ವಿಜಯನಗರ… ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ಖೊಟಾ ನೊಟು ಚಲಾವಣೆ ಮಾಡಲು ಬಂದಿದ್ದ ಐವರು ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ, ಬಂದಿತರಿಂದ ಐದು ನೂರು ರೂಪಾಯಿ ಮುಖ ಬೆಲೆಯ ಒಂದು ಲಕ್ಷದ ಐವತ್ತಾರು ಸಾವಿರ ರೂಪಾಯಿ ನಕಲಿ ನೋಟುಗಳನ್ನ ವಶಕ್ಕೆ ಪಡೆದಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ನಗರದ ರಾಣಿ ಪೇಟೆಯಲ್ಲಿರುವ ವೆಂಕಟೇಶ್ವರ ಲಾಡ್ಜಲ್ಲಿ ವಾಸವಾಗಿದ್ದ ನಕಲಿ ನೋಟಿನ ಮಾಲೀಕರು, ಹೊಸಪೇಟೆ ಸ್ಥಳೀಯರಿಗೆ ನೋಟು ಚಲಾವಣೆಮಾಡಲು ಹೊಂಚು ಹಾಕಿದ್ದರು.
ಖಚಿತ ಮಾಹಿತಿ ಪಡೆದ ಇನ್ಜಾಪೆಕ್ಟರ್ ಜಯಪ್ರಕಾಶ್ ಹೊಸಪೇಟೆ ಡಿ.ವೈ.ಎಸ್ಪಿ. ಮಾರ್ಗದರ್ಶನದಲ್ಲಿ ತಂಡ ರಚಿಸಿ ಆರೋಪಿಗಳನ್ನ ಬಲೆಗೆ ಕೆಡವಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1)ಕುಬೇರಪ್ಪ ತಂದೆ ದೊಂಗ್ರಪ್ಪ (58) ತಳವಾರ ಜನಾಂಗ,ವದಗನಹಟ್ಟಿ ಗ್ರಾಮ, ಹರಿಹರ ತಾಲೂಕು ದಾವಣಗೇರಿ ಜಿಲ್ಲ.
2)ರುದ್ರೇಶ ತಂದೆ ಜಯಣ್ಣ (39)ದೊಡ್ಡಗೋಪನಹಳ್ಳಿ ಭದ್ರಾವತಿ ತಾಲೂಕು ಶಿವಮೊಗ್ಗ ಜಿಲ್ಲೆ.
3)ಎಸ್.ರಾಜೇಶ್ ತಂದೆ ಸುರೇಶ್ (28) ಮೂಗರಹಳ್ಳಿ ಶ್ರೀರಂಗಪಟ್ಟಣ,ಮಂಡ್ಯ ಜಿಲ್ಲೆ.
4)ಪ್ರಶಾಂತ್ ತಂದೆ ಬೈರಪ್ಪ,(30) ವಿನಾಯಕ ನಗರ ನಾಲ್ಕನೆ ಕ್ರಾಸ್ ಮೈಸೂರು.
5)ರವಿ ತಂದೆ ರಘು (30) ಮೂಗರಹಳ್ಳಿ ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಜಿಲ್ಲೆ.
ಬಂದಿತ ಆರೋಪಿಗಳಾಗಿದ್ದಾರೆ. ಈ ಎಲ್ಲಾ ಆರೋಪಿಗಳನ್ನ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿರುವ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಈ ಯಶಸ್ವಿ ತನಿಖಾ ತಂಡದಲ್ಲಿ, ಎ.ಎಸ್.ಐ.ಕೋದಂಡಪಾಣಿ, ಮಲ್ಲೇಶ್. ಸಿಬ್ಬಂದಿಗಳಾದ ಶ್ರೀನಿವಾಸ್, ನಾಗರಾಜ್. ಬಿ.ರಾಘವೇಂದ್ರ,ಜಾವೇದ್, ಅಶ್ರಪ್, ಅನಿಲ್ ಕುಮಾರ್,ಶ್ರೀರಾಮರೆಡ್ಡಿ ಪರಶುರಾಮ್ ನಾಯ್ಕ್, ಲಿಂಗರಾಜ್,ಜೆ.ಪಕ್ಕೀರಪ್ಪ, ಗೋವರ್ಧನ ಬಾಗಿಯಾಗಿದ್ದರು. ಇನ್ನು ತಮ್ಮ ಸಿಬ್ಬಂದಿಗಳ ಕಾರ್ಯವೈಖರಿ ಮೆಚ್ಚಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಶ್ಲಾಗಿಸಿದ್ದಾರೆ.
ವರದಿ..ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.