ವಿಜಯನಗರ… ಇತ್ತೀಚೆಗೆ ರಾತ್ರಿ ವೇಳೆಯಲ್ಲಿ ವಾಹನ ತಡೆದು ರಸ್ತೆಯಲ್ಲಿ ರಾಬರಿಮಾಡುವ ಪ್ರಕರಣಗಳನ್ನ ಸಾಕಷ್ಟು ಕೇಳಿದ್ದೇವೆ, ಸಹಾಯ ಕೇಳುವ ನೆಪದಲ್ಲೊ ಅಥವಾ ಹುಡುಗಿಯರನ್ನ ಮುಂದೆ ಬಿಟ್ಟು ಡ್ರಾಪ್ ಕೇಳುವ ನೆಪದಲ್ಲಿ ವಾಹನ ತಡೆದು ನಿಲ್ಲಿಸುವ ಗ್ಯಾಂಗ್ ಏಕಾಎಕಿ ವಾಹನದ ಮೇಲೆ ದಾಳಿಮಾಡಿ ವಾಹನದಲ್ಲಿದ್ದವರ ಹಣ ಆಭರಣಗಳನ್ನ ಕದ್ದು ಪರಾರಿಯಾಗುತಿದ್ದರು, ಇದು ಅವರ ಹಳೇಯ ಐಡಿಯಾ. ಇತ್ತೀಚೆಗೆ ಈ ಐಡಿಯಾ ವರ್ಕೌಟ್ ಆಗದ ಹಿನ್ನೆಲೆಯಲ್ಲಿ ಹೊಸದೊಂದು ಪ್ರಯತ್ನಗಳನ್ನಮಾಡುತಿದ್ದಾರಂತೆ, ಅದೇನೆಂದರೆ ಚಲಿಸುವ ವಾಹನದ ಗ್ಲಾಸ್ ಮೇಲೆ ಕೋಳಿ ಮೊಟ್ಟೆಯನ್ನ ಎಸೆಯುವುದು, ಹೌದು ತಡರಾತ್ರಿಯ ಸಮಯದಲ್ಲಿ ಚಲಿಸುವ ಕಾರ್ ಗ್ಲಾಸಿನ ಮೇಲೆ ಕೋಳಿ ಮೊಟ್ಟೆಯನ್ನ ಎಸೆದು ರಾಬರಿಮಾಡುವಲ್ಲಿ ಯಶ್ವಿಯಾಗುತಿದ್ದಾರಂತೆ.
ಸಹಜವಾಗಿ ಚಲಾಯಿಸುವ ಕಾರಿನ ಗ್ಲಾಸ್ ಮೇಲೆ ಯಾವುದಾರು ಪದಾರ್ಥಗಳು ಬಿದ್ದ ಕೂಡಲೇ ವೈಪರನಿಂದ ಗ್ಲಾಸನ್ನ ಸ್ವಚ್ಚಗೊಳಿಸುವ ಕೆಲಸವನ್ನ ನಾವು ನೀವೆಲ್ಲ ಮಾಡುತ್ತೇವೆ, ಆದರೆ ರಾತ್ರಿ ಹೊತ್ತು ನೀವು ಚಲಾಯಿಸುವ ಕಾರಿನ ಗ್ಲಾಸ್ ಮೇಲೆ ಕೋಳಿ ಮೊಟ್ಟೆ ಏನಾದರು ಬಿದ್ದರೆ ಅಥವಾ ಯಾರಾದರು ಉದ್ದೇಶ ಪೂರ್ವಕವಾಗಿ ಎಸೆದರೆ, ಆ ಕೂಡಲೆ ನಿಮ್ಮ ಕಾರಿನ ವೈಪರ್ ಆನೆ ಮಾಡಬೇಡಿ. ಒಂದು ವೇಳೆ ನೀವೇನಾದರು ವೈಪರ್ ಆನ್ ಮಾಡಿ ಸ್ವಚ್ಚಗೊಳಿಸಲು ಮುಂದಾಗಿದ್ದೇ ಆದರೆ, ಆ ಕ್ಷಣೆ ನೀವು ಅಪಾಯಕ್ಕೆ ಸಿಕ್ಕಿ ಹಾಕಿಕೊಂಡಂತೆ ಎಂದು ಭಾವಿಸಿ.
ಹೌದು ನಿಮ್ಮ ಗಾರಿನ ಗ್ಲಾಸ್ ಮೇಲೆ ಬಿದ್ದಿರುವ ಮೊಟ್ಟೆಯ ಲೋಳೆಯನ್ನ ಸ್ವಚ್ಚಗೊಳಿಸಲು ಎಷ್ಟು ಬಾರಿ ನಿಮ್ಮ ವೈಪರ್ ಚಲಿಸುತ್ತದೆಯೊ ಅಷ್ಟೇ ಪ್ರಮಾಣದಲ್ಲಿ ನಿಮ್ಮ ಕಾರಿನ ಗ್ಲಾಸಿಗೆ ಮೊಟ್ಟೆಯ ಲೋಳೆ ಅಂಶ ಅಂಟಿಕೊಳ್ಳುತ್ತದೆ. ಗ್ಲಾಸಿಗೆ ಲೋಳೆಯ ಅಂಶ ಅಂಟಿಕೊಳ್ಳುತಿದ್ದಂತೆ ಮುಂದೆ ಕಾಣುವ ದಾರಿ ಕೂಡ ಮಸುಕಾಗುತ್ತದೆ. ಇನ್ನು ಕೆಲವು ಬಾರಿ ಸಂಪೂರ್ಣವಾಗಿ ದಾರಿ ಕಾಣದಂತೆ ಆಗುವ ಸಾಧ್ಯತೆ ಕೂಡ ಇರುತ್ತದೆ. ಆ ಬಳಿಕ ನೀವು ನಿಮ್ಮ ವಾಹನ ನಿಲ್ಲಿಸಿ ಗ್ಲಾಸಿಗೆ ಅಂಟಿರುವ ಲೋಳೆಯ ಅಂಶವನ್ನ ಸ್ವಚ್ಚಗೊಳಿಸಲು ಮುಂದಾಗುತ್ತೀರಿ.
ದಯವಿಟ್ಟು ಈ ತಪ್ಪನ್ನಂತೂ ಯಾವುದೇ ಕಾರಣಕ್ಕೂ ಮಾಡಬೇಡಿ. ಒಂದು ವೇಳೆ ನೀವೇನಾದರು ಈ ತಪ್ಪು ಮಾಡಿದ್ದೇ ಆದ್ರೆ ಆಪತ್ತಿಗೆ ಸಿಕ್ಕಿಹಾಕಿ ಕೊಳ್ಳುವುದು ಪಕ್ಕ. ಹೌದು ಕೋಳಿ ಹೊಟ್ಟೆಯಲ್ಲಿದ್ದ ಮೊಟ್ಟೆ ಏಕಾ ಏಕಿಯಾಗಿ ಬಂದು ನಿಮ್ಮ ಕಾರಿನ ಗ್ಲಾಸಿನ ಮೇಲೆ, ಅದು ತಡರಾತ್ರಿ ನಿಮ್ಮ ಕಾರಿನ ಗ್ಲಾಸ್ ಮೇಲೆ ಬಿದ್ದಿದೆ ಎಂದ್ರೆ, ನಿಮ್ಮ ವಿರುದ್ದ ಯಾವುದೊ ಸಂಚು ನಡೆದಿದೆ ಎಂದು ಭಾವಿಸಿ.
ಆ ಕೂಡಲೆ ನಿಮ್ಮ ಕಾರನ್ನ ಆ ಸ್ಥಳದಲ್ಲಿ ನಿಲ್ಲಿಸದೆ, ವೈಪರ್ ಆನ್ ಮಾಡಿ ಸ್ವಚ್ಚಗೊಳಿಸುವ ಪ್ರಯತ್ನ ಮಾಡದೆ, ಮೊದಲು ಅಲ್ಲಿಂದ ಮುಂದೆ ಹೋಗಿ ಆಪತ್ತಿನಿಂದ ದೂರಾಗಿ, ಎಲ್ಲಿಯ ವರೆಗು ಎಂದರೆ ಜನ ಸಂದಣಿ ಹೆಚ್ಚಿರುವ ಪ್ರದೇಶ ಬರುವ ವರೆಗೆ ಯಾವುದೇ ಕಾರಣಕ್ಕೂ ನಿಮ್ಮ ಕಾರನ್ನ ನಿಲ್ಲಿಸಬೇಡಿ. ಜನಗಳು ಹೆಚ್ವಿರುವ ಪ್ರದೇಶ ಬಂದ ನಂತರ ಕಾರನ್ನ ನಿಲ್ಲಿಸಿ ನೀರಿನಿಂದ ನಿಮ್ಮ ಕಾರ್ ಗ್ಲಾಸ್ ಮೇಲೆ ಬಿದ್ದಿರುವ ಕೋಳಿ ಮೊಟ್ಟೆಯ ಲೋಳೆಯನ್ನ ಸ್ವಚ್ಚಗೊಳಿಸಿಕೊಳ್ಳಿ.
ಅದಾದ ಬಳಿಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಿಮಗೆ ಆಗಿರುವ ಅನುಭವವನ್ನ ತಿಳಿಸಿ, ನಿಮ್ಮ ಪ್ರಯಾಣವನ್ನ ಮುಂದುವರೆಸಿ.ಒಂದು ವೇಳೆ ನೀವು ಪೊಲೀಸರಿಗೆ ಮಾಹಿತಿ ನೀಡದೆ ಇದ್ದರೆ, ಮತ್ತೊಬ್ಬರು ಇವರ ಸಂಚಿಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತೆ, ಅದಕ್ಕೆ ನೀವು ಅವಕಾಶ ಮಾಡಿಕೊಡಬೇಡಿ, ನೀವು ಪೊಲೀಸರಿಗೆ ಮಾಹಿತಿ ನೀಡುತಿದ್ದಂತೆ ಆ ಸ್ಥಳದ ಮೇಲೆ ಪೊಲೀಸರು ನಿಗಾವಣೆಮಾಡುವ ಮೂಲಕ ಡಕಾಯಿತರ ಚಲನ ವಲನಗಳ ಮೇಲೆ ಗಮನಿಸುತ್ತಾರೆ ಮತ್ತು ಅಂತವರನ್ನ ಸೆರೆ ಹಿಡಿಯುತ್ತಾರೆ. ಸಾಮಾಜಿಕ ಕಳಕಳೆಯಿಂದ ಮಾಡಿದ ವರದಿ ಇದು. ನೀವು ಮಾತ್ರ ಓದುವುದಲ್ಲ, ನಿಮ್ಮ ಪರಿಚಸ್ಥರಿಗೂ ಸ್ನೇಹಿತ ಸಂಭಂದಿಕರಿಗೂ ತಲುಪಿಸಿ, ಅಪಾಯದಿಂದ ಪಾರಾಗಲು ಸಹಕರಿಸಿ.
ಕೃಪೆ.. ಸಾಮಾಜಿಕ ಜಾಲತಾಣ..
ವರದಿ..ಸುಬಾನಿ ಪಿಂಜಾರ ವಿಜಯನಗರ.