You are currently viewing ಹೊಸಪೇಟೆ ನಗರದ ಮುರಾರಿ ಶ್ರೀ ರಾಮುಲು ಪಾರ್ಕಲ್ಲಿನ ಎರಡು ಸ್ಪೀಕರ್ ಕಳ್ಳತನ.

ಹೊಸಪೇಟೆ ನಗರದ ಮುರಾರಿ ಶ್ರೀ ರಾಮುಲು ಪಾರ್ಕಲ್ಲಿನ ಎರಡು ಸ್ಪೀಕರ್ ಕಳ್ಳತನ.

  • Post category:Uncategorized

ವಿಜಯನಗರ (ಹೊಸಪೇಟೆ) ಹೊಸಪೇಟೆ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮುರಾರಿ ಶ್ರೀ ರಾಮುಲು ಪಾರ್ಕಲ್ಲಿನ ಇಡಲಾಗಿದ್ದ ಎರಡು ಸ್ಪೀಕರ್ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಸಮಯದಲ್ಲಿ ಕಾವಲುಗರ ಊಟಕ್ಕೆ ಹೋದ ಸಂದರ್ಭವನ್ನ ಕಾದು ಕುಳಿತಿದ್ದ ಕಳ್ಳರು, ಉಧ್ಯಾನವನದ ಕಾಪೌಂಡ್ ಗೋಡೆ ಹತ್ತಿ ಪಾರ್ಕಲ್ಲಿ ಬಂದು ಎರಡು ಸ್ಪೀಕರ್ ಕದ್ದು ಪರಾರಿಯಾಗಿದ್ದಾರೆ.



ಅಂದಾಜು ನಲವತ್ತು ಸಾವಿರ ಮೌಲ್ಯದ ಎರಡು ಸ್ಪೀಕರ್ ಗಳ್ಳನ್ನ ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿ ತಂದು ಪಾರ್ಕಲ್ಲಿ ಇಡಲಾಗಿತ್ತು,  ನವೀಕಾರಣ ಮಾಡಲಾಗಿದ್ದ ಮ್ಯೂಸಿಕ್ ಪೌಂಟೇನ್ ಗೆ ಅಳವಡಿಸುವ ಸಂಭಂದ ತರಲಾಗಿದ್ದ ಈ ಸ್ಪೀಕರ್ ಗಳನ್ನ ಗಮನಿಸಿರುವ ಕಳ್ಳರು, ನಿನ್ನೆ ರಾತ್ರಿ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಸಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.