ವಿಜಯನಗರ…ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್ ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ವ್ಯವಸ್ಥೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಾವಿರಾರು ದರ್ಶನ್ ಅಭಿಮಾನಿಗಳು ವಾಲ್ಮೀಕಿ ವೃತ್ತದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ದರ್ಶನ್, ರಚಿತರಾಮ್, ಸಾಧು ಕೋಕಿಲ, ಹಾಗೂ ಚಿತ್ರತಂಡ, ತೆರೆದ ಲಾರಿಯ ಮೇಲೆ ನಿಂತು ಸಾಂಗ್ ರಿಲೀಸಿಗೆ ಮುಂದಾದರು. ಸಂಡೂರು ಮತ್ತು ಹರಿಹರ ಹಾಗೂ ಹೊಸಪೇಟೆ ನಗರಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳು ಅಭಿಮಾನಿಗಳಿಂದ ಕಿಕ್ಕೇರಿದು ತುಂಬಿತ್ತು. ಸೇರಿದ್ದ ಅಭಿಮಾನಿಗಳ ಹರ್ಷೋದ್ದಗಾರ ಕಂಡ ಚಿತ್ರತಂಡ ಹಿರಿ ಹಿರಿ ಹಿಗ್ಗಿತ್ತು. ಇಂಥ ಸಂಭ್ರಮದಲ್ಲಿ ಕಿಡಿಗೇಡಿ ಒಬ್ಬ ಸೇರಿದ್ದ ಅಭಿಮಾನಿಗಳ ಗುಂಪಿನಿಂದ ಶೂ ಒಂದನ್ನ ದರ್ಶನ್ ಮೇಲೆ ನೇರವಾಗಿ ಎಸೆದು ವಿಕೃತಿ ಮೆರೆದ.
ಕಿಡಿಗೇಡಿ ಎಸೆದ ಶೂ ನೇರವಾಗಿ ದರ್ಶನ್ ಮುಖಕ್ಕೆ ತಾಗಿ ಆ ನಂತರ ಮತ್ತೊಬ್ಬ ಚಿತ್ರತಂಡದ ಸದಸ್ಯನ ಮುಖಕ್ಕೆ ಕೂಡ ತಾಗಿತು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಶೂ ಎಸೆದ ಕಿಡಿಗೇಡಿಯನ್ನ ಪತ್ತೆ ಹಚ್ಚಿ ಕೂಡಲೇ ವಶಕ್ಕೆ ಪಡೆದರು ಬಂಧಿಸಿದ್ದಾರೆ. ಚಿತ್ರದ ನಾಯಕಿ ರಚಿತಾ ರಾಮ್ ಮೈಕ್ ಹಿಡಿದು ಮಾತಾಡುವ ಸಂದರ್ಭದಲ್ಲಿ ಶೂ ಎಸೆಯಲಾಗಿತ್ತು. ಎಸೆದ ಶೂ ದರ್ಶನ್ ಮುಖಕ್ಕೆ ತಾಗಿದ್ರು ಕೂಡ ದರ್ಶನ್ ಕೋಪಿಸಿಕೊಳ್ಳಲಿಲ್ಲ, ಏನು ಬೇಜಾರಿಲ್ಲ ಎಂದು ನಗು ಮುಖದಲ್ಲಿ ರಚಿತರಾಮ್ ಗೆ ಮಾತನ್ನ ಮುಂದುವರಿಸಲು ಹೇಳಿದರು. ಆ ನಂತರ ಏಕಾಏಕಿ ಕಾರ್ಯಕ್ರಮವನ್ನು ಮುಟಕುಗೊಳಿಸಿ ಅಲ್ಲಿಂದ ಮರಳಿದರು.
ಇನ್ನು ಇದಕ್ಕೂ ಮೊದಲು ಸಂಜೆ 7 ಗಂಟೆ ಸುಮಾರಿಗೆ ಹೊಸಪೇಟೆ ನಗರದ ಅಪ್ಪು ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ನೇರವಾಗಿ ವಾಲ್ಮೀಕಿ ವೃತ್ತಕ್ಕೆ ದರ್ಶನ್ ಬಂದಿದ್ರು. ಇದಕ್ಕೂ ಮೊದಲು ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ, ದರ್ಶನ್ ಫ್ಯಾನ್ಸ್ ಮತ್ತು ಪುನೀತ್ ರಾಜಕುಮಾರ್ ಫ್ಯಾನ್ಸ್ ನಡುವೆ ಪೈಪೋಟಿ ಪ್ರಾರಂಭವಾಗಿತ್ತು. ಒಂದು ಗುಂಪು ಪುನೀತ್ ರಾಜಕುಮಾರ್ ಭಾವಚಿತ್ರ ಹಿಡಿದು ಜೈ ಘೋಷ ಕೂಗಿದರೆ. ಮತ್ತೊಂದು ತಂಡ ದರ್ಶನ್ ಪರ ಜಯ ಘೋಷ ಕೂಗುದುಕೆ ಪ್ರಾರಂಭಿಸಿತು. ಆದರೆ ಈ ಪೈಪೋಟಿ ಈ ರೀತಿಯ ಅಪಮಾನಕ್ಕೆ ಕಾರಣವಾಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಕಿಡಿಗೇಡಿ ಶೂ ಎಸೆದಿರುವ ಕ್ರಮವನ್ನು ಖಂಡಿಸಿರುವ ಹೊಸಪೇಟೆ ನಗರದ ಪ್ರಜ್ಞಾವಂತರು ಆತನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ವರದಿ… ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.