಮಲ್ ಕಾರಿಡರ್ ನಿರ್ಮಾಣ ಮಾಡದೆ ಇರುವುದೇ ಘಟನೆಗೆ ಕಾರಣವಾಗಿದೆ.

ಈ ಭಾಗದಲ್ಲಿ ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಲೇ ಇದ್ದರು ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಅನಿಮಲ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕರಡಿ, ಚಿರತೆ, ಸೇರಿದಂತೆ ಇನ್ನು ಹಲವು ಬಗೆಯ ವನ್ಯಜೀವಿಗಳು ಈ ಭಾಗದಲ್ಲಿ ಹೆಚ್ಚಾಗಿದ್ದು, ಈರೀತಿ ರಸ್ತೆ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿವೆ.