ವಿಜಯನಗರ…ಅಪರೂಪದಲ್ಲಿ ಅಪರೂಪ ಈ ಪ್ರಕರಣ, ಸಹಜವಾಗಿ ಯಾವುದೇ ಕಳ್ಳತನಮಾಡುವ ಖದೀಮರು ಹೆಚ್ಚಾಗಿ ಬೆಲೆ ಬಾಳು ವಸ್ತುಗಳಿಗೆ ಕೈ ಹಾಕಿ ಕಳ್ಳತನಮಾಡುವುದು ಕಂಡು ಬರುತ್ತೆ, ಆದರೆ ಇಲ್ಲಿ ಕದ್ದ ಕುರಿ ಮರಿಗಳನ್ನ ವರ್ಷಾನುಗಟ್ಟಲೆ ಮೇಯಿಸಿ ಅವುಗಳು ದೊಡ್ಡವು ಆದಮೇಲೆ ಅವುಗಳನ್ನ ಮಾರಿ ಹೆಚ್ಚು ಹಣ ಪಡೆಯುವ ಹುಚ್ಚು ಈ ಕುರಿ ಕಳ್ಳರದ್ದು, ಹಾಗಾಗಿ ಕುರಿ ಬದಲಿಗೆ ಅದರ ಮರಿಗಳನ್ನ ಕದ್ದು ಕೊನೆಗೂ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಹೌದು ಇಂತದ್ದೊಂದು ಪ್ರಕರಣ ನಡೆದಿರುವುದು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ.
ಹೌದು ದಿನಾಂಕ 27/06/2022ರ ಬೆಳಗ್ಗೆ ಚೊಗಟೇರಿ ಪೊಲೋಸ್ ಠಾಣೆಗೆ ಬೇಟಿ ನೀಡಿದ
ಗೋಣೆಪ್ಪ ಹನಸಿ, ದುರುಗಪ್ಪ, ದೇವೇಂದ್ರಪ್ಪ, ಮೈದೂರು ಗ್ರಾಮದ ಬಡಮಲ್ಲಾಪುರ ಹನುಮಂತಪ್ಪ, ಎಂಬ ಈ ಕುರಿಗಾಯಿಗಳು 26ನೇ ತಾರೀಕಿನಂದು ಕುರಿ ಹಟ್ಟಿಯಲ್ಲಿ ಬಿಟ್ಟಿದ್ದ ಎಳೆ ಕುರಿಮರಿಗಳನ್ನ ಯಾರೋ ಖದೀಮರು ಕಳ್ಳತನಮಾಡಿರುವುದಾಗಿ ದೂರು ನೀಡಿದ ಕುರಿಗಾಯಿಗಳು, ಕಳ್ಳರನ್ನ ಆದಷ್ಟು ಬೇಗ ಪತ್ತೆ ಹಚ್ಚಿ ಕದ್ದಿರುವ ಕುರಿ ಮರಿಗಳನ್ನ ಪಡೆಯಲು ಚಿಗಟೇರಿ ಪೊಲೀಸರಿಗೆ ದೂರು ಸಲ್ಲಿಸುತ್ತಾರೆ.
ದೂರು ಪಡೆದ ಚಿಗಟೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ನಾಗರಾಜ್ ಜಿ.ಟಿ.ಮತ್ತು ಸಿಬ್ಬಂದಿಗಳಾದ ಶಿವಪ್ರಕಾಶ್, ಲಕ್ಕಪ್ಪ.ಬಿ.ಎಲ್. ಹಾಗೂ ಮಧು, ಮಹೇಶ್,ಬಿ. ಶಶಿಧರ ಬಿ. ಒಳಗೊಂಡ ತನಿಖಾ ತಂಡ ಒಂದೇ ದಿನದಲ್ಲಿ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
1) ಮಾನಪ್ಪರ ಜಯಸಿಂಹ ತಂದೆ ಅಂಜಿನಪ್ಪ.
2)ಕುಂಚೂರು ನಾಗಪ್ಪ ತಾಯಿ ದುರುಗವ್ವ ,
ಈ ಇಬ್ಬರೂ ಆರೋಪಿಗಳು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮುತ್ತಿಗಿ ಗ್ರಾಮದವರಾಗಿದ್ದು, ಆರೋಪಿಗಳನ್ನ ಕದ್ದ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ ಪೊಲೀಸರು, ಇನ್ನು ಈ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ ಎನ್ನಲಾದ ಇನ್ನೂ ಕೆಲವರು ಶೋಧ ಕಾರ್ಯಕ್ಕೆ ಸಹ ಪೊಲೀಸರು ಮುಂದಾಗಿದ್ದಾರೆ. ಸಧ್ಯಕ್ಕೆ ಬಂದಿತರಿಂದ 22ಕುರಿ ಮರಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಕುರಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಹರಪನಹಳ್ಳಿ ಡಿ.ಎಸ್ಪಿ.ಹಾಲಮೂರ್ತಿ ರಾವ್. ಮತ್ತು ಸಿಪಿಐ. ನಾಗರಾಜ್ ಕಮ್ಮಾರ ಮಾರ್ಗದರ್ಶನದಲ್ಲಿ ನಡೆದ ಈ ತನಿಖೆಗೆ ವಿಜಯನಗರ ಎಸ್ಪಿ.ಡಾಕ್ಟರ್ ಅರುಣ್ ಕುಮಾರ್ ಕೆ. ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದು ಅಂಶವೇನಂದ್ರೆ ವಿಜಯನಗರ ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕುರಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು.
ಆದರೆ ಇದೀಗ ಕುರಿ ಮರಿಗಳ ಮೇಲೆ ಕೂಡ ಕಳ್ಳರ ಕಣ್ಣು ಬಿದ್ದಿದೆ. ಕಾರಣ ಕುರಿ ಮೇಯಿಸುವ ಕುರಿಗಾಯಿಗಳು ಹಟ್ಟಿಯಲ್ಲಿರುವ ಕುರಿ ಮರಿಗಳ ಮೇಲೆ ನಿಗಾ ವಹಿಸುವುದು ಕಡಿಮೆ, ತಾವು ಇದ್ದ ಜಾಗದಲ್ಲೇ ಕುರಿ ಮರಿಗಳನ್ನ ಕೂಡಿ ಹಾಕಿ ಹೋಗುವ ಕುರಿಗಾಯಿಗಳು ಕುರಿ ಮೇಯಿಸಿಕೊಂಡು ಸಂಜೆಯೊತ್ತಿಗೆ ಕುರಿ ಹಟ್ಟಿ ಸೇರುತ್ತಾರೆ, ಇಂತಾ ಸಂದರ್ಭಗಳನ್ನ ಕಾದು ಕುಳಿತುಕೊಳ್ಳುವ ಖದೀಮರು ಕುರಿ ಹಟ್ಟಿಯಲ್ಲಿರುವ ಹಿಂಡು ಮರಿಗಳನ್ನೇ ಕದ್ದು ಮಂಗಮಾಯ ಮಾಡುತ್ತಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.