ವಿಜಯನಗರ..ಹತ್ತು ಲಕ್ಷ ಮೌಲ್ಯದ ಹೈವಾ ಟಿಪ್ಪರ್ ಲಾರಿಯನ್ನ ಕಳ್ಳತನಮಾಡಿ ಪರಾರಿಯಾಗುತಿದ್ದ ಖದೀಮನನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತನಿಂದ ಒಂದು ಟಿಪ್ಪರ್ ಲಾರಿ ವಶಕ್ಕೆ ಪಡೆದಿರುವ ಪೊಲೀಸರು ಆತನನ್ನ ತೀರ್ವ ವಿಚಾರಣೆಗೆ ಒಳಪಡಿಸಿದ್ದಾರೆ.
ಹೌದು ಹೊಸಪೇಟೆ ತಾಲೂಕಿನ ಕಾರಿಗನೂರು ಬಳಿಯ ಆರ್.ಬಿ.ಎಸ್.ಎಸ್.ಎನ್. ಕಛೇರಿಯ ಮುಂದೆ ನಿಲ್ಲಿಸಿದ್ದ ಹೈವಾ ಟಿಪ್ಪರ್ ಲಾರಿಯನ್ನ ದಿನಾಂಕ 28 ಮತ್ತು 29 /03/2022 ತಾರೀಕಿನ ಮದ್ಯದಲ್ಲಿ ಕಳ್ಳತನ ಮಾಡಿದ್ದ ತಿಪ್ಪೇಸ್ವಾಮಿ ಎನ್ನುವ ಕಳ್ಳತನದ ಆರೋಪಿ ಲಾರಿ ಸಮೇತ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಜ್ಜಿ ಕ್ಯಾತನಹಳ್ಳಿ ಮೂಲದ ತಿಪ್ಪೇಸ್ವಾಮಿ. ಕಾರಿಗನೂರು ಗ್ರಾಮದ ಮಹೇಶ್ ಎನ್ನುವವರಿಗೆ ಸೇರಿದ ಲಾರಿಯನ್ನ ಕದ್ದು ಪರಾರಿಯಾಗಿದ್ದ, ಈ ಸಂಭಂದ ಮಹೇಶ್ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಮಾಡಿ ತನ್ನ ಲಾರಿ ಹುಡುಕಿಕೊಡುವಂತೆ ಮನವಿಮಾಡಿಕೊಂಡಿದ್ದ, ದೂರು ಆದರಿಸಿದ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟ್ ಶ್ರೀನಿವಾಸ್ ಮೇಟಿ ನೇತೃತ್ವದ ತಂಡ ಆರೋಪಿಯನ್ನ ಮರಿಯಮ್ಮನಹಳ್ಳಿ ಹಳ್ಳಿಯ ಬಳಿಯ ಗರಗ ನಾಗಲಾಪುರ ಬಳಿಯಲ್ಲಿ ಬಂದಿಸಿದ್ದಾರೆ.
ಹೊಸಪೇಟೆ ಡಿ.ವೈ.ಎಸ್ಪಿ.ವಿಶ್ವನಾಥ ರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ತನಿಖೆಯ ನೇತೃತ್ವನ್ನ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ವಹಿಸಿದ್ದರು. ಸಿಬ್ಬಂದಿಗಳಾದ ರಾಘವೇಂದ್ರ, ಕೊಟ್ರೇಶ್ ಏಳಂಜಿ. ಕೊಟ್ರೆಶ್ ಜಿ. ಪ್ರಕಾಶ್.ಕೆ, ಅಡಿವೆಪ್ಪ. ಬಂಡಿಮೇಗಳ ನಾಗರಾಜ್. ಕೆ.ಸುಭಾಸ್.ಆನಂದ್ ಗೌಡ. ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು. ತಮ್ಮ ಸಿಬ್ಬಂದಿಗಳ ಕಾರ್ಯಾಚರಣೆಯನ್ನ ಮೆಚ್ಚಿರುವ ವಿಜಯನಗರ ಎಸ್ಪಿ ಅರುಣ್ ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.