You are currently viewing ಹಸುಗೂಸುಗಳೆ ಇವರಿಗೆ ಆದಾಯದ ಮೂಲಗಳು.

ಹಸುಗೂಸುಗಳೆ ಇವರಿಗೆ ಆದಾಯದ ಮೂಲಗಳು.

ವಿಜಯನಗರ.. ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಮಕ್ಕಳನ್ನ ಇಟ್ಟುಕೊಂಡು ಬಿಕ್ಷಾಟನೆಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ನಗರದ ಪ್ರತಿಯೊಂದು ಸ್ಥಳದಲ್ಲಿ ಕಾಣಸಿಗುವ ಈ ಮಹಿಳೆಯರು, ಕೈಯಲ್ಲಿ ಒಂದು ಕಂಕುಳಲ್ಲಿ ಒಂದು ಮಗುವನ್ನ ಹಿಡಿದುಕೊಂಡು ಬಿಕ್ಷೆಬೇಡುತ್ತಾರೆ.ಬಿರು ಬಿಸಿಲನ್ನೂ ಲೆಕ್ಕಿಸದ ಈ ಮಹಿಳೆಯರು. ನಗರದ ಅಪ್ಪು ಸರ್ಕಲ್ (ರೋಟರಿ ವೃತ್ತ) ಬಸ್ ನಿಲ್ದಾಣದ ಮುಂಬಾಗ, ಕೋರ್ಟ್ ಆವರಣದ ಮುಂದಿನ ರಸ್ತೆ, ರೈಲ್ವೇ ನಿಲ್ದಾಣ, ನಗರದ ಮೇನ್ ಬಜಾರ್, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ, ಸೇರಿದಂತೆ ಇನ್ನಿತರ ಜನ ಸಂದಣಿ ಇರುವ ಸ್ಥಳಗಲ್ಲಿ ಹೋಗಿ ಬಿಕ್ಷೆಬೇಡುತ್ತಾರೆ.


ಹೀಗೆ ಬಿಕ್ಷೆ ಬೇಡುವ ಈ ಮಹಿಳೆಯರು ಪ್ರತಿದಿನ ಒಂದೇ ಸ್ಥಳದಲ್ಲಿ ಬಿಕ್ಷೆಬೇಡುವುದಿಲ್ಲ, ಒಂದು ದಿನ ಒಂದು ಸ್ಥಳದಲ್ಲಿ ಮತ್ತೊಂದು ದಿನ ಮತ್ತೊಂದು ಸ್ಥಳದಲ್ಲಿ ಬಿಕ್ಷೆ ಬೇಡುತ್ತ ಸರದಿ ಪ್ರಕಾರ ಏರಿಯಾಗಳನ್ನ ಅವರ ಗುಂಪಿನಲ್ಲಿ ವಿಂಗಣೆಮಾಡಿಕೊಂಡಿರುತ್ತಾರೆ. ಕಾರಣ ಯಾರೊಬ್ಬರಿಗೂ ಅನುಮಾನ ಬಾರದೆಂದು. ಬಿಕ್ಷೆ ಬೇಡುವ ಸಂದರ್ಭದಲ್ಲಿ ಮಕ್ಕಳನ್ನ ತೋರಿಸಿ ಕನಿಕರ ಗಿಟ್ಟಿಸಿಕೊಳ್ಳುವ ಈ ಮಹಿಳೆಯರು ಇದನ್ನೇ ದಂದೆಯನ್ನಾಗಿ ಮಾಡಿಕೊಂಡಿದ್ದಾರೆ.


ಕಂಕುಳಲ್ಲಿ ಇರುವ ಕಂದಮ್ಮಗಳು ಇವರ ಕರುಳ ಬಳ್ಳಿಗಳೇ..?


ಹೌದು ಹೀಗೆ ಬಿಕ್ಷೆ ಬೇಡುವ ಈ ಮಹಿಳೆಯರು ಎತ್ತಿಕೊಂಡುಬರುವ ಈ ಹಸು ಮಕ್ಕಳಿಗೆ ಇವರೇ ಜನ್ಮ ನೀಡಿದ್ದಾರ, ಅಥವಾ ಬೇರೆಯವರ ಮಕ್ಕಳನ್ನ ಕರೆತಂದಿದ್ದಾರ ಎನ್ನುವ ಅನುಮಾನ ಮೂಡುತ್ತದೆ. ಕಾರಣ ಅವರ ಕಂಕುಳಲ್ಲಿರುವ ಮಕ್ಕಳು ಮೂರರಿಂದ ನಾಲ್ಕು ತಿಂಗಳ ಹಿಂದೆ ಜನಿಸಿದ ನವ ಜಾತ ಶಿಸುಗಳಾಗಿರುತ್ತವೆ. ಹೀಗಿದ್ದರೆ ಮಕ್ಕಳಿಗೆ ಜನ್ಮ ನೀಡಿದ ತಾಯಿ ಕೂಡ ಬಾಣಂತಿಯಾಗಿರಬೇಕು, ಆದರೆ ಬಾಣಂತಿ ವೇಶ ತೊಟ್ಟ ಮಹಿಳೆ ಇಡೀ ನಗರವನ್ನೆಲ್ಲ ಸುತ್ತಿ ಬಿಕ್ಷೆಬೇಡುತ್ತಾರೆ.ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಹೊಸಪೇಟೆ ನಗರದ ಜನ ಸಾಮಾನ್ಯರಲ್ಲಿ ಮೂಡತೊಡಗಿದೆ.


ಇನ್ನು ಈ ಮಕ್ಕಳನ್ನ ಇಟ್ಟುಕೊಂಡು ಬಿಕ್ಷೆಬೇಡುವ ಈ ಮಹಿಳೆಯರ ವಯಸ್ಸು ಅಂದಾಜು 35 ರಿಂದ 40 ವರ್ಷ ಮೇಲ್ಪಟ್ಟಿರುತ್ತೆ, ಹೀಗಿದ್ದರೆ ಇವರು ತೆಗದುಕೊಂಡುಬರುವ ಮಕ್ಕಳಿಗೆ ಜನ್ಮ ನೀಡಿದವರು ಯಾರಬೆಂಬ ಪ್ರಶ್ನೆ ಮತ್ತೊಂದುಕಡೆ. ಇ‌ನ್ನು ಅನುಮಾನ ಬಂದು ಆ ಮಹಿಳೆಯರನ್ನ ಪ್ರಶ್ನಿಸುತ್ತಾ ಹೋದರೆ ಸರಿಯಾದ ಉತ್ತರವಂತೂ ಸಿಗುವುದಿಲ್ಲ.
ಬಾಯಿಗೆ ಬಂದ ತಮ್ಮ ಹೆಸರನ್ನ ಹೇಳುತ್ತಾರೆ, ಯಾವ ಊರು ಎಂದರೆ ಒಂದು ಸಾರಿ ಹಗರಿಬೊಮ್ಮನಹಳ್ಳಿ ಎಂದು ಹೇಳುವ ಮಹಿಳೆಯರು ಮತ್ತೊಮ್ಮೆ ಹೊಸಪೇಟೆ ಎಂದು ವಿಳಾಸ ಬದಲಿಸಿ ಹೇಳುತ್ತಾರೆ. ಇನ್ನು ತಮ್ಮ ಕಂಕುಳಲ್ಲಿರುವ ಮಕ್ಕಳ ಹೆಸರನ್ನ ಕೇಳಿದರೆ ಕೂಡ ಸರಿಯಾಗಿ ಹೇಳುವುದಿಲ್ಲ.
ಇದನ್ನೆಲ್ಲ ನೋಡಿದರೆ ಹಲವು ಅನುಮಾನಗಳು ಮೂಡುತ್ತವೆ.

ಮಕ್ಕಳನ್ನ ಬಾಡಿಗೆಗೆ ತಂದು ಈರೀತಿಯಾಗಿ ಬಿಕ್ಷಾಟನೆಮಾಡುತ್ತಾರ, ಅಥವಾ ಮಕ್ಕಳನ್ನ ಕಳ್ಳತನಮಾಡಿಕೊಂಡು ಬಂದು ಈ ರೀತಿಯಾಗಿ ಬಿಕ್ಷಾಟನೆಗೆ ಬಳಸಿಕೊಳ್ಳುತಿದ್ದಾರ ಎನ್ನುವ ಸಂಶೆಯ ಮೂಡುತ್ತದೆ.ಇದನ್ನೆಲ್ಲ ನೋಡಿದರೆ ಇದರ ಹಿಂದೆ ದೊಡ್ಡ ಜಾಲವೇ ಅಡಗಿದಂತೆ ಗೋಚರವಾಗುತ್ತದೆ. ಮೈಬಗ್ಗಿಸಿ ದುಡಿಯದ ಕೆಲವರ ಗುಂಪು ಇಂತಾ ಕೆಲಸಕ್ಕೆ ಉತ್ತೇಜನ ಕೊಟ್ಟುಕೊಂಡು ಹಣಮಾಡುವ ದಂದೆಗೆ ಇಳಿದಿದ್ದಾರೆ ಎನ್ನುವುದು ಮೇಲ್ನೊಟಕ್ಕೆ ಕಾಣುತ್ತದೆ.


ಕಣ್ಣಿದ್ದು ಕುರುಡಾಗಿದೆ ಮಕ್ಕಳ ರಕ್ಷಣಾ ಇಲಾಖೆ.


ಹೌದು ನಗರದಲ್ಲಿ ಹೀಗೆಲ್ಲ ಮಕ್ಕಳನ್ನ ಇಟ್ಟುಕೊಂಡು ಬಿಕ್ಷೆಬೇಡುವ ಮಹಿಳೆಯರು, ಮಕ್ಕಳನ್ನ ರಕ್ಷಣೆಮಾಡುಬೇಕಾದ ಅಧಿಕಾರಿಗಳ ಮುಂದೆ ಬಂದರೂ ಕಣ್ಣುಮುಚ್ಚಿಕುಳಿತಂತೆ ಕಾಣುತ್ತದೆ. ಹೊಸಪೇಟೆ ನಗರದ ಅಪ್ಪು ಸರ್ಕಲ್, ಬಸ್ ನಿಲ್ದಾಣ ಹಾಗೂ ತಹಸಿಲ್ದಾರ್ ಕಛೇರಿಯ ಆವರಣದಲ್ಲಿ ಅಧಿಕಾರಿಗಳ ದಂಡೇ ಇರುತ್ತೆ,ಹೀಗಿದ್ದರೂ ಯಾವೊಬ್ಬ ಅಧಿಕಾರಿಗಳ ಅದನ್ನ ಪ್ರಶ್ನೆಮಾಡಿ ತನಿಖೆಗೆ ಒಳಪಡಿಸುವ ಗೋಜಿಗೆ ಹೋಗಿಲ್ಲ.ಇನ್ನು ಮುಂದಾದರು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಈ ಮಕ್ಕಳ ಬಿಕ್ಷಾಟನೆ ಜಾಲವನ್ನ ಬಯಲಿಗೆಳೆದು ಹಸುಗೂಸಿಗೆ ನ್ಯಾಯ ಕೊಡಿಸಬೇಕಿದೆ.


ವರದಿ..
ಸುಬಾನಿ ಪಿಂಜಾರ. ವಿಜಯನಗರ.