ವಿಜಯನಗರ… ಸಚಿವ ಆನಂದ್ ಸಿಂಗ್ ಅವರ ಪುತ್ರನ ಭಾವಚಿತ್ರವನ್ನ ವಲಯ ಮಟ್ಟದ ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಮುದ್ರಿಸಿ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗಿದೆ, ಇಲ್ಲಿನ ಸಂಭಂದಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದೇ ಈ ಪ್ರಶಸ್ತಿ ಪತ್ರಗಳನ್ನ ಮುದ್ರಣ ಮಾಡಲಾಗಿದೆ, ಹೀಗಿದ್ದರು ಇಲ್ಲಿನ ಬಿ.ಇ.ಒ. ಕಾರಣ ಕೇಳಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಲಾಗಿದೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ, ಹಾಗಿದ್ದರೆ ಪ್ರಶಸ್ತಿ ಪತ್ರದಲ್ಲಿ ಇರುವ ಬಿ.ಇ.ಒ ಸಹಿಯನ್ನ ಯಾರು ಮಾಡಿದರು, ಬಿ.ಇ.ಒ ಸಹಿಯನ್ನ ಪೋರ್ಜರಿ ಮಾಡಿ ಪ್ರಶಸ್ತಿ ಪತ್ರ ಹಂಚಲಾಯಿತ, ಒಂದು ವೇಳೆ ಪೊರ್ಜರಿ ಸಹಿ ಮಾಡಿದ್ದೇ ಆದರೆ ಅಂತವರ ವಿರುದ್ದ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಹಾಗು ಹಾಲಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಶಿರಾಕ್ ಶೇಖ್ ಇಂದು ಪತ್ರಿಕಾಗೋಷ್ಠಿಯ ಮೂಲಕ ಒತ್ತಾಯಿಸಿದರು.
ಹೊಸಪೇಟೆ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಶಿರಾಜ್ ಶೇಖ್ ಪಿ.ಕೆ.ಹಳ್ಳಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದ ಪ್ರಶಸ್ತಿ ಪತ್ರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗನ ಭಾವಚಿತ್ರ ಪ್ರಕಟಿಸಿ ಶಿಷ್ಟಾಚಾರ ಉಲ್ಲಂಘಿಸಲಾಗಿತ್ತು, ಈ ವಿಷಯಕ್ಕೆ ಸಂಭಂದಿಸಿದಂತೆ ಮಾತನಾಡಿದ ಶಿರಾಜ್ ಶೇಖ್ ಅಧಿಕಾರಿಗಳು ನೋಟಿಸ್ ಕೊಟ್ಟು ಕೈ ಕಟ್ಟಿಕೊಂಡು ಕುಳಿತರೆ ಆಗಲ್ಲ ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು ಒತ್ತಾಯಿಸಿದರು.
ಅಲ್ಲದೆ ಇತ್ತೀಚೆಗೆ ಕೊಂಡನಾಯಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲ ಸುಧಾರಣಾ ಸಮಿತಿಯ ಎಲ್ಲ ಸದಸ್ಯರ ಮನವಿ ಮೇರೆಗೆ ಶಾಲೆಯ ಐದು ನೂರಕ್ಕೂ ಹೆಚ್ಚು ಮಕ್ಕಳಿಗೆ ಬೆಲ್ಟ್, ಟೈ ಹಾಗೂ ಐ.ಡಿ. ಕಾರ್ಡ್ಗಳನ್ನು ನನ್ನ ಸ್ವಂತ ಹಣದಲ್ಲಿ ಹಂಚಿಕೆ ಮಾಡಲು ಸಿದ್ದಪಡಿಸಲಾಗಿತ್ತು. ಹೀಗೆ ಹಂಚಿಕೆ ಮಾಡಲು ಸಿದ್ದವಾಗಿದ್ದ ವಸ್ತುಗಳಲ್ಲಿ ಎಲ್ಲಿಯೂ ನನ್ನ ಹೆಸರನ್ನ ಬಳಸಿರಲಿಲ್ಲ. ಆದರೆ, ಅವುಗಳನ್ನು ಮಕ್ಕಳಿಗೆ ವಿತರಿಸದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತಡೆ ಹಿಡಿದಿದ್ದಾರೆ.
ಆದರೆ ಸಚಿವ ಆನಂದ್ ಸಿಂಗ್ ಅವರ ಮಗನ ಭಾವಚಿತ್ರ ಇರುವ ನೋಟ್ಬುಕ್ಗಳನ್ನು ಎಲ್ಲಾ ಶಾಲಾ, ಕಾಲೇಜುಗಳಲ್ಲಿ ವಿತರಿಸಲಾಗುತ್ತಿದೆ. ಇದರ ಬಗ್ಗೆಯೂ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಬೇಕು. ಅಧಿಕಾರಿಗಳು ಈ ರೀತಿ ತಾರತಮ್ಯ ಮಾಡುವುದು ಸರಿಯಾ ಎಂದು ಪ್ರಶ್ನಿಸಿದರು.
ಆದರೆ ಈ ವಿಷಯಕ್ಕೆ ಸಂಭಂದಿಸಿದಂತೆ ಎಲ್ಲಿಯೂ ಆನಂದ್ ಸಿಂಗ್ ಅವರನ್ನ ಗುರಿಯಾಗಿಸಿ ಟೀಕೆ ಮಾಡದ ಸಿರಾಜ್ ಶೇಖ್ ಅವರು ಅಧಿಕಾರಿ ವರ್ಗದ ಮೇಲೆ ಹರಿಹಾಯ್ದದ್ದು ಮಾತ್ರ ವಿಚಿತ್ರವಾಗಿತ್ತು.
ಇದೇ 21ನೇ ತಾರೀಕಿನಿಂದ ಪ್ರಶ್ನಿಸು ವಿಜಯನಗರ ಎಂದು ಅಭಿಯಾನ ಪ್ರಾರಂಬಿಸಲಾಗುತ್ತಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಸಂಭಂದ ಹೊಸಪೇಟೆ ನಗರದ 35 ವಾರ್ಡ್ಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಜನಜಾಗೃತಿ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ಕಬ್ಬು ಬೆಳೆಗಾರರ ಸಮಸ್ಯೆಗೆ ಕುರಿತಂತೆ ತಾಲ್ಲೂಕಿನ ಪ್ರಮುಖ ಗ್ರಾಮಗಳಲ್ಲಿ ವಾರಕ್ಕೆ ಒಂದು ದಿನ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲಾಗುತ್ತೆ, ಅದಲ್ಲದೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಬಿಸುವ ಕುರಿತು ಕೂಡ ಅಭಿಪ್ರಾಯ ಸಂಗ್ರಹಿಸಲಾಗುತ್ತೆ,
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.