ವಿಜಯನಗರ..ಪರಿಶಿಷ್ಟ ಜಾತಿ/ಪರಿಶಿಷ್ಟ ಜನಾಂಗದ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ತಹಸಿಲ್ದಾರ್ ಕಛೇರಿಯ ಮುಂದೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಇರುವ ಹಿನ್ನೆಲೆಯಲ್ಲಿ ಹೊಸಪೇಟೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವ ಶಾಸಕರು ಹೊಸಪೇಟೆ ನಗರಕ್ಕೆ ಬರಲಿದ್ದಾರೆ, ಹಾಗಾಗಿ ಕಳೆದ ಆರು ದಿನಗಳಿಂದ ಹೋರಾಟ ಹಮ್ಮಿಕೊಂಡಿರುವ ಮೀಸಲಾತಿ ಹೆಚ್ಚಳ ಹೋರಾಟಗಾರರು ಇಂದು ತಮ್ಮ ಹೋರಾಟದ ಸ್ವರೂಪವನ್ನ ಬದಲಾಯಿಸಿ ವಿನೂತನ ಪ್ರತಿಭಟನೆಗೆ ಮುನಮದಾಗಿದ್ದಾರೆ.
ಹೊಸಪೇಟೆ ನಗರದ ತಹಸಿಲ್ದಾರ ಕಛೇರಿಯ ಮುಂದೆ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ವಿಶೀಷವಾಗಿ ಮೇದಾರ ಸಮುದಾಯದವರು ಭಾಗವಹಿಸಿ ತಮ್ಮ ಬಿದಿರು ಕಾಯಕ ಪ್ರಾರಂಸಿದ್ದಾರೆ. ಬಿದಿರಿನ ಬುಟ್ಟಿ ತಟ್ಟಿಗಳನ್ನ ಎಣೆಯುವ ಮೂಲಕ ತಮ್ಮ ಹೋರಟದ ಸ್ವರೂಪ ಬದಲಿಸಿ ಗಮನ ಸೆಳೆಯುವಲ್ಲಿ ಮುಂದಾಗಿದ್ದಾರೆ.
ನಿನ್ನೆ ಸಚಿವ ಆನಂದ್ ಸಿಂಗ್ ಮತ್ತು ಶಶಿಕಲಾ ಜೊಲ್ಲೆಯವರು ಪ್ರತಿಭಟನಾ ಸ್ಥಳಕ್ಕೆ ಬೇಟಿ ಮುಖ್ಯಮಂತ್ರಿಗಳು ಹೊಸಪೇಟೆ ನಗರಕ್ಕೆ ಬೇಟಿ ಬೀಡಿದ ಸಂದರ್ಭದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಹೊಸಪೇಟೆ ನಗರಕ್ಕೆ ಅಗೌರವ ತೋರಿಸಬೇಡಿ ಎಂದು ಮನವಿ ಮಾಡಿದ್ದರು.
ಹಾಗಾಗಿ ಬುಟ್ಟಿ ಎಣಿಯುವ ಕಾಯಕ ಮಾಡುವ ಮೂಲಕ ತಮ್ಮ ಹೋರಾಟದ ಸ್ವರೂಪವನ್ನ ಬದಲಿಸಿ ಗಮನ ಸೆಳೆಯಲು ಮುಂದಾಗಿದ್ದಾರೆ.