ಹಂಪೆ (ವಿಜಯನಗರ ) ಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.
ಸಿ. ಎಸ್. ಆರ್. ಅನುದಾನ ಬಳಸಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಾಹಣೆ, ಯಾರ ಹೊಣೆ ಎಂಬ ಪ್ರಶ್ನೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಾಡತೊಡಗಿದೆ.
ಹೌದು ಇಂತದೊಂದು ಪ್ರಶ್ನೆ ಎದುರಾಗಿರುವುದು ವಿಶ್ವ ವಿಖ್ಯಾತ ಹಂಪಿಯ ವಿಜಯ ವಿಠಲ ದೇವಸ್ಥಾನದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ತನ್ನ ಆದಾಯದ ಒಂದಿಷ್ಟು ಭಾಗವನ್ನ ಸಾಮಾಜಿಕ ಕಾರ್ಯಕ್ಕೆ ಬಳಸುತ್ತೆ ಎನ್ನುವುದು ಈ ದೃಶ್ಯಗಳಲ್ಲಿ ನೋಡಿದರೆ ಕಾಣುತ್ತೆ.

ಆದರೆ ಸಿ. ಎಸ್.ಆರ್ ಅನುದಾನದ ಹಣ ಖರ್ಚು ಮಾಡುವುದೇ ಸಮಾಜ ಸೇವೆ ಎನ್ನುವುದಾದರೆ, ಹೀಗೆ ನಿರ್ಮಾಣ ಮಾಡಿದ ಘಟಗಳ ನಿರ್ವಹಣೆ ಯಾರ ಹೊಣೆ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಹೌದು ಹೀಗೆ ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಾಹಣೆ ಇಲ್ಲದೆ ಹೀಗೆ ಹಾಳು ಬಿದ್ದು ಹೋಗಿವೆ.

ಹಂಪಿ ಪ್ರವಾಸಕ್ಕೆ ಬರುವ ಪ್ರವಾಸಿಗರು ಬಾಯಾರಿಕೆಯಿಂದ ಈ ಶುದ್ಧ ನೀರಿನ ಘಟಕಗಳ ಬಳಿಗೆ ಹೋಗಿ ನೀರು ಕುಡಿಯಲು ಮುಂದಾದರೆ ಒಂದು ಹನಿ ನೀರು ಸಹ ಇಲ್ಲಿ ಸಿಗುವುದಿಲ್ಲ.
ನೋಡುವುದಕ್ಕೆ ಅಚ್ಚು ಕಟ್ಟಾಗಿ ಕಾಣುವ ಈ ಶುದ್ಧ ನೀರಿನ ಘಟಗಳು ಬಾಯಾರಿಕೆ ನೀಗಿಸಲು ಯೋಗ್ಯವಲ್ಲದೆ ಇದ್ದರು, ಇವುಗಳನ್ನ ನಿರ್ಮಾಣ ಮಾಡಿದ ಕಂಪನಿಗಳಿಗೆ ಮಾತ್ರ ದೊಡ್ಡ ಪ್ರಚಾರವನ್ನ ಮಾತ್ರ ಕೊಡುತ್ತಿವೆ.

ನೀರು ಕೊಡದ ಇಂತಾ ನಿರ್ಜಿವ ನೀರಿನ ಘಟಗಳು ಹಂಪಿಯ ಕೆಲವು ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುತ್ತಿವೆ. ಪ್ರಮುಖವಾಗಿ ಹಂಪಿಯ ಕಲ್ಲಿನ ರಥ ಮತ್ತು ಲೋಟಸ್ ಮೆಹಲ್ ಬಳಿಯ ಪಾರ್ಕಿಂಗ್ ಸ್ಥಳಗಳಲ್ಲಿ ಬೆದರು ಬೊಂಬೆಗಳಂತೆ ಬಾಯಾರಿದ ಪ್ರವಾಸಿಗರನ್ನ ಅಣಕಿಸುತ್ತ ನಿಂತಿವೆ.

ಸಿ. ಎಸ್ . ಆರ್ ಅನುಧಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಮಾಡಿ ಜನಸಾಮಾನ್ಯರ ಸೇವೆಯನ್ನ ನಾವು ಮಾಡುತ್ತೇವೆ ಎಂದು ಪ್ರಚಾರ ಪಡೆದುಕೊಳ್ಳುತ್ತಿರುವ ಖಾಸಗಿ ಕಂಪನಿಗಳು ಇವುಗಳ ನಿರ್ವಹಣೆ ಮಾಡುವಲ್ಲಿ ಮಾತ್ರ ಮರೆತು ಹೋಗಿವೆ. ಅದರ ಪರಿಣಾಮ ಘಟಗಳು ಪಾಳು ಬಿದ್ದು ಹೋಗಿವೆ. ಇಂತಾ ಅನಾಥ ಘಟಗಳ ನಿರ್ಮಾಣ ಯಾಕೆ, ಮತ್ತು ಇವುಗಳ ನಿರ್ವಹಣೆ ಯಾರ ಹೊಣೆ ಎಂಬುದು ಕೂಡ ಪ್ರವಾಸಿಗರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಸಂಭಂದ ಪಟ್ಟ ಅಧಿಕಾರಿಗಳು ಇಲ್ಲೇ ಸುತ್ತಾಡಿದರು ಕಣ್ಣಿದ್ದು ಕುರುದರಂತೆ ವರ್ತಿಸುತ್ತಾರೆ. ವಿಶ್ವ ವಿಖ್ಯಾತ ಸ್ಥಳಗಳಲ್ಲಿ ಇಂತ ಪರಿಸ್ಥಿತಿ ನಿರ್ಮಾಣವಾದರೆ ಹೇಗೆ, ಆದಷ್ಟು ಬೇಗ ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಕ್ರಮ ಜರುಗಿಸಬೇಕು ಎನ್ನುವುದು ಪ್ರವಾಸಿಗರ ಒತ್ತಾಯವಾಗಿದೆ.
ವರದಿ : ಸುಬಾನಿ ಪಿಂಜಾರ.
ಹಂಪಿ ಮಿರರ್ ವಿಜಯನಗರ.
