ವಿಜಯನಗರ (ಹೊಸಪೇಟೆ )::ಬೀದಿ ನಾಯಿ ಹಾವಳಿಗೆ 23 ಕುರಿ ಮರಿಗಳು ಬಲಿಯಾದ ಘಟನೆ ವಿಜಯನಗರ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 2:30ರ ಸುಮಾರಿಗೆ ನಡೆದಿದೆ. ಹೊಸಪೇಟೆ ತಾಲೂಕಿನ ಮೆಟ್ರಿ ಮತ್ತು ಹೊನ್ನಾಳಿ ಗ್ರಾಮದ ಬಳಿಯ ಜಮೀನ್ ಒಂದರಲ್ಲಿ ಇದ್ದ ಕುರಿ ಹಟ್ಟಿಗೆ ನುಗ್ಗಿದ ಬೀದಿ ನಾಯಿ, ಚಿಕ್ಕ ಚಿಕ್ಕ 23 ಕುರಿ ಮರಿಗಳನ್ನು ಕೊಂದು ತಿಂದು ಹಾಕಿದೆ.
ಬೈಲದಿಗೇರಿ ಗ್ರಾಮದ ಕೆ. ಎಸ್ ಜಡೇಶ್ ಮತ್ತು ಉತ್ತಮ ಕುಮಾರ್ ಎಂಬವರಿಗೆ ಸೇರಿದ ಕುರಿ ಮರಿಗಳಾಗಿದ್ದು. ಬೀದಿ ನಾಯಿಗಳ ಹಾವಳಿಯಿಂದ ದಿಕ್ಕು ತೋಚದಂತೆ ಕಂಗಾಲಾಗಿರುವ ಕುರಿ ಗಾಯಗಳು ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚಿದ್ದಾರೆ.
ಈ ಕುರಿತು ಹೊಸಪೇಟೆಯ ಪಶು ವೈದ್ಯಾಧಿಕಾರಿ ಬಸವರಾಜ್ ಬೆಣ್ಣಿ ಅವರಿಗೆ ಮಾಹಿತಿಯನ್ನು ನೀಡಿ ಪರಿಹಾರ ಕೇಳಿದರೆ. ನಿಯಮದ ಪ್ರಕಾರ ಮೂರು ತಿಂಗಳಿಗಿಂತ ದೊಡ್ಡದಾಗಿರುವ ಮರಿಗಳು ಸಾವನ್ನಪ್ಪಿದರೆ ಮಾತ್ರ ಸರ್ಕಾರ ಪರಿಹಾರ ಕೊಡುತ್ತೆ, ಚಿಕ್ಕ ಮರಿಗಳಿಗೆ ಪರಿಹಾರ ಕೊಡಲು ಅವಕಾಶ ಇಲ್ಲ ಎಂದಿದ್ದಾರಂತೆ. ಇದರಿಂದ ಕಂಗಲಾಗಿರುವ ಕುರಿಗಳು ಸರ್ಕಾರ ನಮ್ಮಂತವರ ಕಷ್ಟವನ್ನು ಪರಿಗಣಿಸಿ ಕೂಡಲೇ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ವರದಿ ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.