ಬಳ್ಳಾರಿ….(ಕುರುಗೋಡು) ಸರ್ಕಾರಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ರಿಪೇರಿ ಮಾಡುತ್ತಿದ್ದ ವೇಳೆಯಲ್ಲಿ ಜಾಕ್ ಕುಸಿದ ಪರಿಣಾಮ ಸಾರಿಗೆ ತಾಂತ್ರಿಕ ಸಹಾಯಕ ಸಾವನ್ನಪ್ಪಿದ ಘಟನೆ ಕುರುಗೋಡಿನಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಲ್ಯಾಣ ಕರ್ನಾಕಟ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಸೇರಿದ ಕುರುಗೋಡು ಡಿಪೊದಲ್ಲಿ ಈ ದುರ್ಘಟನೆ ಸಂಭವಿಸಿದ್ದು,ತಾಂತ್ರಿಕ ಸಹಾಯಕ ಟಿ.ಮಂಜುನಾಥ್ 32ವರ್ಷ ಮೃತಪಟ್ಟ ವ್ಯಕ್ತಿ ಆಗಿದ್ದಾನೆ. ಎಂದಿನಂತೆ ಇಂದು ಬೆಳಗ್ಗೆ 8 ಗಂಟೆಯ ಸಂದರ್ಭದಲ್ಲಿ ಎಫ್ 1189 ನಂಬರಿನ ಬಸ್ಸಗೆ ಜಾಕ್ ಅಳವಡಿಸಿ ಬಲೂನ್ ರಿಪೇರಿ ಮಾಡಲು ಮುಂದಾಗಿದ್ದಾರೆ, ಈ ಸಂದರ್ಭದಲ್ಲಿ ಜಾಕ್ ಏಕಾಎಕಿಯಾಗಿ ಸ್ಲಿಪ್ ಆಗಿ ಮಂಜುನಾಥ್ ಅವರ ಎದೆ ಮತ್ತು ಕುತ್ತಿಗೆಯ ಮೇಲೆ ಕುಸಿದಿದೆ. ಸ್ಥಳದಲ್ಲೇ ಇದ್ದ ಕೆಲವು ಮೆಕಾನಿಕ್ಗಳು ಮಂಜುಮಾಥ ಅವರನ್ನ ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ತಿಳಿದು ಸ್ಥಳಕ್ಕೆ ಬೇಟಿನೀಡಿ ನಂತರ ಮಂಜುನಾಥ್ ಅವರನ್ನು ಹೊರಗೆ ತೆಗೆದು ಚಿಕಿತ್ಸೆಗಾಗಿ ಕುರುಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಮಾತ್ರ ಸಿಗಲಿಲ್ಲ, ಕಾರಣ ಮಂಜುನಾಥ್ ಬಸ್ ಎದೆಯ ಮೇಲೆ ಕುಸಿದು ಬೀಳುತಿದ್ದಂತೆ ಸ್ಥಳದಲ್ಲೇ ಮೃತಪಟ್ಟಿದ್ದ, ಮೃತ ಕುಟುಂಭಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು ಕುಟುಂಭದ ತುತ್ತಿನ ಚೀಲ ತುಂಬಿಸುತಿದ್ದ ಮಂಜುನಾಥ್ ಸಾವಿಗೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕುರುಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸಾರಿಗೆ ಸಿಬ್ಬಂದಿಯ ಸಾವಿಗೆ ಇಲ್ಲಿನ ಅಧಿಕಾರಿಗಳು ಯಾವ ರೀತಿಯ ಸಮಜಾಯಿಸಿಕೊಟ್ಟು ಪರಿಹಾರ ನೀಡುತ್ತಾರೆ ಕಾದುನೋಡಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.