ವಿಜಯನಗರ….ಹೊಸಪೇಟೆ ನಗರದ ಒಂದು ವೃತ್ತಕ್ಕೆ ನಟ ದಿವಂಗತ ಪುನಿತ್ ರಾಜಕುಮಾರ್ ಹೆಸರು ನಾಮಕರಣಕ್ಕೆ ಒಪ್ಪಿಗೆ ನೀಡಲಾಯಿತು, ಅದರ ಜೊತೆಗೆ ವಿ.ಎನ್.ಸಿ.ಕಾಲೇಜು ಮುಂಬಾಗದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಪುನಿತ್ ರಾಜಕುಮಾರ್ ಹೆಸರು ನಾಮಕರಣಮಾಡಲು ಸಹ ಒಪ್ಪಿಗೆ ನೀಡಲಾಯಿತು. ಕಳೆದ ಕೆಲವು ದಿನಗಳ ಹಿಂದೆ ಪುನಿತ್ ರಾಜಕುಮಾರ್ ಅಭಿಮಾನಿಗಳು ನಗರದ ಶಾನಭಾಗ ಹೊಟೆಲ್ ಮುಂಬಾಗದ ವೃತ್ತದಲ್ಲಿ ಪುನಿತ್ ಬಾವಚಿತ್ರ ಇಟ್ಟು ಪೂಜೆ ಸಲ್ಲಿಸುವ ಮೂಲಕ ಪುನಿತ್ ರಾಜಕುಮಾರ ವೃತ್ತ ಎಂದು ನಾಮಕರಣ ಮಾಡಿದ್ದರು. ಆ ವಿಷಯವನ್ನ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಸುಂಕಮ್ಮ ಮುಖಂಡತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಚುನಾಯಿತ ಸದಸ್ಯರು ಕ್ರೀಡಾಂಗಣಕ್ಕೆ ಮತ್ತು ವೃತ್ತಕ್ಕೆ ನಟ ಪುನಿತ ರಾಜಕುಮಾರ್ ಅವರ ಹೆಸರು ನಾಮಕರಣಮಾಡಲು ಒಪ್ಪಿಗೆ ಸೂಚಿಸಿತು. ಈ ಮೂಲಕ ನಟ ಪುನಿತ್ ರಾಜಕುಮಾರ್ ಅವರ ಮೇಲಿನ ಅಭಿಮಾನವನ್ನ ಹೊಸಪೇಟೆ ನಗರಸಭೆಯ ಸದಸ್ಯರು ಕೂಡ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಮುಂದೂಡಲು ಒತ್ತಾಯ.
ಹೊಸಪೇಟೆ ನಗರಸಭೆಯಲ್ಲಿ ಇಂದು ನಡೆದ ಮೊದಲನೆ ಸಾಮಾನ್ಯ ಸಭೆಯೇ ಗದ್ದಲದ ಗೂಡಾಗಿತ್ತು,ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರ ಪ್ರಸ್ಥಾಪಕ್ಕೆ ಬರುತಿದ್ದಂತೆ 24ನೇ ವಾರ್ಡ್ ಸದಸ್ಯ ಗುಜ್ಜಲ್ ರಾಘವೇಂದ್ರ ವಿರೋಧ ವ್ಯಕ್ತಪಡಿಸಿದರು, ಎಲ್ಲಾ ಸದಸ್ಯರಿಗೆ ಮಾಹಿತಿ ಇಲ್ಲದೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕೃಯೆಯನ್ನ ಮುಂದಿನ ಸಾಮಾನ್ಯ ಸಭೆಯಲ್ಲಿಮಾಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು,ಇನ್ನು ಗುಜ್ಜಲ್ ರಘವೇಂದ್ರ ಅವರ ಮಾತಿಗೆ ಗೌಸ್ ಅವರು ಕೂಡ ದ್ವನಿಗೂಡಿಸಿ ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಪ್ರಕೃಯೆಯನ್ನ ಮುಂದೂಡಿ ಎಂದು ಆಗ್ರಹಿಸಿದರು, ಆದರೆ ಇವರ ವಿರೋಧವನ್ನ ಪರಿಗಣನೆಗೆ ತೆಗೆದುಕೊಳ್ಳದ ಅದ್ಯೆಕ್ಷೆ ಸುಂಕಮ್ಮ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕೃಯೆಗೆ ಚಾಲನೆ ನೀಡೊದರು, ಅದಾದ ಬಳಿಕ ಹನ್ನೊಂದು ಜನ ನಾಮಪತ್ರ ಸಲ್ಲಿಕೆಮಾಡಿದರು.
ಸಲ್ಲಿಕೆಯಾಗಿರುವ ಎಲ್ಲಾ ಸದಸ್ಯರ ನಾಮಪತ್ರ ಸಲ್ಲಿಕೆ ಕ್ರಮಬದ್ದವಾಗಿದ್ದ ಹಿನ್ನೆಲೆಯಲ್ಲಿ ಹನ್ನೊಂದು ಜನರನ್ನ ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.
ಯುಜಿಡಿ.ಮತ್ತು ಕುಡಿಯುವ ನೀರಿನ ಪೈಪ್ ಲೈನ್, ಕಳಪೆ ಕಾಮಗಾರಿಯ ವಿರುದ್ದ ಸಿಡಿದೆದ್ದ ನಗರಸಭೆಯ ಸದಸ್ಯರು.
ಸದಸ್ಯ ರೂಪೇಶ್ ಅವರಿಂದ ಪ್ರಾರಂಭವಾದ ಆಕ್ರೋಶಕ್ಕೆ ಶಿದ್ಲಿಂಗಪ್ಪ ಚೌಕಿನ ಸದಸ್ಯೆ ಮುನ್ನಿ, ಹಾಗೂ ಖದೀರ್ ಕೂಡ ದ್ವನಿಗೂಡಿಸಿ ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.