ವಿಜಯನಗರ (ಹೊಸಪೇಟೆ).. ಬ್ಯಾಂಕಿಗೆ ಹಣ ಕಟ್ಟಲು ಹೋದ ಗುಮಾಸ್ತ ಹಣದ ಮೇಲಿನ ದುರಾಸೆಗೆ ಬಿದ್ದು ಜೈಲು ಸೇರಿದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಯಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿ ಪಟ್ಟಣದ ಎಂ.ಶ್ರೀನಿವಾಸ್ ಶೆಟ್ಟಿ ಎಂಬ ಖಾಧ್ಯ ತೈಲ ವ್ಯಾಪಾರಿಯ ಬಳಿ ಕೆಲಸಮಾಡುತಿದ್ದ ಗುಮಾಸ್ತ ಸಂತೋಷಕುಮಾರನ ಕೈಯಲ್ಲಿ ದಿನಾಂಕ 13/09/2022 ರಂದು ಆರು ಲಕ್ಷ ಹಣವನ್ನ ಕೊಟ್ಟು ನಗರದ ಮಾನವಿ ಬ್ಯಾಂಕಿಗೆ ಸಂದಾಯ ಮಾಡಲು ಕಳಿಸಿದ್ದಾರೆ, ಆದರೆ ಹಣವನ್ನ ತೆಗೆದುಕೊಂಡು ಬ್ಯಾಂಕಿಗೆ ಹೋಗಬೇಕಿದ್ದ ಸಂತೋಷಕುಮಾರ್ ತನ್ನಷ್ಟಕ್ಕೆ ತಾನೆ ಕಣ್ಣಿಗೆ ಕಾರದ ಪುಡಿಯನ್ನ ಎರಚಿಕೊಂಡು ಕಳ್ಳರು ಕಣ್ಣಿಗೆ ಕಾರದ ಪುಡಿ ಎರಚಿ ಹಣ ದೂಚಿದ್ದಾರೆ ಎಂದು ತನ್ನ ಮಾಲೀಕನಿಗೆ ಹೋಗಿ ತಿಳಿಸಿದ್ದಾನೆ
ಇದರಿಂದ ವಿಚಲಿತನಾದ ಶ್ರೀನಿವಾಸ್ ಶೆಟ್ಟಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ ಕಳ್ಳರ ಪತ್ತೆಗೆ ಮನವಿಮಾಡಿಕೊಂಡಿದ್ದಾರೆ. ದೂರು ಪಡೆದು ತನಿಖೆ ಆರಂಭಿಸಿದ ಹಗರಿಬೊಮ್ಮನಹಳ್ಳಿ ಸಿ.ಪಿ.ಐ ಮತ್ತು ಪಿ.ಎಸ್.ಐ ದೂರು ಕೊಟ್ಟ ಶ್ರೀನಿವಾಸ ಶೆಟ್ಟಿ ಗುಮಾಸ್ತನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ತನಿಖೆ ಆರಂಬಿಸಿ ಸತ್ಯಾಂಶ ಬಯಲಿಗೆ ಎಳೆದಿದ್ದಾರೆ,
ಪ್ರಕರಣಕ್ಕೆ ಸಂಭಂದಿಸಿದಂತೆ ಆರು ಲಕ್ಷ ಹಣವನ್ನ ವಶಕ್ಕೆ ಪಡೆದಿರುವ ಪೊಲೀಸರು, ಸಂತೊಷಕುಮಾರ್ ಮತ್ತು ಶ್ರೀಮತಿ ಲಕ್ಷ್ಮಿ ಎಂಬ ಇಬ್ಬರು ಆರೋಪಿಗಳನ್ನ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.ಕೂಡ್ಲಿಗಿ ಡಿ.ವೈ.ಎಸ್ಪಿ. ಹರೀಶ್ ಮಾರ್ಗದರ್ಶನದಲ್ಲಿ ನಡೆದ ಈ ತನಿಖೆಯ ಜವಾಬ್ದಾರಿಯನ್ನ, ಹಗರಿಬೊಮ್ಮನಹಳ್ಳಿ ಸಿ.ಪಿ.ಐ. ಟಿ.ಮಂಜಣ್ಣ ಮತ್ತು ಚಿತ್ವಾಡಿಗಿ ಸಿಪಿಐ ಜಯಪ್ರಕಾಶ ಹಾಗೂ ಹಗರಿಬೊಮ್ಮನಹಳ್ಳಿ ಪಿ.ಎಸ್.ಐ ಸರಳಾ ಜಂಟಿಯಾಗಿ ವಹಿಸಿಕೊಂಡಿದ್ದರು.
ಇವರ ಜೊತೆ ಸಿಬ್ಬಂದಿಗಳಾದ ಆನಂದ್, ರೇವಣಸಿದ್ದಪ್ಪ, ಗುರುಬಸವರಾಜ, ವೀರೇಶ್, ಜಾವೇದ್, ರಘು, ಪ್ರಶಾಂತ್ ಕುಮಾರ್, ಶಿವರಾಜ್ ತನಿಖಾ ತಂಡದಲ್ಲಿ ಬಾಗಿಯಾಗಿದ್ದು, ಘಟನೆ ನಡೆದು ಕೇವಲ 24 ಗಂಟೆಯಲ್ಲೇ ಪ್ರಕರಣ ಬೇಧಿಸಿದ ತಮ್ಮ ತನಿಖಾ ತಂಡಕ್ಕೆ ವಿಜಯನಗರ ಎಸ್ಪಿ ಅರುಣ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್. ವಿಜಯನಗರ.