ಬಳ್ಳಾರಿ…ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ದರ್ಗಾದ ಮೇಲೆ ಉರುಳಿದ ಘಟನೆ ಬಳ್ಳಾರಿ ನಗರದ ಸಂಗಮ್ ವೃತ್ತದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮಖ್ದೂಮ್ ಜಾನಿ ಬಾಬಾ ದರ್ಗಾ ಮಸೀದಿ ಗೋಡೆಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಇತ್ತೀಚೆ ನಿರಂತರ ಮಳೆ ಸುರಿದ ಪರಿಣಾಮವೇ ಈ ಘಟನೆಗೆ ಪ್ರಮುಖಕಾರಣ ಎನ್ನಲಾಗಿದೆ, ರಾತ್ರಿ ಸಂಭವಿಸಿದ ಈ ಘಟನೆ, ಒಂದು ವೇಳೆ ಹಗಲು ಹೊತ್ತಿನಲ್ಲಿ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತಿತ್ತು. ಕಾರಣ ಬಳ್ಳಾರಿ ನಗರದ ಸಂಗಮ್ ವೃತ್ತದಲ್ಲಿರುವ ಈ ದರ್ಗಾ ಭಾವೈಕ್ಯ ಕೇಂದ್ರವಾಗಿದ್ದು ಎಲ್ಲಾ ಧರ್ಮಿಯರು ಈ ದರ್ಗಾಕ್ಕೆ ಬೇಟಿ ನೀಡಿ ಹರಕೆ ಕಟ್ಟುವುದು ಬಳ್ಳಾರಿ ನಗರದಲ್ಲಿ ವಾಡಿಕೆ ಆಗಿದೆ.
ಹಾಗಾಗಿ ಪ್ರತಿ ದಿನ ಸಾವಿರಾರು ಸಂಖೆಯಲ್ಲಿ ಭಕ್ತರು ಈ ದರ್ಗಾಕ್ಕೆ ಬೇಟಿ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಮುಸ್ಲೀಂ ಬಾಂದವರು ದಿನದ ಐದೊತ್ತು ನಮಾಜ್ ಆಚರಣೆ ಮಾಡುವುದು ಕೂಡ ಇದೇ ಸ್ಥಳದಲ್ಲಿ, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬಳ್ಳಾರಿಯ ಬಹುತೇಕ ಸ್ಥಳಗಳಲ್ಲಿ ಇಂತಾ ಪರಿಸ್ಥಿತಿ ಇದೆ. ಕಾರಣ ಬಳ್ಳಾರಿ ನಗರದ ಕೆಲವು ಬಾಗಗಳಲ್ಲಿ ಬೃಹತ್ ಕಲ್ಲು ಗುಡ್ಡಗಳಿದ್ದು, ಗುಡ್ಡದ ಬದಿಯಲ್ಲೇ ಜನ ಸಾಮಾನ್ಯರು ಮನೆಗಳನ್ನ ನಿರ್ಮಾಣಮಾಡಿಕೊಂಡು ವಾಸವಾಗಿದ್ದಾರೆ. ಅಲ್ಲಿನ ಬೃಹತ್ ಕಲ್ಲು ಬಂಡೆಗಳು ಮಳೆಯಿಂದ ಉರುಳಿದರೆ ದೊಡ್ಡ ಅನಾಹುತವೇ ಸಂಭವಿಸುತ್ತೆ, ಸ್ಥಳೀಯ ಆಡಳಿತ ಕೂಡಲೆ ಎಚ್ಚೆತ್ತು, ಇಂತಾ ಅಪಾಯಕಾರಿ ಸ್ಥಳದಲ್ಲಿ ವಾಸವಾಗಿರುವ ಜನ ಸಾಮಾನ್ಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ಬಳ್ಳಾರಿ.