ವಿಜಯನಗರ…ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿಂದು ಎಲ್ಲೊ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಕಾರಣ ಇತ್ತೀಚೆಗೆ ವೈಟ್ ಬೋರ್ಡ್ ವಾಹನಗಳನ್ನ ಟ್ಯಾಕ್ಸಿಯನ್ನಾಗಿಸಿಕೊಂಡು ಬಾಡಿಗೆ ನಡೆಸುವುದು ಹೆಚ್ಚಾಗಿದ್ದು, ಇದರಿಂದ ಎಲ್ಲೊ ಬೋರ್ಡ್ ಟ್ಯಾಕ್ಸಿ ಮಾಲೀಕರಿಗೆ ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿರುವುದೇ ಪ್ರತಿಭಟನೆಗೆ ಪ್ರಮುಖ ಕಾರಣ.
ರಸ್ತೆ ಸಾರಿಗೆ ನಿಯಮಗಳ ಅನುಸಾರವಾಗಿ ಸರ್ಕಾರಕ್ಕೆ ಪ್ರತಿ ವರ್ಷ ತೆರಿಗೆ ಕಟ್ಟುವುದಲ್ಲದೆ ಪ್ರಯಾಣಿಕರ ಸುರಕ್ಷತೆಯ ವಿಮೆ ಕಟ್ಟುವ ಮೂಲಕ ನಾವು ಎಲ್ಲೊ ಬೋರ್ಡ್ ಟ್ಯಾಕ್ಸಿಗಳನ್ನ ಚಲಾಯಿಸುತ್ತೇವೆ, ಆದರೆ ಇಂತ ಯಾವ ನಿಯಮಗಳನ್ನೂ ಪಾಲಿಸದ ವೈಟ್ ಬೋರ್ಡ್ ವಾಹನ ಮಾಲೀಕರು ಸರ್ಕಾರಕ್ಕೆ ತೆರಿಗೆ ವಂಚಿಸುವುದಲ್ಲದೆ, ಇನ್ಸುರೆನ್ಸ್ ಕಂಪನಿಗಳ ಕಣ್ಣಿಗೆ ಮಣ್ಣು ಹಾಕುತ್ತ ವೈಟ್ ಬೋರ್ಡ್ ವಾಹನ ಬಾಡಿಗೆ ನಡೆಸಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತಿದ್ದಾರೆ ಎಂದು ಎಲ್ಲೊ ಬೋರ್ಡ್ ಟ್ಯಾಕ್ಸಿ ಮಾಲೀಕರಿಗೆ ಮತ್ತು ಚಾಲಕರು ತಮ್ಮ ಅಳಲನ್ನ ತೋಡಿಕೊಂಡರು.
ಈ ಸಂಭಂದ ಇಂದು ಪ್ರತಿಭಟನೆ ಹಮ್ಮಿಕೊಂಡ ಕೆ.ಟಿ.ಡಿ.ಒ.ಸಂಘಟನೆ ಸರ್ಕಾರ ಮತ್ತು ವಿಜಯನಗರ ಜಿಲ್ಲಾಧಿಕಾರಿಗಳು ಕೂಡಲೆ ಎಚ್ಚೆತ್ತು ಇತ್ತ ಗಮನ ಹರಿಸಿ ಎಲ್ಲೊ ಬೋರ್ಡ್ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಹಿತ ಕಾಪಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇಂದು ಬೆಳಗ್ಗೆ ಹನ್ನೆರಡು ಗಂಟೆಯ ಸುಮಾರಿಗೆ ಪುನಿತ್ ರಾಜಕುಮಾರ ವೃತ್ತದಲ್ಲಿ ಸೇರಿದ ನೂರಾರು ಎಲ್ಲೊ ಬೋರ್ಡ್ ಚಾಲಕರು, ಅಪ್ಪು ಬಾವ ಚಿತ್ರಕ್ಕೆ ಮಾಲಾರ್ಪಣೆಮಾಡಿ ಪ್ರತಿಭಟನಾ ಮೆರವಣಿಗೆ ಪ್ರಾರಂಬಿಸಿದರು. ಹೊಸಪೇಟೆ ನಗರದ ಕನಕದಾಸ ವೃತ್ತ ಸುತ್ತುವರಿದ ಪ್ರತಿಭಟನಾ ಮೆರವಣಿಗೆ, ನಂತರ ರೈಲ್ವೇ ನಿಲ್ದಾಣ ರಸ್ತೆಯ ಮೂಲಕ ಬಸ್ ನಿಲ್ದಾಣ ಹಾದು ಕಾಲೇಜು ರಸ್ತೆಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವಿಜಯನಗರ ಜಿಲ್ಲಾಧಿಕಾರಿ ಕಛೇರಿಯ ವರೆಗೆ ನಡೆಯಿತು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ (ಆರ್.ಟಿ.ಒ.) ತೆರಳಿ ಮನವಿ ಸಲ್ಲಿಸಿದರು, ಅಷ್ಟೇ ಅಲ್ಲದೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಅವರಿಗು ಕೂಡ ಮನವಿ ಸಲ್ಲಿಸಿ ವೈಟ್ ಬೋರ್ಡ್ ಟ್ಯಾಕ್ಸಿ ಹಾವಳಿ ನಿಯಂತ್ರಿಸಲು ಕೋರಿಕೊಂಡರು. ಕೆ.ಟಿ.ಡಿ.ಒ. ಸಂಘಟನೆಯ ಮುಖಂಡರಾದ ಕೊಟ್ರೇಶ್, ಕುಮಾರಸ್ವಾಮಿ, ಸೋಮಶೇಖರ್, ನಿಕ್ಕಿಲ್ ಸೂರಿ, ಸೇರಿದಂತೆ ಇನ್ನೂ ಹಲವು ಟ್ಯಾಕ್ಸಿ ಚಾಲಕ ಮುಖಂಡರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ