ವಿಜಯನಗರ:…ಆನಂದ್ ಸಿಂಗ್ ಮತ್ತು ನಾನು ಡಬಲ್ ಇಂಜಿನ್ ಇದ್ದಂತೆ, ನಾನು ಆನಂದ್ ಸಿಂಗ್ ಶ್ರೀರಾಮ ಲಕ್ಷ್ಮಣರಿದ್ದಂತೆ, ಆನಂದ್ ಸಿಂಗ್ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ಮನುಷ್ಯ. ಹೌದು ಇದು ಸಾರಿಗೆ ಸಚಿವ ಶ್ರೀರಾಮುಲು ಅವರು ಆನಂದ್ ಸಿಂಗ್ ಅವರನ್ನ ಹೊಗಳಿದ ಪರಿ, ಅದೇ ರೀತಿ ಆನಂದ್ ಸಿಂಗ್ ಕೂಡ ಶ್ರೀ ರಾಮುಲು ಅವರನ್ನ ಹೊಗಳಿದ್ದು ಕಡಿಮೆಯೇನಲ್ಲ, ಶ್ರೀರಾಮುಲು ನನಗಿಂತ ಚಿಕ್ಕ ವಯಸ್ಸಿನವರಾದರು ರಾಜಕೀಯವಾಗಿ ನನ್ನ ಗುರುಗಳು, ನಾವಿಬ್ಬರು ಅಣ್ಣ ತಮ್ಮಂದಿರಿದ್ದಂತೆ, ಶ್ರೀರಾಮುಲು ಒಂದು ರೀತಿಯ ಮಗು ಇದ್ದಂತೆ ಎಂದು ಆನಂದ್ ಸಿಂಗ್ ಕೂಡ ಶ್ರೀ ರಾಮುಲು ಅವರನ್ನ ಹೊಗಳಿದ್ದೇ ಹೊಗಳಿದ್ದು.
ಹೌದು ಹೊಸಪೇಟೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ಉದ್ಘಾಟನೆ ಸಂಭಂದ ಇಂದು ನಡೆದ ಈ ಸರ್ಕಾರಿ ಕಾರ್ಯಕ್ರಮ, ಈ ಇಬ್ಬರ ಸಚಿವರ ಪರಸ್ಪರ ಹೊಗಳಿಕೆಗೆ ಮಾತ್ರ ಸೀಮಿತವಾದಂತೆ ಗೋಚರಿಸಿತ್ತು. ಹೌದು ಹೊಸಪೇಟೆ ನಗರದ ಬಸ್ ನಿಲ್ದಾಣದಲ್ಲಿ ನೂತನಾಗಿ ನಿರ್ಮಾಣಗೊಂಡಿದ್ದ 26 ವಾಣಿಜ್ಯ ಮಳಿಗೆಗಳನ್ನ ಅರ್ಹ ಪಲಾನುಭವಿಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ಹಸ್ತಾಂತರಿಸಲಾಯಿತು. ಸಾರಿಗೆ ಸಚಿವ ಶ್ರೀರಾಮುಲು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಬಂದು ಕಾರ್ಯಕ್ರಮ ಉದ್ಘಾಟಿಸಿ ನಂತರ ನಂತರ ಮಾತನಾಡಿದರು.
ಈ ಸಂದರ್ಭದಲ್ಲಿ ತಮ್ಮ ಮಾತಿನುದ್ದಕ್ಕೂ ಆನಂದ್ ಸಿಂಗ್ ಅವರನ್ನ ಗುಣಗಾನ ಮಾಡಿದ್ದೇ ಹೆಚ್ಚು, ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆ ರಚನೆಗೆ ಹೋರಾಟ ನಡೆಸಿದ್ದು ಸೇರಿದಂತೆ ಬಸ್ ನಿಲ್ದಾಣ ಮತ್ತು ಉದ್ಘಾಟನೆಗೊಂಡ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಸಂಭಂದಿಸಿದಂತೆ ಅವರು ಪಟ್ಟ ಶ್ರಮವನ್ನ ಶ್ರೀರಾಮುಲು ತಮ್ಮದೇ ಶೈಲಿಯಲ್ಲಿ ತಮ್ಮ ಭಾಷಣದುದ್ದಕ್ಕೂ ಕೊಂಡಾಡಿದರು. ಇನ್ನು ಅದಕ್ಕೆ ಪ್ರತಿ ಎನ್ನುಂತೆ ಸಚಿವ ಆನಂದ್ ಸಿಂಗ್ ಅವರು ಕೂಡ ಶ್ರೀರಾಮುಲು ಅವರು ಒಂದು ಮಗು ಇದ್ದಂತೆ ಎಲ್ಲೊ ಇದ್ದ ನನ್ನನ್ನ ಕರೆದೊಯ್ದು ರಾಜಕೀಯದಲ್ಲಿ ನೆಲೆ ಕೊಟ್ಟ ರಾಜಕೀಯವಾಗಿ ನನಗೆ ಗುರುವಾಗಿದ್ದಾರೆ, ನಾವಿಬ್ಬರು ಅಣ್ಣತಮ್ಮಂದಿರು ಇದ್ದಂತೆ ಎಂದು ಆನಂದ್ ಸಿಂಗ್ ಅವರು ಶ್ರೀರಾಮುಲು ಅವರನ್ನ ಪ್ರತಿಯಾಗಿ ಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿದ ಚಾಲಕ ನಿರ್ವಾಹಕರಿಗೆ ಚಿನ್ನದ ಪದಕನ್ನ ನೀಡಿ ಗೌರವಿಸಿದ ಸಚಿವ ಶ್ರೀರಾಮುಲು ಮತ್ತು ಆಂದ್ ಸಿಂಗ್ ಆನಂದ್ ಸಿಂಗ್. ಕಾರ್ಯಕ್ರಮದ ವೇದಿಕೆಯನ್ನ ತಮ್ಮ ಪರಸ್ಪರ ಹೊಗಳಿಕೆಗೆ ಸೀಮಿತಗೊಳಿಸಿದ್ದಂತೂ ಸತ್ಯ.
ಇನ್ನು ಸಚಿವ ಶ್ರೀರಾಮುಲು ಮತ್ತು ಆನಂದ್ ಸಿಂಗ್ ನಡುವಿನ ಇಂದಿನ ಈ ಸಂಭಂದ ನೋಡಿದರೆ, ಎಲ್ಲರಿಗೂ ಖುಷಿಯುಂಟಾಗುತ್ತೆ. ಆದರೆ ವಾಸ್ತವಕ್ಕೆ ಈ ಇಬ್ಬರೂ ಈ ಹಿಂದಿನಿಂದಲೂ ಹೀಗೆ ಇದ್ದರ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಹೌದು ನಾವಿಬ್ಬರು ಡಬಲ್ ಇಂಜಿನ್ ಇದ್ದಂತೆ ಎಂದು ಹೇಳಿಕೊಳ್ಳುವ ಈ ಸಚಿವರ ಪರಸ್ಪರ ಹೊಗಳಿಕೆಯ ಮಾತುಗಳನ್ನ ಕೇಳುತ್ತಾ ಹೋದರೆ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎನ್ನುವ ಮಾತುಗಳು ನೆನಪಾಗುತ್ತದೆ.ಈ ಇಬ್ಬರ ಸ್ನೇಹ ಸಂಭಂದ 2002ರಿಂದ ಪ್ರಾರಂಭವಾದರೂ 2011/12ರಲ್ಲಿ ಇದೇ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಎಣ್ಣೆ ಸೀಗೆಕಾಯಿಯಂತಿದ್ದರು. ಶ್ರೀರಾಮುಲು ಬಿಜೆಪಿಯಿಂದ ಸಿಡುದು ಹೊರಬಂದು ಬಿ.ಎಸ್.ಆರ್.ಪಕ್ಷ ಕಟ್ಟುವ ಮುಂಚಿತವಾಗಿ ಬೀದರ್ ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆದಿಸಿದರು, ಆ ಪಾದಯಾತ್ರೆ ಹೊಸಪೇಟೆ ನಗರಕ್ಕೆ ಬಂದ ಸಂದರ್ಭದಲ್ಲಿ ಹೊಸಪೇಟೆ ನಗರದ ಪ್ರಮುಖ ಬೀದಿಯಲ್ಲಿ ಹಾಕಲಾಗಿದ್ದ ಬ್ಯಾನರ್ ಬಂಟಿಂಗ್ಸಗಳು ಕೆಲವೇ ಗಂಟೆಯಲ್ಲಿ ಮಾಯವಾಗಿದ್ದವು, ಅಲ್ಲದೆ ಅಂದಿನ ಹೊಸಪೇಟೆ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಶ್ರೀರಾಮುಲು ಅವರ ಬಹಿರಂಗ ಸಮಾವೇಶದ ಸ್ಥಳ ಏಕಾಏಕಿ ನಗರದ ಟೌನ್ ರೀಡಿಂಗ್ ರೂಂ ಹಾಲ್ ಗೆ ಶಿಪ್ಟ್ ಆಗಿತ್ತು.
ಇದಕ್ಕೆಲ್ಲ ಕಾರಣ ಆನಂದ್ ಸಿಂಗ್ ಅವರ ದ್ವೇಷದ ರಾಜಕಾರಣ ಎಂದು ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿಯವರು ಆನಂದ್ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ್ದು ಇತಿಹಾಸ. ಇದಾದ ಕೆಲವು ವರ್ಷಗಳ ಕಾಲ ಇವರ ಸಂಭಂದ ಹೀಗೆ ಮುಂದುವರೆದಿತ್ತು. ಇತ್ತೀಚೆಗೆ ಬಳ್ಳಾರಿಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕವಾಗುವ ಸಂದರ್ಭದಲ್ಲಿ ಕೂಡ ಸೋಮಶೇಖರ ರೆಡ್ಡಿಯವರು ಆನಂದ್ ಸಿಂಗ್ ವಿರುದ್ದ ಹರಿಹಾಯ್ದಿದ್ದು ಇನ್ನೂ ಮಾಸಿಲ್ಲ. ಆದರೆ ಇದೀಗ ಏನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಈ ಇಬ್ಬರ ನಡುವಿನ ಸಂಬಂದ ಕಾಣುತ್ತಿದೆ. ಇದನ್ನೆಲ್ಲ ನೋಡಿದರೆ, ಇಲ್ಲಿ ಯಾರು ಯಾರಿಗೂ ಶಾಸ್ವತವಾಗಿ ಶತ್ರುಗಳಲ್ಲ, ಮಿತ್ರರೂ ಅಲ್ಲ, ಅನಿವಾರ್ಯ ಸಂದರ್ಭಗಳು ಮನುಷ್ಯನನ್ನ ಯಾವೆಲ್ಲ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ ಎನ್ನುವುದಕ್ಕೆ ಇದು ಒಂದು ಸಾಕ್ಷಿ ಎನ್ನುವಂತಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.