ತುಮಕೂರು..ತುಮಕೂರು ಜಿಲ್ಲೆಯಲ್ಲಿ ಬುದ್ದಿಮಾಂಧ್ಯೆ ಮೇಲೆ ಅಶಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅತ್ಯಾಚಾರ ಪ್ರಕರಣ ಕೊನೆಗೂ ಅಂತ್ಯಗೊಂಡಿದೆ. ಅತ್ಯಾಚಾರ ಎಸಗಿದ್ದ ಕಾಮುಕ ಅಧಿಕಾರಿ ವಿರುದ್ದ ಇದ್ದ ಎಲ್ಲಾ ಆರೋಪಗಳು ಸಾಬೀತಾಗಿ ತಪ್ಪಿತಸ್ಥ ಎಂದು ತುಮಕೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಎಲ್ಲಾ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಹದಿನಾಲ್ಕು ವರ್ಷ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದ್ದು, ಜನೆವರಿ 31ನೆ ತಾರೀಕಿನಂದು ಶಿಕ್ಷೆಯ ಪ್ರಮಾಣವನ್ನ. ಎರಡನೇ ಹೆಚ್ಚುವರಿ ಜಿಲ್ಲಾ ಅಧಿಕ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಎಚ್.ಎಸ್ ಮಲ್ಲಿಕಾರ್ಜುನ ಸ್ವಾಮಿಯವರು ಹೊರಡಿಸಲಿದ್ದಾರೆ.
ಏನಿದು ಪ್ರಕರಣ…
2017ರ ಜನವರಿ 15ರ ನಸುಕಿನ ಜಾವ ನಡೆದಿದ್ದ ಪ್ರಕರಣ ಇದಾಗಿದ್ದು, ಮನೆಗೆ ಡ್ರಾಪ್ ಕೊಡೋ ನೆಪದಲ್ಲಿ ಖಾಸಗಿ ಬೊಲೇರೋ ವಾಹನದಲ್ಲಿ ಕರೆದೊಯ್ದು ತುಮಕೂರು ಮಹಿಳಾ ಪೊಲೀಸ್ ಠಾಣೆಯ ಎ.ಎಸ್.ಐ. ಉಮೇಶಯ್ಯ ನಗರದ ಅಂತರಸನಹಳ್ಳಿ ಸೇತುವೆ ಬಳಿ 25ವರ್ಷ ವಯಸ್ಸಿನ ಬುದ್ದಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ಅಧಿಕಾರಿ. ಇನ್ನು ಎರಡನೇ ಆರೋಪಿಯಾಗಿದ್ದ ಖಾಸಗಿ ವಾಹನ ಚಾಲಕ ಈಶ್ವರನನ್ನು ಆರೋಪ ಮುಕ್ತಗೊಳಿಸಿದ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಜನವರಿ 31 ರಂದು ಪ್ರಕಟಸಲಿದೆ.ರಾಷ್ಟ್ರವೇ ತಲೆ ತಗ್ಗಿಸುವ ಈ ಪ್ರಕರಣದ ಪರ ವಾದಮಂಡಿಸಿದ್ದ ಸರ್ಕಾರಿ ಅಭಿಯೋಜಕಿ ವಿ.ಎ. ಕವಿತಾ ಅವರ ವಾದವನ್ನ ಪರಿಗಣಿಸಿದ ನ್ಯಾಯಾಲಯ ಆರೋಪಿಯನ್ನ ಜೈಲಿಗೆ ಜೈಲುದಾರಿ ತೋರಿಸಿದೆ ನ್ಯಾಯಾಲಯ.