ವಿಜಯನಗರ (ಹೊಸಪೇಟೆ ) ಹರಪನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ.
ಪೊಲೀಸರಂತೆ ನಟಿಸಿ, ಬಸ್ಸಿನಲ್ಲಿ ಸಾಗಿಸುತ್ತಿದ್ದ ಬಂಗಾರದ ಆಭರಣಗಳನ್ನು ಲಾಪಟಾಯಿಸಿ ಪರಾರಿ ಆಗುತ್ತಿದ್ದ ಆರೋಪಿಗಳನ್ನ ಬಂದಿಸುವಲ್ಲಿ ವಿಜಯನಗರ ಜಿಲ್ಲೆ ಹರಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂದಿತರಿಂದ 61,25,600/-ರೂ ಬೆಲೆಯ 806 ಗ್ರಾಂ ತೂಕದ ಬಂಗಾರದ ಆಭರಗಳನ್ನು ಹಾಗು ಕೃತ್ಯಕ್ಕೆ ಉಪಯೋಗಿಸಿದ, 3 ಮೊಬೈಲ್ ಗಳನ್ನು ಹಾಗು ಒಂದು ಕೆಎ17 ಎಂಬಿ 8530 ನಂಬರ್ ಕಾರನ್ನು ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದುರ್ಗಾಂಬ ಬಸ್ಸಿನ ಚಾಲಕ 1) ಮಂಜುನಾಥ ತಂದೆ ಮಹೆಶ್ವರಪ್ಪ, 39 ವರ್ಷ. ಹೊಳೆಹೊನ್ನೂರು, ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ. ಹಾಗು ಬಸ್ಸಿನ ಕಂಡಕ್ಟರ್ 2) ಕೃಷ್ಣ ಲಕ್ಕಪ್ಪ ಲಮಾಣಿ, 26 ವರ್ಷ, ಗುತ್ತಲ ತಾಂಡ, ಹಾವೇರಿ ಜಿಲ್ಲೆ. ಹಾಗು( ಪೊಲೀಸರಂತೆ ನಟಿಸಿದ್ದ)
3) ನಿತ್ಯಾನಂತ ತಂದೆ ಕೃಷ್ಣನಾಯ್ಕ, 33 ವರ್ಷ, ಕರೆಕಟ್ಟೆ ಗ್ರಾಮ, ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ, ಈ ಮೂರು ಜನ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣ ನಡೆದ ವಿವರ….
ದಿನಾಂಕ 16-03-2025 ರಂದು ರಾತ್ರಿ 11-00 ಗಂಟೆಗೆ
4 ಜನ ಪ್ರತ್ಯೇಕ ಬಂಗಾರದ ಡಿಸೈನ್ ಮಾಡುವ ಕೆಲಸಗಾರರು ಒಟ್ಟು 806 ಗ್ರಾಂ ಬಂಗಾರದ ಆಭರಣಗಳನ್ನು ತುಂಬಿದ್ದ ಪಾರ್ಸಲ್ ಪೆಟ್ಟಿಗೆಯನ್ನ
ಶಿವಮೊಗ್ಗದಿಂದ, ದಾವಣಗೆರೆ, ಹರಪನಹಳ್ಳಿ, ಹೊಸಪೇಟೆ ಮಾರ್ಗವಾಗಿ ವಿಜಯಪುರಕ್ಕೆ ಹೊರಟಿದ್ದ
ದುರ್ಗಾಬಾ ಬಸ್ಸಿನ ಕಂಡಕ್ಟರ್ ಗೆ ನೀಡಿ ಬಾಕ್ಸ ಮೇಲೆ ಬರೆದ ಫೋನ್ ನಂಬರ್ ಗೆ ಫೋನ್ ಮಾಡಿ ಬಾಕ್ಸ್ ತಲುಪಿಸಲು ಹೇಳಿದ್ದಾರೆ.
ಆದರೆ ಸಂಬಂಧ ಪಟ್ಟವರಿಗೆ ಬಾಕ್ಸ ತಲುಪಿಸಬೇಕಾದ ಕಂಡಕ್ಟರ್ ಕೃಷ್ಣ, ಬಾಕ್ಸಲ್ಲಿ ಬೆಲೆ ಬಾಳುವ ಆಭರಣ ಇರುವುದನ್ನ ಅರಿತು ಅದನ್ನ ಲಪಟಾಯಿಸುವ ಐಡಿಯಾ ಮಾಡಿ ಕೊನೆಗೆ ಪೊಲೀಸರಿಂದ ಕೈಗೆ ಕೊಳ ತೊಡಿಸಿಕೊಂಡಿದ್ದಾನೆ.
ಹೌದು ದಿನಾಂಕ 17-03-2025 ರಂದು ಬೆಳಗಿನ ಜಾವ ಸುಮಾರು 12-30 ಗಂಟೆಗೆ ದುರ್ಗಾಂಭ ಬಸ್ಸಿನ ಕಂಡಕ್ಟರ್ ಕೃಷ್ಣ, ಬಂಗಾರದ ಆಭರಗಳ ಪಾರ್ಸೆಲ್ ಇಟ್ಟಿದ್ದ ಒಬ್ಬರಿಗೆ ಫೋನ್ ಮಾಡಿ, ಹರಪನಹಳ್ಳಿ ತಾಲೂಕು ತೆಲಿಗಿಯ ಹತ್ತಿರ ಇಬ್ಬರು ವ್ಯಕ್ತಿಗಳು ಬಸ್ಸನ್ನು ನಿಲ್ಲಿಸಿ ನಾವು ಪೊಲೀಸ್ ನವರು ಎಂದು ಹೇಳಿ ಬಸ್ಸಿನಲ್ಲಿ ಸಾಗಿಸುತಿದ್ದ ಬಂಗಾರ ಪಡೆದು ಹೋಗಿದ್ದಾರೆ, ಅಲ್ಲದೆ ನಾವು ದಾವಣಗೆರೆಯ ಕ್ರೈಂ ಬ್ರಾಂಚಿನ ಪೊಲೀಸರು, ನೀವು ದಾಖಲೆಗಳನ್ನು ನೀಡಿ ಬಂಗಾರದ ಆಭರಣಗಳನ್ನು ಪಡೆದುಕೊಂಡು ಹೋಗಿ ಎಂದು ಪೊಲೀಸರು ಹೇಳಿದ್ದಾರೆ ಎಂದು ಬಾಕ್ಸ ಮೇಲೆ ಬರೆದಿರುವ ಫೋನ್ ನಂಬರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
ಅಲ್ಲದೆ ನನ್ನನ್ನೂ ಸಹ ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆಂದು ತಿಳಿಸಿದ್ದಾನೆ.
ಇದಾದ ಬಳಿಕ, ಕೆಲ ಹೊತ್ತಿನ ನಂತರ ಕೃಷ್ಣ ಅವರ
ಫೋನ್ ಸ್ವಿಚ್ ಆಪ್ ಆಗಿರುತ್ತದೆ. ಇದರಿಂದ ಅನುಮಾನಗೊಂಡ ಬಂಗಾರದ ಆಭರಣಗಳ ಪಾರ್ಸೆಲ್ ಕಳುಹಿಸಿದ್ದ ಒಬ್ಬರಾದ ಕುಮಾರ ಎನ್ನುವ ವ್ಯಕ್ತಿ ಹರಪನಹಳ್ಳಿ ಪೊಲೀಸ್ ಠಾಣೆಗೆ ದಿನಾಂಕ 17-03-2025 ರಂದು ದೂರು ನೀಡಿ ಆಭರಣ ಪತ್ತೆಗೆ ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡ ವಿಜಯನಗರ ಜಿಲ್ಲೆ ಪೊಲೀಸರು.
ಹೌದು ಆರೋಪಿತರ ಪತ್ತೇಗಾಗಿ ಹರಪನಹಳ್ಳಿ ಡಿ. ವೈ. ಎಸ್ಪಿ. ರವರ ನೇತೃತ್ವದಲ್ಲಿ ಸಿಪಿಐ ಹರಪನಹಳ್ಳಿ, ಸಿಪಿಐ ಹೂವಿನಹಡಗಲಿ, ಪಿ.ಎಸ್.ಐ ಹರಪನಹಳ್ಳಿ, ಹೂವಿನಹಡಗಲಿ, ಅರಸಿಕೆರೆ, ಹಲುವಾಗಲು, ಹಿರೇಹಡಗಲಿ ಹಾಗು ಸಿಬ್ಬಂದಿಗಳನ್ನೊಳಗೊಂಡಂತೆ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ, ವಿಜಯಪುರ, ಶಿವಮೊಗ್ಗ, ದಾವಣಗೆರೆ ಕಡೆಗಳಲ್ಲಿ ತನಿಖೆ ಕೈಗೊಂಡು, ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿತರನ್ನು ಮತ್ತು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣವನ್ನು ಪತ್ತೆಮಾಡುವಲ್ಲಿ ಶ್ರಮವಹಿಸಿದ ವೆಂಕಟಪ್ಪ ನಾಯಕ, ಡಿ.ವೈ.ಎಸ್.ಪಿ, ಹರಪನಹಳ್ಳಿ ಉಪವಿಭಾಗ, ನಾಗರಾಜ ಎಂ ಕಮ್ಮಾರ. ಸಿಪಿಐ ಹರಪನಹಳ್ಳಿ, ದೀಪಕ್ ಬೊಸರೆಡ್ಡಿ. ಸಿಪಿಐ ಹೂವಿನಹಡಗಲಿ, ಶಂಭುಲಿಂಗ ಹಿರೇಮಠ, ಪಿ.ಎಸ್.ಐ ಹರಪನಹಳ್ಳಿ, ಕಿರಣ್ ಕುಮಾರ, ಪಿ.ಎಸ್.ಐ ಹಲುವಾಗಲು, ರಂಗಯ್ಯ, ಪಿ.ಎಸ್.ಐ ಅರಸೀಕೆರೆ, ಭರತ್ ಪ್ರಕಾಶ್, ಪಿ.ಎಸ್.ಐ ಹಿರೇಹಡಗಲಿ, ವಿಜಯಕೃಷ್ಣ, ಪಿ.ಎಸ್.ಐ ಹೂವಿನಹಡಗಲಿ ರವರನ್ನೊಳಗೊಂಡ ಹಾಗು ಹರಪನಹಳ್ಳಿ ಉಪವಿಭಾಗದ ಎಲ್ಲಾ ಠಾಣೆಗಳ ಅಪರಾಧ ಪತ್ತೆ ದಳದ ಸಿಬ್ಬಂದಿಯವರು ಹಾಗು ಜಿಲ್ಲಾ ಪೊಲೀಸ್ ಕಛೇರಿಯ ಸಿ.ಡಿ.ಆರ್ ವಿಭಾಗದ ಕುಮಾರ ನಾಯ್ಕ ಸೇರಿದಂತೆ ಇನ್ನಿತರ ಸಿಬ್ಬಂದಿಗಳ ಕಾರ್ಯ ವೈಖರಿಯನ್ನ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಹರಿ ಬಾಬು ಮತ್ತು
ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಲೀಮ್ ಪಾಷಾ,
ರವರು ತಮ್ಮ ಸಿಬ್ಬಂದಿಗಳಿಗೆ ನಗದು ಬಹುಮಾನ ಘೋಷಿಸಿದ್ದಾರೆ.
ವರದಿ :.. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.
