ಸಾಗರ (ಶಿವಮೊಗ್ಗ ಜಿಲ್ಲೆ)
ಸದಾ ಸಂಚಾರ ನಿಯಮ ಹಾಗೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ನಿಮ್ಮ ಜೀವ ರಕ್ಷಿಸಿ ಕೊಳ್ಳಲು ಇದೊಂದೆ ಪರಿಹಾರ ಮಾರ್ಗ ಎಂದು ಕೊಡಚಾದ್ರಿ ಚಿಟ್ ಫಂಡ್ ತಾಲ್ಲೂಕು ಬ್ರಾಂಚ್ ಮ್ಯಾನೇಜರ್ ಶ್ರೀಪತಿ ಹೇಳಿದರು.
ತಾಲ್ಲೂಕಿನ ಸಾಗರ ಟೌನ್ ಪೋಲಿಸ್ ಠಾಣೆ ಎದುರು ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದೆಲ್ಲೆಡೆ ದಿನನಿತ್ಯ ಸಾಕಷ್ಟು ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಬಹುತೇಕ ಅಪಘಾತ ಪ್ರಕರಣಗಳಲ್ಲಿ ತಲೆ ಭಾಗಕ್ಕೆ ಹೆಚ್ಚು ಹಏಟು ಬೀಳುವ ಸಾಧ್ಯತೆ ಇದೆ. ದೇಹದ ಬೇರೆ ಭಾಗಗಳಿಗೆ. ಹಾನಿಯಾದರೆ ಜೀವ ಉಳಿಸಲು ಪ್ರಯತ್ನಿಸಬಹುದು ಆದರೆ ತಲೆಗೆ ಪೆಟ್ಟು ಬಿದ್ದರೆ ಜೀವ ಉಳಿಸುವುದು ಕಷ್ಟ ಸಾಧ್ಯ ಹೀಗಾಗಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು.
ಟೌನ್ ಪೋಲಿಸ್ ಠಾಣೆ ಎದುರು ಆರಂಭಿಸಿದ ಜಾಥಾಕ್ಕೆ ಪೋಲಿಸರು ಸಹಕಾರ ನೀಡಿದರು. ಹೆಲ್ಮೆಟ್ ಧರಿಸದೇ ಬಂದ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು. ನಗರದ ಮಾರಿಗುಡಿ ವೃತ್ತ, ಅಶೋಕ ರಸ್ತೆ, ಬಿ ಹೆಚ್ ರಸ್ತೆಯ ವಿವಿಧ ಭಾಗಗಳಲ್ಲಿ ಜಾಗೃತಿ ಮೂಡಿಸಲಾಯಿತು ಈ ವೇಳೆ ಕೊಡಚಾದ್ರಿ ಚಿಟ್ ಫಂಡ್ ಅಸಿಸ್ಟೆಂಟ್ ಮ್ಯಾನೇಜರ್ ನಾಜಿಮಾ ಭಾನು, ಸಹೋದ್ಯೋಗಿಗಳಾದ ಗುರುಮೂರ್ತಿ ಜಿ, ಆವಿನಾಶ್, ಮುರುಳಿಧರ್ ಇತರರು ಇದ್ದರು.