ವಿಜಯನಗರ..ಚಲನಚಿತ್ರದಲ್ಲಿ ಬಣ್ಣ ಹಚ್ಚಿಕೊಂಡು ನಟನೆ ಮಾಡಿ ಹೀರೊ ಎನಿಸಿಕೊಳ್ಳುವ ಬಹುತೇಕರು ನಿಜ ಜೀವನದಲ್ಲಿ ವಿಲನ್ ಗಳಾಗಿರುತ್ತಾರೆ, ಇನ್ನೂ ಕೆಲವರು ಮಾನವೀಯತೆಯನ್ನೇ ಮರೆತು ವರ್ತಿಸುತ್ತಾರೆ.ಆದರೆ ಇಲ್ಲಿ ನಟನೆಯಲ್ಲಿಯೂ ಹಿರೋ ನಿಜ ಜೀವಮದಲ್ಲೂ ಹೀರೊ ಆಗಿ ಈ ಬಾಗದ ಜನ ಮಾನಸದಲ್ಲಿ ಉಳಿದಿದ್ದಾನೆ ಓರ್ವ ನಟ. ಹೌದು ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ವದಗಿಸಿ ಮಾನವೀಯತೆ ಮೆರೆದ ಚಿತ್ರನಟ ಅಜೆಯ್ ರಾವ್.
ಹೌದು ತಾಜ್ ಮಹಲ್ ಖ್ಯಾತಿಯ ಅಜಯ್ ರಾವ್.ಇತ್ತೀಚೆಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮೈಸೂರಿನಿಂದ ಹೊಸಪೇಟೆ ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿತ್ತು.
ಕಾರಿನಲ್ಲಿದ್ದವರಿಗೆ ಗಾಯಗಳಾಗಿ ಮರಳಾಟ ಮಾಡುತಿದ್ದರು, ಅದೇ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ನಟ ಅಜಯ್ ರಾವ್ ಗಾಯಾಳುಗಳನ್ನ ಕಂಡು ತಮ್ಮ ಕಾರನ್ನ ನಿಲ್ಲಿಸಿ ಕಾರಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಿ ಆರೈಕೆ ಮಾಡಲು ಮುಂದಾಗಿದ್ದಾರೆ,
ಅದೇ ಸಮಯಕ್ಕೆ ಹೆದ್ದಾರಿ ಸಹಾಯಕರ ಗುಂಪು ಕೂಡ ಸ್ಥಳಕ್ಕೆ ಬಂದು ಅಜೆಯ್ ರಾವ್ ಅವರೊಂದಿಗೆ ಗಾಯಾಳುಗಳ ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ರೀತಿಯ ಅಪಘಾತಗಳು ನಡೆದಾಗ ಆಸ್ಥಳಕ್ಕೆ ಬೇಟಿ ಕೊಟ್ಟು ಸಹಾಯಸ್ತ ಚಾಚುವ ಹೆದ್ದಾರಿ ಸಹಾಯಕರ ಕಾರ್ಯವನ್ನ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವ ಅಜೆಯ್ ಹೆದ್ದಾರಿ ಸಹಾಯಕರೊಂದಿಗೆ ಕೆಲವೊತ್ತು ಚರ್ಚೆ ನಡೆಸಿ ಹೆದ್ದಾರಿ ಸಹಾಯಕ ಗೃಪ್ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ನಂತರ ಗ್ರೂಪ್ ನ ಸದಸ್ಯರ ಜೊತೆಗೆ ಪೋಟೋ ಕಿಕ್ಕಿಸಿಕೊಂಡು ಅಲ್ಲಿಂದ ಬೆಂಗಳೂರಿಗೆ ತೆರಳಿದರು, ಇನ್ನು ಹೆದ್ದಾರಿ ಸಹಾಯಕರ ಮುಖ್ಯಸ್ಥರಾದ, ದಯಾನಂದ ಸಜ್ಜನ್, ಶ್ರೀಕಂಠ ಸ್ವಾಮಿ, ಟೀ ಷ್ಟಾಲ್ ಬಾಬು, ಸಕಲಾಪುರದ ಹಟ್ಟಿ ಬಸಣ್ಣ, ಪೆಟ್ರೋಲ್ ಬಂಕ್ ಬೀಮಣ್ಣ ಪಿಎಸೈ ತಿಮ್ಮಣ್ಣ ಚಾಮನೂರು ಏಸ್ ಐ ಮೋಹನ್, ಹೋಂ ಗಾರ್ಡ ,ಪೇದೆ ಬೋಜನಾಯ್ಕ, ಚಂದ್ರಶೇಖರ್, ಲೋಕೇಶ್ ಮಾಷ್ಟರ್ ಸೇರಿದಂತೆ ಇನ್ನೂ ಹಲವರು ಇದ್ದರು.
ಇನ್ನು ಮೂಲತ ಹೊಸಪೇಟೆ ನಗರದವರಾಗಿರುವ ನಟ ಅಜೆಯ್ ರಾವ್ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರ ರಸಿಕರ ಮನಗೆದ್ದಿದ್ದಾರೆ, ಅದರಲ್ಲಿ ಉದಾಹರಣೆ ಎಂದರೆ ಎಕ್ಸಕ್ಯೂಜ್ ಮಿ. ತಾಜಮೆಹಲ್ ಚಿತ್ರಗಳು. ಇಂತಾ ಹೆಸರಾಂತ ನಟ, ತಮ್ಮ ಕಣ್ಣ ಮುಂದೆ ನಡೆದ ಘಟನೆಯನ್ನ ಕಂಡು ಮಮ್ಮಲ ಮರುಗಿ ಗಾಯಾಳುಗಳಿಗೆ ಸಹಾಯಸ್ತ ಚಾಚಿದ್ದು ಇವರ ಹೀರೊಯಿಸಮ್ ಗೆ ಹಿಡಿದ ಕೈಗನ್ನಡಿ.
ವರದಿ…ಸುಬಾನಿ ಪಿಂಜಾರ ವಿಜಯನಗರ.