ವಿಜಯನಗರ….ಬಿಜೆಪಿ ಪಕ್ಷ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ, ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ, 7 ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಕೊಡುಗೆ ಶೂನ್ಯವಾಗಿದೆ ಎಂದು ಎಂ.ಎಲ್.ಸಿ. ಬಿಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ. ಇಂದು ಹೊಸಪೇಟೆ ನಗರದ ಕಾಂಗ್ರೆಸ್ ಮುಖಂಡ ಹೆಚ್.ಎನ್.ಎಪ್.ಇಮಾಮ್ ನಿಯಾಜಿಯವರ ಕಛೇರಿಯಲ್ಲಿ ಪತ್ರಿಕಾಘೊಷ್ಠಿ ನಡೆಸಿದ ಅವರು ಮಾತಿನುದ್ದಕ್ಕೂ ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣ, ಹರ್ಷ ಕೊಲೆ. ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಜೆಪಿಯವರು ಕೋಮು ಬಣ್ಣ ಬಳಿಯುತಿದ್ದಾರೆ, ಗೃಹ ಮಂತ್ರಿಗಳು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಬೇಕು, ಬಲ್ಲ ಮೂಲಗಳಿಂದ ಮಾಹಿತಿ ಪಡೆದು ಹೇಳಿಕೆ ನೀಡಬಾರದು, ಗೃಹ ಮಂತ್ರಿಗಳು ಒಂದು ರೀತಿ ಮರ ಕೋತಿ ತರ ಆಡ್ತಾ ಇದ್ದಾರೆ, ಸಂವಿಧಾನ ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು,ರಾಗ ದ್ವೇಷ ಇಲ್ಲದೇ ಸರ್ಕಾರ ನಡೆಸಬೇಕು, ಎಲ್ಲಾ ವಿಚಾರಗಳಿಗೂ ಕೋಮು ಬಣ್ಣ ನೀಡಬಾರದು, ಗೃಹ ಮಂತ್ರಿಗಳನ್ನ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಹಿಂದಿ ಬಾಷೆ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿರುವ ಅವರು ಅಮಿತ್ ಶಾ ನಿನ್ನೆ ಹಿಂದಿ ಮಾತನಾಡಬೇಕು ಅಂತಾ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡಿದ್ದಾರೆ, ಶೇ 47 ರಷ್ಟು ಜನರು ಮಾತ್ರ ಹಿಂದಿ ಭಾಷೆ ಮಾತನಾಡುತ್ತಾರೆ,
ಹಿಂದಿ ಜೊತೆ 47 ಭಾಷೆಗಳಿವೆ. ಹಿಂದಿ ಭಾಷೆಯನ್ನ ರಾಷ್ಟ್ರದಲ್ಲಿ ಹೇರಿಕೆ ಮಾಡಲು ಹೊರಟಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅದಲ್ಲದೆ ಅಲ್ಪಸಂಖ್ಯಾತರ ಬಳಿ ವ್ಯಾಪಾರ ಮಾಡಬಾರದು ಎಂಬ ವಿಚಾರದ ವಿರುದ್ದ ಕೂಡ ತಮ್ಮ ಆಕ್ರೋಶ ಹೊರ ಹಾಕಿರುವ ಹರಿಪ್ರಸಾದ್ ಅವರು ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿಯವರು ಅಲ್ಪ ಸಂಖ್ಯಾತರ ಪೆಟ್ರೋಲ ಖರೀದಿ ಮಾಡಲ್ಲ ಅಂತಾ ಹೇಳಲಿ ನೋಡೊಣ, ಗಲ್ಫ್ ರಾಷ್ಟ್ರಗಳ ಪ್ರೆಟೋಲ್ ಬೇಡವೆಂದು ಹೇಳಲಿ ಎಂದಿದ್ದಾರೆ, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತ ಸಂವಿಧಾನ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಬಿಜೆಪಿಯವರು ಎಂದು ಮಾತಿನ ಚಾಟಿ ಬೀಸಿದ್ದಾರೆ. ಹಿಜಾಬ್ ವಿಚಾರವಾಗಿ ನಾತನಾಡಿರುವ ಹರಿಪ್ರಸಾದ್, ಹಿಜಾಬ್ ಮೂಲಕ ಹೆಣ್ಣುಮಕ್ಕಳ ಶಿಕ್ಷಣ ವಂಚನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಬಿಜೆಪಿಯವರು.ಉತ್ತರ ಭಾರತದಲ್ಲಿ ಹಿಂದುಗಳು ಸಹ ಗುಂಗಟ್ ಹಾಕಿಕೊಳ್ಳುತ್ತಿದ್ದಾರೆ, ವಿಧವೆಯರು ಸಹ ಗಂಡ ಸತ್ತ ಮೇಲೆ ತೆಲೆ ಮೇಲೆ ಸೆರಗು ಹಾಕ್ತಾರೆ ಅದನ್ನ ತಗಿಸಲಿ ಬಿಜೆಪಿಯವರು ಎಂದಿದ್ದಾರೆ.
ಇನ್ನು ಒ್ರಷ್ಟತೆಯ ವಿರುದ್ದ ಕೂಡ ಮಾತನಾಡಿರುವ ಹರಿಪ್ರಸಾದ್ ಅವರು ಗುತ್ತಿಗೆದಾರರು 42% ಕಮೀಷನ್ ಪಡೆದುಕೊಳ್ಳುತ್ತಿದ್ದಾರೆ ಅಂತಾ ಪ್ರಧಾನಿಗೆ ಪತ್ರ ಬರೆದಿದ್ದಾರೆ, ಆದ್ರೆ ಪ್ರಧಾನಿಯವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ,ಪರೋಕ್ಷವಾಗಿ ಪ್ರಧಾನಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ,
ಸರ್ಕಾರದ ತಪ್ಪುಗಳನ್ನ ಎತ್ತಿ ತೋರಿಸಿದ್ರೆ ಅವರನ್ನ ರಾಷ್ಟ್ರ ವಿರೋಧಿಗಳು ಅಂತಾ ಬಿಂಬಿಸುತ್ತಾರೆ,ಬಿಜೆಪಿಯವರು ದೇಶ ಭಕ್ತರಲ್ಲ. ದ್ವೇಷ ಭಕ್ತರು ಎಂದು ಕಿಡಿಕಾರಿದ್ದಾರೆ.
ಇನ್ನು ಮಾಧ್ಯಮಗಳ ಮಾಲೀಕರು ಮೋದಿ ಕೈಯಲ್ಲಿ ಇದ್ದಾರೆ.ಸಾಹಿತಿ ಕುಂ ವೀರಭದ್ರಪ್ಪಗೆ ಜೀವ ಬೆದರಿಕೆ ಪತ್ರ ಹಿನ್ನಲೆ ಮಾತನಾಡಿರುವ ಹರಿಪ್ರಸಾದ್ ಅವರು ಸಾಹಿತಿಗಳಿಗೆ ಎನಾದ್ರು ಆದ್ರೆ ಅದಕ್ಕೆ ಸಿಎಂ. ಗೃಹ ಸಚಿವರು. ಅಮಿತ್ ಶಾ ಹೊಣೆಯಾಗಲಿದ್ದಾರೆ.ರಾಷ್ಟ್ರದ ಐಕ್ಯತೆ. ಒಗ್ಗಟ್ಟಿಗೆ ಪ್ರಾಣ ತ್ಯಾಗಕ್ಕೂ ನಾವು ಸಿದ್ದ, ದೇಶಕ್ಕಾಗಿ ಗೌರಿ ಲಂಕೇಶ. ಕಲಬುರ್ಗಿ, ಬನ್ಸಾರೆ ಪ್ರಾಣ ತ್ಯಾಗ ಮಾಡಿದ್ದಾರೆ, ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಪ್ರಾಣಕಳೆದುಕೊಂಡ ಉದಾಹರಣೆ ಇಲ್ಲ ಎಂದು ಮಾತಿನುದ್ದಕ್ಕೂ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಯ ವಿರುದ್ದ ಗುಡುಗಿದ್ದಾರೆ.