ದಾವಣಗೆರೆ– ಕಳೆದ ಎರಡು ಮೂರು ವರ್ಷಗಳಿಂದ ಪಡಿತರ ಹಂಚಿಕೆಯಲ್ಲಿ ಆಗುತ್ತಿರುವ ವಂಚನೆಯ ವಿರುದ್ದ ಹೋರಾಟ ನಡೆಸಿ, ಕೊನೆಗೆ ನ್ಯಾಯ ಸಿಗದೆ ಇದ್ದ ಕಾರಣಕ್ಕೆ ಸಾಲುಮರದ ವೀರಾಚಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶೆರಣಾಗಿದ್ದಾರೆ.
ದಾವಣಗೇರಿ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪರಸರ ಪ್ರೇಮಿ. ಮಿಟ್ಲಕಟ್ಟೆಯಲ್ಲಿ ಪಡಿತರ ವಿತರಣೆಯಲ್ಲಿ ಜನರಿಗೆ ವಂಚನೆ ಆಗುತ್ತಿದೆ ಎಂದು ಹೋರಾಟ ನಡೆಸಿದ್ದರು. ಅದಲ್ಲದೆ ನಿನ್ನೆಯಷ್ಟೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಯನ್ನ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರು. ವೀರಾಚಾರಿಯವರು ಕಳೆದ ಎರಡ್ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದು ಎಲ್ಲರಿಗೂ ಗೊತ್ತಿದೆ.
ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 3 ಸಾವಿರ ಮರಗಳನ್ನ ಬೆಳೆಸಿ ನಿತ್ಯ ಪರಿಸರ ಹಾಗೂ ಮರಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.ಈ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೂಡ ವೀರಾಚಾರಿಯವರಿಗೆ ಲಭಿಸಿತ್ತು.
ಇದೀಗ ಹೋರಾಟಕ್ಕೆ ನ್ಯಾಯ ಸಿಗದೆ ಇರುವ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.